ನವದೆಹಲಿ, ಡಿ. 19: ಈ ಬಾರಿಯ ಕೇಂದ್ರ ಬಜೆಟ್‌ನ್ನು ಹಿಂದೆಂದಿಗಿಂತಲೂ ಸಂಪೂರ್ಣವಾಗಿ ವಿಭಿನ್ನವಾದ ರೀತಿಯಲ್ಲಿ ಮಂಡನೆ ಮಾಡಲಾಗುತ್ತದೆ ಎಂದು ಕೆಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಸಿಐಐ ಪಾಲುದಾರಿಕೆ ಶೃಂಗಸಭೆ 2020ರಲ್ಲಿ ಮಾತನಾಡಿದ ಅವರು, ಭಾರತದ ನೂರು ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಾಂಕ್ರಾಮಿಕ ರೋಗದ ನಂತರ ಬಜೆಟ್ ಮಂಡನೆಗೆ ಸಿದ್ಧವಾಗುತ್ತಿದ್ದು, ಇಲ್ಲಿಯವರೆಗೂ ಇದನ್ನು ನೋಡಲಿಲ್ಲ. ಈ ಬಾರಿಯ ಬಜೆಟ್ ಮಂಡನೆಗೆ ದೇಶದ ಸಾರ್ಜನಿಕರ ಸಲಹೆಗಳು ಮತ್ತು ಸೂಚನೆಗಳು ಅಗತ್ಯವಾಗಿದ್ದು, ಬಜೆಟ್ ಮಂಡನೆ ಅನುಕೂಲವಾಗುತ್ತದೆ ಎಂದು ತಿಳಿಸಿದರು. ಬಜೆಟ್‍ನಲ್ಲಿ ಮೂಲಸೌಕರ್ಯ ನಿಧಿಯನ್ನು ನೀಡುವುದರ ಜತೆಗೆ ಕಟ್ಟಡಗಳು ಹಾಗೂ ಆಸ್ಪತ್ರೆಗಳಿಗೆ ಖಾಸಗಿ ಸಹಭಾಗಿತ್ವವನ್ನು ಒದಗಿಸುವುದು ಮುಖ್ಯವಾಗಿರುತ್ತದೆ ಎಂದು ವಿವರಿಸಿದರು.
2021-22ರ ಕೇಂದ್ರ ಬಜೆಟ್‌ನ್ನು 2021ರ ಫೆಬ್ರವರಿ 1ರಂದು ಸಂಸತ್ತಿನಲ್ಲಿ ಮಂಡಿಸಲಾಗುತ್ತದೆ. ಒಂದು ಕಡೆ ಹೆಚ್ಚು ಮೂಲ; ಸೌಕರ್ಯ ನಿಧಿಯನ್ನು ಒದಗಿಸುವುದರ ಜತೆಗೆ, ಕಟ್ಟಡಗಳು ಮತ್ತು ಆಸ್ಪತ್ರೆಗಳಿಗೆ ಖಾಸಗಿ ಸಹಭಾಗಿತ್ವವನ್ನು ತರುವುದು ಮಾತ್ರವಲ್ಲದೆ, ಈ ಆಸ್ಪತ್ರೆಗಳನ್ನು ನಡೆಸಲು ಸಾಮರ್ಥ್ಯವನ್ನು ಒದಗಿಸುವುದು ಎಂದು ಹೇಳಿದ್ದಾರೆ.