ತಿರುವನಂತಪುರಂ : ಕೇರಳದ(Kerala) ಪಾಲಕ್ಕಾಡ್‌ನಲ್ಲಿ(Palakkad) ಪಕ್ಕದ ಮನೆಯವರ ಸಾಕು ನಾಯಿ ಕಚ್ಚಿದಕ್ಕೆ ಯುವತಿ ಲಸಿಕೆ ಪಡೆದರು, ರೇಬಿಸ್‌ನಿಂದ(Rabies) ಸಾವನ್ನಪ್ಪಿದ ಘಟನೆ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ತನಿಖೆ ನಡೆಸಿ, ವರದಿ ನೀಡುವಂತೆ ಕೇರಳ ಆರೋಗ್ಯ ಇಲಾಖೆ(Kerala Health Department) ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿತ್ತು. ಈ ಕುರಿತು ತನಿಖೆ ನಡೆಸಿದ ತಜ್ಞರು ವರದಿಯನ್ನು ನೀಡಿದ್ದು, ವರದಿಯಲ್ಲಿ ಭಯಾನಕ ಸಂಗತಿ ಬಯಲಾಗಿದೆ.

ತಜ್ಞರ ಪ್ರಕಾರ, ಮೃತಪಟ್ಟ ಯುವತಿಗೆ ಗುಣಮಟ್ಟದ ಲಸಿಕೆಯನ್ನೇ ನೀಡಲಾಗಿದೆ. ವೈದ್ಯರು ಲಸಿಕೆ ನೀಡುವುದರಲ್ಲಿ ಯಾವುದೇ ಎಡವಟ್ಟು ಮಾಡಿಲ್ಲ. ಸೂಕ್ತ ಸಮಯದಲ್ಲಿ ಲಸಿಕೆ ನೀಡಲಾಗಿದೆ. ಆದರೆ , ನಾಯಿ ಜೋರಾಗಿ ಕಚ್ಚಿದ್ದರಿಂದ ಉಂಟಾದ ಆಳವಾದ ಗಾಯವೇ ರೇಬಿಸ್‌ಗೆ ಕಾರಣ ಎಂದು ತಜ್ಞರು ತಿಳಿಸಿದ್ದಾರೆ.
ಘಟನೆ ವಿವರ : ಕೇರಳದ ಪಾಲಕ್ಕಾಡ್‌ನ ಸುಗುನನ್ ಮತ್ತು ಸಿಂಧು ದಂಪತಿಯ ಪುತ್ರಿ ಶ್ರೀಲಕ್ಷ್ಮಿ (18) ಮೇ 30ರಂದು ಮುಂಜಾನೆ ಕಾಲೇಜಿಗೆ ಹೋಗುವಾಗ ಪಕ್ಕದ ಮನೆಯ ನಾಯಿ, ಆಕೆಯ ಕೈಬೆರಳುಗಳಿಗೆ ಕಚ್ಚಿತ್ತು. ಆಗ ಶ್ರೀಲಕ್ಷ್ಮೀ ಎಲ್ಲ ರೀತಿಯ ವೈದ್ಯಕೀಯ ಚಿಕಿತ್ಸೆಯನ್ನು ಪಡೆದುಕೊಂಡಿದ್ದಳು. ಲಸಿಕೆಯನ್ನು ಹಾಕಿಸಿಕೊಂಡಿದ್ದಳು. ಆದರೆ ಕೆಲವು ದಿನಗಳ ಬಳಿಕ ಜ್ವರ ಕಾಣಿಸಿಕೊಂಡಿತು. ಪರೀಕ್ಷಿಸಿದಾಗ ರೇಬೀಸ್ ಕಾಯಿಲೆ ಕಂಡುಬಂದಿತು.

ಯಾವುದೇ ರೀತಿಯ ಚಿಕಿತ್ಸೆ ನೀಡಿದರು, ಚಿಕಿತ್ಸೆ ಫಲಕಾರಿಯಾಗದೇ ಯುವತಿ ಸಾವನ್ನಪ್ಪಿದ್ದಾಳೆ. ನಾಯಿಯ ಕಡಿತ ಆಳವಾಗಿದ್ದರಿಂದ ಶ್ರೀಲಕ್ಷ್ಮೀ ರೇಬಿಸ್ನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಜಗತ್ತಿನ ಯಾವುದೇ ದೇಶದಲ್ಲಿ ಇಂದಿಗೂ ಕೂಡಾ ರೇಬಿಸ್ ಕಾಯಿಲೆಗೆ ಔಷಧಿ ಲಭ್ಯವಿಲ್ಲ.