Gujarat : ಗುಜರಾತ್ (Gujarat) ಮೇಲ್ಮನವಿ ಅಥಾರಿಟಿ ಆಫ್ ಅಡ್ವಾನ್ಸ್ ರೂಲಿಂಗ್ (AAAR), ಗುರುವಾರ AARನ ತೀರ್ಪನ್ನು ಎತ್ತಿಹಿಡಿದಿದೆ ಮತ್ತು ರೆಡಿ-ಟು-ಈಟ್ ಪರೋಟಗಳ (Ready To Eat Parathas) ಮೇಲೆ 18% GST ಅನ್ನು ಅನುಮೋದಿಸಿದೆ.

ಗುಜರಾತ್ ಮೇಲ್ಮನವಿ ಅಥಾರಿಟಿ ಆಫ್ ಅಡ್ವಾನ್ಸ್ ರೂಲಿಂಗ್(AAAR), AAR ನ ತೀರ್ಪನ್ನು ಎತ್ತಿಹಿಡಿಯುವಾಗ, ಪರೋಟಗಳ ಮೇಲೆ 18% GST ಅನ್ವಯಿಸುತ್ತದೆ ಎಂದು ಹೇಳಿದೆ.
ವಿವೇಕ್ ರಂಜನ್ ಮತ್ತು ಮಿಲಿಂದ್ ತೊರವಾನೆ ಅವರ ದ್ವಿಸದಸ್ಯ ಪೀಠವು ಪರೋಟಗಳು ಸಾದಾ ಚಪಾತಿ ಅಥವಾ ರೊಟ್ಟಿಗಿಂತ ಭಿನ್ನವಾಗಿರುತ್ತವೆ ಮತ್ತು ಅವುಗಳನ್ನು ಸಾದಾ ಚಪಾತಿ ಅಥವಾ ರೊಟ್ಟಿ ಎಂದು ಪರಿಗಣಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.
GAAAR ನ ತೀರ್ಪಿನ ಬಗ್ಗೆ ಮಾತನಾಡಿದ ದೆಹಲಿ ಮುಖ್ಯಮಂತ್ರಿ(Delhi ChiefMinister) ಅರವಿಂದ್ ಕೇಜ್ರಿವಾಲ್(Aravind Kejrival),
“ಬ್ರಿಟಿಷರು(British) ಸಹ ಆಹಾರ ಪದಾರ್ಥಗಳ ಮೇಲೆ ಎಂದಿಗೂ ತೆರಿಗೆ ವಿಧಿಸಲಿಲ್ಲ” ಎಂದು ಹೇಳುವ ಮೂಲಕ ಬಿಜಪಿ ಸರ್ಕಾರದ(BJP Government) ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
https://youtu.be/puX7iZTlYkU ಓಲಾ ಊಬರ್ ದರೋಡೆ !
ಇಂದು ದೇಶದಲ್ಲಿ ಹಣದುಬ್ಬರಕ್ಕೆ(Inflation) ದೊಡ್ಡ ಕಾರಣವೆಂದರೆ ಕೇಂದ್ರ ಸರ್ಕಾರವು(Central Government) ವಿಧಿಸುತ್ತಿರುವ ಹೆಚ್ಚಿನ ಜಿಎಸ್‌ಟಿ(GST).
ಇದನ್ನು ಕಡಿಮೆ ಮಾಡಬೇಕು ಮತ್ತು ಜನರು ಹಣದುಬ್ಬರವನ್ನು ತೊಡೆದು ಹಾಕಬೇಕು. ಮೇಲ್ಮನವಿದಾರರು ಮಲಬಾರ್ ಪರೋಟ, ಮಿಶ್ರ ತರಕಾರಿ ಪರೋಟ,
ಈರುಳ್ಳಿ ಪರೋಟ, ಮೇತಿ ಪರೋಟ, ಆಲೂ ಪರೋಟ, ಲಚ್ಚ ಪರೋಟ, ಮೂಲಿ ಪರೋಟ ಮತ್ತು ಸಾದಾ ಪರೋಟ ಸೇರಿದಂತೆ ಎಂಟು ವಿಧದ ರೆಡಿ-ಟು-ಈಟ್ ಫ್ರೋಜನ್ ಪರೋಟಗಳನ್ನು ಮಾರಾಟ ಮಾಡುತ್ತಾರೆ.
ಎಲ್ಲಾ ವಿಧದ ಪರೋಟಗಳ ಪ್ರಮುಖ ಪದಾರ್ಥಗಳು ಗೋಧಿ ಹಿಟ್ಟು ಮತ್ತು ಆಲೂಗಡ್ಡೆ, ತರಕಾರಿಗಳು, ಮೂಲಂಗಿ, ಈರುಳ್ಳಿ, ಮೆಂತ್ಯ ಎಲೆಗಳು ಮುಂತಾದ ಇತರ ಪದಾರ್ಥಗಳಾಗಿವೆ.

