Bengaluru: ವೈಟ್ ಬೋರ್ಡ್(White Board) ಕಾರು(Car) ಮಾಲೀಕರ ಬಿಪಿಎಲ್ ಕಾರ್ಡ್(KHMuniyappa about BPL card) ರದ್ದು ಮಾಡುವುದಾಗಿ ಆಹಾರ ಮತ್ತು ನಾಗರಿಕ ಪೂರೈಕೆ
ಸಚಿವ ಕೆ.ಎಚ್.ಮುನಿಯಪ್ಪ(K.H Muniyappa) ಘೋಷಿಸಿದ್ದಾರೆ. ಇದೇ ವೇಳೆ ದುಡಿಮೆಗಾಗಿ ಕಾರು ತೆಗೆದುಕೊಂಡವರ ಬಿಪಿಎಲ್ ಕಾರ್ಡ್ ಅನ್ನು ಸರ್ಕಾರ ರದ್ದು ಮಾಡುವುದಿಲ್ಲ ಎಂದು ಸಚಿವರು
ಸ್ಪಷ್ಟಪಡಿಸಿದರು.ವಿಧಾನಸೌಧದಲ್ಲಿ (Vidhana Soudha) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸೆಪ್ಟೆಂಬರ್(September) ತಿಂಗಳಿನಿಂದ ಬಿಪಿಎಲ್ ಕಾರ್ಡುದಾರರಿಗೆ 10ಕೆಜಿ ಅಕ್ಕಿ ನೀಡಲು
ನಿರ್ಧರಿಸಲಾಗಿದೆ. ಜನರಿಗೆ ಹಣ ಸಿಗುತ್ತದೆ, ಸದ್ಯ ಜನರಿಗೆ 5 ಕೆಜಿ ಅಕ್ಕಿ ಬದಲಿಗೆ ಹಣವನ್ನು ಅವರ ಖಾತೆಗೆ ಸರ್ಕಾರ ಪಾವತಿ ಮಾಡುತ್ತಿದೆ , ಆದರೂ ಅದನ್ನು ದೀರ್ಘಕಾಲದವರೆಗೆ ಪಾವತಿಸಲು ಸಾಧ್ಯವಾಗುವುದಿಲ್ಲ.
ಹಾಗಾಗಿ ಸೆಪ್ಟೆಂಬರ್ ನಿಂದ 10 ಕೆಜಿ ಅಕ್ಕಿ ನೀಡಲು ನಿರ್ಧರಿಸಲಾಗಿದೆ.ಒಂದು ವೇಳೆ ಸರ್ಕಾರದಿಂದ ಅಕ್ಕಿ ಕೊಳ್ಳಲು ಆಗದಿದ್ದರೆ ಆ ಸಂದರ್ಭದಲ್ಲಿ ಮತ್ತೆ ಖಾತೆಗೆ ಹಣ ಹಾಕುತ್ತೇವೆ ಎಂದರು.

ಆಂಧ್ರಪ್ರದೇಶ(Andhra Pradesh) ಮತ್ತು ತೆಲಂಗಾಣ(Telangana) ರಾಜ್ಯದೊಂದಿಗೆ Olಕಿ ವಿಚಾರವಾಗಿ ಈಗಾಗಲೇ ಮಾತುಕತೆ ನಡೆಯುತ್ತಿದ್ದು, ಎರಡೂ ರಾಜ್ಯಗಳು ಅಕ್ಕಿ ನೀಡಲು ಮುಂದಾಗಿವೆ.
ಇದರ ಜೊತೆಗೆ ಅಕ್ಕಿಯ ಜೊತೆಗೆ ರಾಗಿ ಮತ್ತು ಜೋಳವನ್ನು ವಿತರಿಸುವ ಆಲೋಚನೆ ಇದೆ. 2023-24ರಲ್ಲಿ 8 ಲಕ್ಷ ಟನ್ ರಾಗಿ ಮತ್ತು 3 ಲಕ್ಷ ಟನ್ ಜೋಳವನ್ನು ಖರೀದಿಸಲಾಗುವುದು ಎಂದು
ಕೆ.ಎಚ್.ಮುನಿಯಪ್ಪ (KHMuniyappa about BPL card) ಹೇಳಿದರು.
