ರಾಮಾಯಣದಲ್ಲಿ(Ramayana) ಪ್ರಭು ಶ್ರೀರಾಮ(Sri Ram) ಹೇಳಿರುವುದೆಲ್ಲವೂ ಹಿಂದುತ್ವವೇ ಆಗಿದೆ. ಶ್ರೀರಾಮ ಎಲ್ಲಿಯೂ ದ್ವೇಷ(Grudge) ಮಾಡುವುದನ್ನು ಹೇಳಿಲ್ಲ. ರಾಮಾಯಣ ಮತ್ತು ಭಗವದ್ಗೀತೆಯಲ್ಲಿರುವ(Bhagavadgitha) ಹಿಂದುತ್ವದ ಬಗ್ಗೆ ನನಗೆ ಅಪಾರ ನಂಬಿಕೆ ಇದೆ ಎಂದು ದೆಹಲಿ(Delhi) ಮುಖ್ಯಮಂತ್ರಿ(ChiefMinister) ಅರವಿಂದ್ ಕೇಜ್ರಿವಾಲ್(Aravind Kejrival) ಹೇಳಿದ್ದಾರೆ.

ಖಾಸಗಿ ಮಾದ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಕೆಲವರು ಶ್ರೀರಾಮನ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಆದರೆ ಶ್ರೀರಾಮ ಎಂದಿಗೂ ದ್ವೇಷದ ಬಗ್ಗೆ ಹೇಳಿಲ್ಲ. ಕೆಲವರು ದ್ವೇಷದ ಹೆಸರಿನಲ್ಲಿ ಹತ್ಯೆಗಳನ್ನು ಮಾಡುತ್ತಿದ್ದಾರೆ. ಇದು ಅತ್ಯಂತ ದುರದೃಷ್ಟಕರ ಬೆಳವಣಿಗೆ ಎಂದರು. ಹಿಂದುತ್ವ ಎನ್ನುವುದು ಶ್ರೀರಾಮನ ವಾಕ್ಯಗಳಾಗಿವೆ. ರಾಮಾಯಣದಲ್ಲಿ ಶ್ರೀರಾಮ ಹೇಳಿದ ಎಲ್ಲ ಮಾತುಗಳು ಹಿಂದುತ್ವವೇ ಆಗಿದೆ. ನನಗೆ ರಾಮಾಯಣದಲ್ಲಿ ನಂಬಿಕೆ ಇದೆ. ಹೀಗಾಗಿ ಶ್ರೀರಾಮನ ಹಿಂದುತ್ವವನ್ನು ನಾನು ನಂಬುತ್ತೇನೆ. ಆದರೆ ಶ್ರೀರಾಮ ಎಂದಿಗೂ ದ್ವೇಷದ ಬಗ್ಗೆ ಹೇಳಿಲ್ಲ.
ಇಂದು ರಾಜಕೀಯಕ್ಕಾಗಿ ಧರ್ಮವನ್ನು ಬಳಸಿಕೊಳ್ಳಲಾಗುತ್ತಿದೆ. ಇತ್ತೀಚೆಗೆ ನಡೆದ ಉತ್ತರಪ್ರದೇಶ ಚುನಾವಣೆಯಲ್ಲಿ ಧಾರ್ಮಿಕ ಭಾವನೆಗಳನ್ನೇ ಚುನಾವಣೆಯ ಅಜೆಂಡಾವನ್ನಾಗಿ ಬಳಸಿಕೊಳ್ಳಲಾಯಿತು. ಹೀಗಾಗಿಯೇ ಬಿಜೆಪಿ ಉತ್ತರಪ್ರದೇಶದಲ್ಲಿ ಅಧಿಕಾರ ಹಿಡಿಯಿತು. ಆದರೆ ಪಂಜಾಬ್‍ನಲ್ಲಿ ನಾವು ಅಭಿವೃದ್ದಿ ಮತ್ತು ಭವಿಷ್ಯದ ದೃಷ್ಟಿಕೋನವನ್ನು ಜನರ ಮುಂದಿಟ್ಟು ಚುನಾವಣೆ ಎದುರಿಸಿ ಗೆಲುವು ಸಾಧಿಸಿದ್ದೇವೆ. ಇನ್ನು ಮುಂಬರುವ ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ದತೆ ನಡೆಸಿದ್ದೇವೆ.

ಗುಜರಾತ್‍ನಲ್ಲಿ ನಮ್ಮ ಪಕ್ಷದ ಸಂಘಟನೆ ಉತ್ತಮವಾಗಿದ್ದು, ಮುಂಬರುವ ಚುನಾವಣೆಯಲ್ಲಿ ಅಭಿವೃದ್ದಿಯ ದೃಷ್ಟಿಕೋನದೊಂದಿಗೆ ಜನರ ಬಳಿ ಮತ ಕೇಳುತ್ತೇವೆ. ಧರ್ಮವನ್ನು ನಾವು ಎಂದಿಗೂ ರಾಜಕೀಯಕ್ಕಾಗಿ ಬಳಸಿಕೊಳ್ಳುವುದಿಲ್ಲ ಎಂದಿದ್ದಾರೆ. ಇನ್ನು ಪಂಚರಾಜ್ಯಗಳ ಚುನಾವಣೆಯ ನಂತರ ಅರವಿಂದ್ ಕೇಜ್ರಿವಾಲ್ ಬಿಜೆಪಿ ಮೇಲೆ ಸರಣಿ ವಾಗ್ದಾಳಿ ನಡೆಸುತ್ತಿದ್ದಾರೆ. ಮುಂಬರುವ ಗುಜರಾತ ಚುನಾವಣೆಯ ತಂತ್ರವಾಗಿ ಬಿಜೆಪಿಯ ನೇರ ಎದುರಾಳಿ ಆಮ್ ಆದ್ಮಿ ಪಕ್ಷ ಎಂಬುದನ್ನು ಬಿಂಬಿಸಲು ಎಎಪಿ ನಾಯಕರು ಈ ರೀತಿ ಮಾಡುತ್ತಿದ್ದಾರೆ. ಆದರೆ ಗುಜರಾತನಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೇರಲಿದೆ ಎಂದು ಬಿಜೆಪಿ ಹೇಳಿದೆ.