Visit Channel

ಕೆಲಸ ಕೊಟ್ಟ ಅಂಗಡಿಯನ್ನೆ ದೋಚಿದ ಖದೀಮ…!

WhatsApp Image 2021-02-17 at 1.08.47 PM

ಅವನು ಕೊರೋನಾ ಕಾಲದಲ್ಲಿ ಕೆಲಸ ಕಳೆದುಕೊಂಡು ಮನೆ ಸೇರಿದ್ದ. ಹೀಗೆ ಮನೆ ಸೇರಿದ ಅವನಿಗೆ ಕೆಲಸ ಕೊಟ್ಟಿದ್ದು ಬೆಂಗಳೂರಿನ ಮಾಲೀಕರೊಬ್ಬರು. ಆದ್ರೆ ಕಷ್ಟ ಕಾಲದಲ್ಲಿ ಕೆಲಸ ಕೊಟ್ಟು ಅನ್ನವಿಟ್ಟ ಮಾಲೀಕನಿಗೆ ಅವನು ಮಾಡಿದ್ದೇನು ಗೊತ್ತಾ..
ಮಹಾರಾಷ್ಟ್ರ ಮೂಲದ ಸ್ವಪ್ನಿಲ್ ಘಾಡ್ಗೆ. ಮೂರು ತಿಂಗಳ ಹಿಂದೆ ನಗರತ್ ಪೇಟೆಯ ಹರಿಭಾ ಸಿಂಧೆ ಎನ್ನುವ ಚಿನ್ನದ ವ್ಯಾಪಾರಿ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದ್ದ ಪಾಪಿ ಅದೇ ಅಂಗಡಿಯಲ್ಲಿ ಸುಮಾರು ನಾಲ್ಕು ಕೋಟಿ ಎಂಭತ್ತು ಲಕ್ಷ ಮೌಲ್ಯದ ಚಿನ್ನದ ಗಟ್ಟಿಯನ್ನ ಕದ್ದು ಪರಾರಿಯಾಗಿದ್ದ.

ಹೀಗೆ ಅನ್ನ ಹಾಕಿದ ಮನೆಗೆ ಕನ್ನ ಹಾಕಿದ ಪರಮ ಪಾಪಿಯನ್ನ ವಿಲ್ಸನ್ ಗಾರ್ಡನ್ ಪೊಲೀಸ್ರು ಹಿಡಿದು ತಂದಿದ್ದಾರೆ.
ಮಹಾರಾಷ್ಟ್ರದ ಸೊಲ್ಲಾಪುರ ಮೂಲದ ಸ್ವಪ್ನಿಲ್ ಮೊದಲು ಹೈದರಾಬಾದ್ ನಲ್ಲಿ ಕೆಲಸ ಮಾಡ್ತಾ ಇದ್ದ. ಆದ್ರೆ ಯಾವಾಗ ಕೊರೋನಾ ಬಂದು ದೇಶಕ್ಕೆ ದೇಶವೇ ಲಾಕ್ ಡೌನ್ ಆಯ್ತೋ ಈತ ಕೆಲಸ ಕಳೆದುಕೊಂಡು ಮನೆ ಸೇರಿದ್ದ.

ಹೀಗೆ ಕೆಲಸ ಇಲ್ಲದ ಇವನಿಗೆ ಸಂಬಂಧಿಕರೊಬ್ಬರ ಮೂಲಕ ಬೆಂಗಳೂರಿನ ಹರಿಭಾ ಸಿಂಧೆ ಬಳಿ ಕೆಲಸ ಸಿಕ್ಕಿತ್ತು. ಆ ಮೂಲಕ ನಿರುದ್ಯೋಗಿಯಾಗಿದ್ದ ಸ್ವಪ್ನಿಲ್ ಗೆ ಊಟಕ್ಕೆ ಒಂದು ದಾರಿಯಾಗಿತ್ತು. ಇದಕ್ಕೆ ತೃಪ್ತಿಯಾಗದ ಪಾಪಿ ಊಟ ಕೊಟ್ಟ ಮಾಲೀಕನ ಅಂಗಡಿಯನ್ನೆ ದೋಚಿ ಪರಾರಿಯಾಗಿದ್ದ. ಅದು ಬರೋಬ್ಬರಿ 12 ಕೆಜಿ ಏಳನೂರು ಗ್ರಾಂ ಚಿನ್ನದ ಗಟ್ಟಿ ಕದ್ದು ಸ್ವಂತ ಊರ ಕಡೆ ತೆರಳಿದ್ದ.

ಕಳ್ಳತನ ಆಗುತ್ತಿದ್ದಂತೆ ಮಾಲೀಕರು ವಿಲ್ಸನ್ ಗಾರ್ಡನ್ ಪೊಲೀಸ್ರಿಗೆ ಮಾಹಿತಿ ನೀಡಿದ್ದರು. ಪ್ರಕರಣ ನಡೆದ ಸ್ಥಳ ಇವ್ರ ವ್ಯಾಪ್ತಿಗೆ ಬಾರದಿದ್ದರು ತಕ್ಷಣ ಕಾರ್ಯಪ್ರವೃತ್ತರಾದ ಇನ್ಸ್ಪೆಕ್ಟರ್ ಶಂಕರಾಚಾರಿ ಅಂಡ್ ಟೀಮ್ ಆರೋಪಿಯನ್ನ ಬಂಧಿಸಿ ಚಿನ್ನ ರಿಕವರಿ ಮಾಡಿ ಪ್ರಕರಣವನ್ನ ಹಲಸೂರು ಗೇಟ್ ಠಾಣೆಗೆ ವರ್ಗಾಯಿಸಿದ್ದಾರೆ.

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.