ಇದನ್ನೂ ಓದಿ : ಮಳೆ ಬೆಳೆ ಹಾನಿಗೆ ಸರ್ಕಾರದಿಂದ 28,000 ಪರಿಹಾರ, ಇದನ್ನು ಪಡೆಯೋದು ಹೇಗೆ? ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಇಲ್ಲಿದೆ ಮಾಹಿತಿ
ಅನ್ನಭಾಗ್ಯ (Anna Bhagya) ಯೋಜನೆ ಜುಲೈನಲ್ಲಿ (July) ಆರಂಭವಾಗಿದ್ದು, ಎಲ್ಲ ಫಲಾನುಭವಿಗಳ ಖಾತೆಗೆ ಈಗಾಗಲೇ ಹಣ ಜಮಾ ಮಾಡಲಾಗಿದೆ. ಅಂತ್ಯೋದಯ (Anthyodaya) ಪಡಿತರ ಚೀಟಿಗೆ
35 ಕೆಜಿ ಅಕ್ಕಿ ,ಮತ್ತು ಬಿಪಿಎಲ್ ಕಾರ್ಡ್ ಹೊಂದಿದ ಫಲಾನುಭವಿಗಳಿಗೆ 5 ಕೆಜಿ ಅಕ್ಕಿ ಜೊತೆಗೆ ಹೆಚ್ಚುವರಿಯಾಗಿ 5 ಕೆಜಿ ಅಕ್ಕಿ ನೀಡುವುದು ಕಾಂಗ್ರೆಸ್ (Congress) ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯ
ಉದ್ದೇಶವಾಗಿತ್ತು. ಆದರೆ ಅಕ್ಕಿ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿತ್ತು ಎಂದರು.

ಈಗಾಗಲೇ 566 ಕೋಟಿ ರೂ ಹಣ ಫಲಾನುಭವಿಗಳ ಖಾತೆಗೆ ವರ್ಗಾವಣೆ
ಈ ಹಿನ್ನೆಲೆ ಪ್ರತಿ ಕೆಜಿಗೆ 34 ರೂ ನಂತೆ ಒಬ್ಬ ಫಲಾನುಭವಿಗೆ 170 ರೂ.ಬಿಪಿಎಲ್ ಕಾರ್ಡ್ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ. ರಾಜ್ಯದಲ್ಲಿ ಒಟ್ಟು 1.28 ಕೋಟಿ ಪಡಿತರ ಚೀಟಿ ಕುಟುಂಬಗಳು
ಇವೆ ಇದರಲ್ಲಿ ಒಟ್ಟು 442 ಕೋಟಿ ಫಲಾನುಭವಿಗಳಿದ್ದಾರೆ. ಇಲ್ಲಿವರೆಗೆ 566.00 ಕೋಟಿ ರೂ. ಹಣವನ್ನು 1 ಕೋಟಿ ಕುಟುಂಬದ ಮುಖ್ಯಸ್ಥರ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಇದರಿಂದ ಸರಿ ಸುಮಾರು
3.50 ಕೋಟಿ ಫಲಾನುಭವಿಗಳಿಗೆ ಅನುಕೂಲವಾಗಿದೆ. 1 ಕೋಟಿ ಕುಟುಂಬಗಳಿಗೆ ನೇರ ನಗದು ವರ್ಗಾವಣೆಯನ್ನು ಯೋಜನೆಗೆ ಚಾಲನೆ ದೊರೆತು 25 ದಿನಗಳ ಅವಧಿಯಲ್ಲಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ : ನಂದಿನಿ ಹಾಲು ಖರೀದಿ ದರ ಗ್ರಾಹಕರಿಗೆ 3 ರೂ ಏರಿಕೆ ; ಆದರೆ ಹೈನುಗಾರರಿಗೆ 50 ಪೈಸೆ ಮಾತ್ರ ಲಾಭ!
ಇನ್ನು, ಕೆಲವು ಅಗತ್ಯ ಕ್ರಮಗಳನ್ನು ಹೊಸ ಪಡಿತರ ಚೀಟಿ ವಿತರಣೆಗೆ ಕೈಗೊಳ್ಳಲಾಗುವುದು. ರೇಷನ್ ಕಾರ್ಡ್ ರದ್ಧತಿ, ಸೇರ್ಪಡೆಗೆ ಮತ್ತು ತಿದ್ದುಪಡಿಗೆ ಅವಕಾಶ ನೀಡಲಾಗುವುದು. ಬಾಕಿ ಇರುವ 2,95,986 ಪಡಿತರ
ಚೀಟಿ ವಿಲೇವಾರಿಗೆ ಈ ಹಿನ್ನೆಲೆಯಲ್ಲಿ ಜುಲೈ ಅಂತ್ಯಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಕೆಎಚ್ ಮುನಿಯಪ್ಪ ಹೇಳಿದರು.
ರಶ್ಮಿತಾ ಅನೀಶ್