ಲಕ್ನೋ, ಫೆ. 09: ಖಲಿಸ್ತಾನ್ ಭಯೋತ್ಪಾದನೆ ಕೃತ್ಯ ನಡೆಸಲು ವಿದೇಶದಿಂದ ಕಾರ್ಯಾಚರಣೆ ನಡೆಸುತ್ತಿರುವ ಪ್ರಮುಖ ಆರೋಪಿಗಳಾದ ಪರಮ್ಜಿತ್ ಸಿಂಗ್ ಪಮ್ಮಾ ಮತ್ತು ಮಲ್ತಾನಿ ಸಿಂಗ್ ಜತೆ ಜಗದೇವ್ ಸಿಂಗ್ ಸಂಬಂಧ ಹೊಂದಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
ಪರಮ್ಜಿತ್ ಯುಕೆಯಲ್ಲಿ ಹಾಗೂ ಮಲ್ತಾನಿ ಜರ್ಮನಿಯಲ್ಲಿ ವಾಸಿಸುತ್ತಿದ್ದು ಅಲ್ಲಿಂದಲೇ ಪಂಜಾಬ್ನಲ್ಲಿ ರಾಷ್ಟ್ರದ್ರೋಹಿ ಕಾರ್ಯ ಗಳನ್ನು ನಡೆಸುತ್ತಿದ್ದಾರೆ . ಖಲಿಸ್ಥಾನ್ ಕಾರ್ಯ ಚಟುವಟಿಕೆಗಳಲ್ಲಿ ಭಾಗಿಯಾಗಿ ಶಾಂತಿ, ಸೌಹಾರ್ದತೆಗೆ ಧಕ್ಕೆ ತಂದು ಧಾರ್ಮಿಕ ನೆಮ್ಮದಿ ಕೆಡಿಸುವ ಮೂಲಕ ಪಂಜಾಬ್ಬಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಪಂಜಾಬ್ ಮತ್ತು ಉತ್ತರ ಪ್ರದೇಶದ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಇಂದು ಖಲಿಸ್ತಾನ ಪರ ಕಾರ್ಯನಿರ್ವಹಿಸುತ್ತಿದ್ದ ಉಗ್ರನನ್ನು ಬಂಧಿಸಿದ್ದಾರೆ. ಲಕ್ನೋದ ವಿಕಾಸ್ನಗರ ಪ್ರದೇಶದಲ್ಲಿ ಜಗದೇವ್ ಸಿಂಗ್ ಅಲಿಯಾಸ್ ಜಗ್ಗಾ ಎಂಬ ಖಲಿಸ್ತಾನ್ ಭಯೋತ್ಪಾದಕನನ್ನು ಬಂಧಿಸಲಾಗಿದ್ದು, ಈತ ಖಲಿಸ್ತಾನ ಪರ ಕಾರ್ಯ ನಿರ್ವಹಿಸುತ್ತಿದ್ದ ಎಂದು ತಿಳಿದುಬಂದಿದೆ.