ಕೇರಳವು(Kerala) ಈಗ ತನ್ನದೇ ಆದ ಇಂಟರ್ನೆಟ್(Internet) ಸೇವೆಯನ್ನು ಹೊಂದಿರುವ ದೇಶದ ಮೊದಲ ಮತ್ತು ಏಕೈಕ ರಾಜ್ಯವಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗುರುವಾರ ಹೇಳಿದ್ದಾರೆ. ಕೇರಳ ಫೈಬರ್ ಆಪ್ಟಿಕ್ ನೆಟ್‌ವರ್ಕ್ ಲಿಮಿಟೆಡ್(Fiber Optic Network Limited), ರಾಜ್ಯದ ಪ್ರತಿಯೊಬ್ಬರಿಗೂ ಇಂಟರ್ನೆಟ್ ಅನ್ನು ಒದಗಿಸಲು ಮಾಡುತ್ತಿರುವ ಸರ್ಕಾರದ ಮಹತ್ವಾಕಾಂಕ್ಷೆಯ ಐಟಿ(IT) ಮೂಲಸೌಕರ್ಯ ಯೋಜನೆಯಾಗಿದ್ದು,
ದೂರಸಂಪರ್ಕ ಇಲಾಖೆಯಿಂದ ಇಂಟರ್ನೆಟ್ ಸೇವಾ ಪೂರೈಕೆದಾರ (ಐಎಸ್‌ಪಿ) ಪರವಾನಗಿಯನ್ನು ಸ್ವೀಕರಿಸಿದ ಹಿನ್ನೆಲೆಯಲ್ಲಿ ಈ ಪ್ರಕಟಣೆ ಅಧಿಕೃತವಾಗಿ ಹೊರಬಿದ್ದಿದೆ. ಇದರೊಂದಿಗೆ ಸಮಾಜದಲ್ಲಿನ ಡಿಜಿಟಲ್ ವಿಭಜನೆಯನ್ನು ನಿವಾರಿಸಲು ಉದ್ದೇಶಿಸಿರುವ ಯೋಜನೆಯು ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಬಹುದು ಎಂದು ಸಿಎಂ ಹೇಳಿದ್ದಾರೆ. “ಕೇರಳವು ತನ್ನದೇ ಆದ ಇಂಟರ್ನೆಟ್ ಸೇವೆಯನ್ನು ಹೊಂದಿರುವ ದೇಶದ ಏಕೈಕ ರಾಜ್ಯವಾಗಿದೆ. ಕೇರಳ ಫೈಬರ್ ಆಪ್ಟಿಕ್ ನೆಟ್‌ವರ್ಕ್ ಲಿಮಿಟೆಡ್ @DoT_India ನಿಂದ ISP ಪರವಾನಗಿಯನ್ನು ಪಡೆದುಕೊಂಡಿದೆ.
ಈಗ, ನಮ್ಮ ಪ್ರತಿಷ್ಠಿತ #KFON ಯೋಜನೆಯು ಇಂಟರ್ನೆಟ್ ಅನ್ನು ಮೂಲಭೂತ ಹಕ್ಕಾಗಿ ಒದಗಿಸುವ ತನ್ನ ಕಾರ್ಯಾಚರಣೆಯನ್ನು ಕಿಕ್‌ಸ್ಟಾರ್ಟ್ ಮಾಡಬಹುದು ನಮ್ಮ ಜನರು ಎಂದು ವಿಜಯನ್ ಟ್ವೀಟ್ ಮಾಡಿ ತಿಳಿಸಿದ್ದಾರೆ. KFON ಯೋಜನೆಯು BPL ಕುಟುಂಬಗಳಿಗೆ ಮತ್ತು 30,000 ಸರ್ಕಾರಿ ಕಚೇರಿಗಳಿಗೆ ಉಚಿತ ಇಂಟರ್ನೆಟ್ ಒದಗಿಸಲು ಕಲ್ಪಿಸಲಾಗಿದೆ ಎನ್ನಲಾಗಿದೆ. ಹಿಂದಿನ ಸರ್ಕಾರವು 2019 ರಲ್ಲಿ ಇಂಟರ್ನೆಟ್ ಸಂಪರ್ಕವನ್ನು ಮೂಲಭೂತ ಹಕ್ಕು ಎಂದು ಘೋಷಿಸಿತು ಮತ್ತು ರೂ 1,548 ಕೋಟಿ KFON ಯೋಜನೆಯನ್ನು ಪ್ರಾರಂಭಿಸಿತ್ತು ಎಂದು ಹೇಳಲಾಗಿದೆ.