ಪರೋಟಗಳನ್ನು ಪ್ಯಾಕ್ ಮಾಡಿದ ಸ್ಥಿತಿಯಲ್ಲಿ ಸರಬರಾಜು ಮಾಡಲಾಗುತ್ತದೆ ಮತ್ತು ಮಾರಾಟ ಮಾಡಲಾಗುತ್ತದೆ.
ಈ ರೆಡಿ-ಟೂ-ಈಟ್ ಪರೋಟಗಳನ್ನು ಫ್ಲಾಟ್ ಪ್ಯಾನ್ ಅಥವಾ ಗ್ರಿಡಲ್ ಅನ್ನು ಬಳಸಿ ಮಧ್ಯಮ ಉರಿಯಲ್ಲಿ ಸುಮಾರು 3-4 ನಿಮಿಷಗಳ ಕಾಲ ಬಿಸಿ ಮಾಡಿದರೆ ಇದು ಸೇವಿಸಲು ಉತ್ತಮವಾಗಿದೆ.
ಗುಜರಾತ್ ಅಥಾರಿಟಿ ಆಫ್ ಅಡ್ವಾನ್ಸ್ ರೂಲಿಂಗ್ (AAAR) ಪರೋಟದ ಅರ್ಹತೆಯ ವರ್ಗೀಕರಣವು HSN 21069099 ನಲ್ಲಿದೆ ಮತ್ತು 18% GST ಅನ್ವಯಿಸುತ್ತದೆ ಎಂದು ತೀರ್ಪು ನೀಡಿದೆ.
GAAR ನ ಮುಂಗಡ ತೀರ್ಪಿನಿಂದ ಮೇಲ್ಮನವಿದಾರರು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.

1905ನೇ ಅಧ್ಯಾಯದ ಶಿರೋನಾಮೆ ಅಡಿಯಲ್ಲಿ ಪರೋಟಗಳನ್ನು ವರ್ಗೀಕರಿಸಲಾಗುವುದಿಲ್ಲ ಎಂದು ಗಮನಿಸುವಲ್ಲಿ GAAR ತಪ್ಪಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ. ಏಕೆಂದರೆ ಅವುಗಳಿಗೆ 3-4 ನಿಮಿಷಗಳ ಅಡುಗೆಯ ಅಗತ್ಯವಿರುತ್ತದೆ ಎಂದು ಹೇಳಲಾಗಿದೆ.
ಅಧ್ಯಾಯ 19 ಹೇಳುವ ಪ್ರಕಾರ, GST ಸುಂಕ ಮತ್ತು HSN ವಿವರಣಾತ್ಮಕ ಟಿಪ್ಪಣಿಗಳಂತೆ, 1905ರ ಶೀರ್ಷಿಕೆಯು ಕೇವಲ ತಿನ್ನಲು ಸಿದ್ಧವಿರುವ ಉತ್ಪನ್ನಗಳನ್ನು ಮಾತ್ರ ಒಳಗೊಂಡಿದೆ ಎಂದು ಉಲ್ಲೇಖಿಸಲಾಗಿಲ್ಲ.
1905ರ ಶೀರ್ಷಿಕೆಯ ಅಡಿಯಲ್ಲಿ ಒಳಗೊಂಡಿರುವ ಪಿಜ್ಜಾ ಬ್ರೆಡ್ ಅನ್ನು ಉಲ್ಲೇಖಿಸಿರುವ ಮೇಲ್ಮನವಿದಾರರು,
ಇದನ್ನೂ ಓದಿ : https://vijayatimes.com/bsy-slams-siddaramaiah/
ರಿಯಾಯಿತಿ ದರದ ಸುಂಕಕ್ಕೆ ಅರ್ಹರಾಗಿದ್ದಾರೆ ಮತ್ತು ಪಿಜ್ಜಾ ಬ್ರೆಡ್, ರಸ್ಕ್ ಮತ್ತು ಟೋಸ್ಟ್ ಮಾಡಿದ ಬ್ರೆಡ್‌ಗೆ 5% GST ಅನ್ವಯಿಸುತ್ತದೆ. ಪಿಜ್ಜಾ ಬ್ರೆಡ್ ಮತ್ತು ಬೇಯಿಸಿದ ಬ್ರೆಡ್ ಅನ್ನು ಸೇವಿಸುವ ಮೊದಲು ಬಿಸಿ ಮತ್ತು ಅಡುಗೆಯ ಅಗತ್ಯವಿರುತ್ತದೆ.
ಶಿರೋನಾಮೆ 1905 ಬಳಕೆಗೆ ಸಿದ್ಧವಾಗಿರುವ ಉತ್ಪನ್ನಗಳಿಗೆ ಸೀಮಿತವಾಗಿಲ್ಲ ಎಂದು ಇದು ಸಾಬೀತುಪಡಿಸುತ್ತದೆ.