ರಾಕಿಂಗ್ ಸ್ಟಾರ್(Rocking Star) ಯಶ್(Yash) ಅಭಿನಯದ ಕೆಜಿಎಫ್ 2(KGF 2) ಏಪ್ರಿಲ್‌ನಲ್ಲಿ ಥಿಯೇಟರ್‌ಗಳಿಗೆ ಬಂದಾಗಿನಿಂದಲೂ ದಾಖಲೆಯ ಮೇಲೆ ದಾಖಲೆಯನ್ನು ಮುರಿಯುತ್ತಿದೆ.

ಕೆಜಿಎಫ್ 2 ಹಿಂದಿ ಆವೃತ್ತಿಯು ಇಂದು ಮೇ 6 ರಂದು ಭಾರತದಲ್ಲಿ 400 ಕೋಟಿ ರೂಪಾಯಿಗಳನ್ನು ದಾಟಲಿದೆ. ಇದು ಕನ್ನಡ ಚಿತ್ರರಂಗದ ದೊಡ್ಡ ಸಾಧನೆಯಾಗಲಿದೆ. ಈ ಹಿಂದೆ ಪ್ರಭಾಸ್(Prabhas) ಮತ್ತು ರಾಣಾ ದಗ್ಗುಬಾಟಿ(Rana Dhaggubatti) ಅಭಿನಯದ ಬಾಹುಬಲಿ : ದಿ ಕನ್‌ಕ್ಲೂಷನ್, ಎಸ್‌ಎಸ್ ರಾಜಮೌಳಿ ನಿರ್ದೇಶನದ ಈ ಸಿನಿಮಾ ಮೈಲಿಗಲ್ಲು ಸಾಧಿಸಿದ ಏಕೈಕ ಚಿತ್ರವಾಗಿತ್ತು!
ಸದ್ಯ ಈಗ ನಿರ್ದೇಶಕ ಪ್ರಶಾಂತ್ ನೀಲ್(Prashanth Neel) ಅವರ ನಿರ್ದೇಶನದ ಕೆಜಿಎಫ್ 2 ಏಪ್ರಿಲ್ 14 ರಂದು ಬಹು ಭಾಷೆಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ರಾರಾಜಿಸುವ ಮೂಲಕ 400 ಕೋಟಿ ಮೈಲಿಗಲ್ಲು ದಾಖಲಿಸಲಿದೆ. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಅದ್ಭುತವಾದ ಯಶಸ್ಸನ್ನು ಆನಂದಿಸುತ್ತಿದೆ. ಒಂದರ ನಂತರ ಒಂದರಂತೆ ಹಿಂದಿನ ದಾಖಲೆಗಳೆಲ್ಲಾ ಛಿದ್ರಗೊಳಿಸುತ್ತಿದೆ ಕೆಜಿಎಫ್ 2.

ಮೇ 5 ರಂದು, ಕೆಜಿಎಫ್ 2 ಅಮೀರ್ ಖಾನ್ ಅವರ ದಂಗಲ್ ಅನ್ನು ಸಿಂಹಾಸನದಿಂದ ಕೆಳಗಿಳಿಸಿ ಎರಡನೇ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಲನಚಿತ್ರವಾಯಿತು. ಈಗ, ಚಿತ್ರ (ಹಿಂದಿ ಆವೃತ್ತಿ) ಭಾರತದಲ್ಲಿ 400 ಕೋಟಿ ರುಪಾಯಿ ದಾಟಲು ಸಿದ್ಧವಾಗಿದೆ. ಭಾರತದಲ್ಲಿ ಈ ಹಿಂದೆ ಸಾಧನೆ ಮಾಡಿದ ಏಕೈಕ ಚಿತ್ರ ಬಾಹುಬಲಿ: ದಿ ಕನ್‌ಕ್ಲೂಷನ್! ಈಗ ಈ ದಾಖಲೆಯನ್ನು ಮುರಿದು ಮುನ್ನುಗ್ಗಲು ಕೆಜಿಎಫ್ ಸಜ್ಜಾಗಿರುವುದು ಖುಷಿಯ ಸಂಗತಿಯಾಗಿದೆ.