New delhi: ದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ (Indira Gandhi Indoor Stadium) ನಡೆದ ಖೋ – ಖೋ ವಿಶ್ವಕಪ್ (Kho – Kho World Cup) ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಭಾರತದ ಮಹಿಳಾ (Women) ಹಾಗೂ ಪುರುಷರ (Men’s) ತಂಡಗಳು ಚೊಚ್ಚಲ ಟ್ರೋಫಿಗಳನ್ನು (Debut trophies) ಮುಡಿಗೇರಿಸಿಕೊಂಡಿವೆ.ಭಾನುವಾರ ಮೊದಲು ನಡೆದ ಮಹಿಳೆಯರ ಫೈನಲ್ ಪಂದ್ಯದಲ್ಲಿ (women’s final) ನೇಪಾಳ ತಂಡವನ್ನು ಮಣಿಸಿದ ಭಾರತ ಟ್ರೋಫಿಯನ್ನು ಎತ್ತಿ ಹಿಡಿಯಿತು. ನಂತರ ನಡೆದ ಪುರುಷರ ಫೈನಲ್ ಪಂದ್ಯದಲ್ಲಿಯೂ ಕೂಡ ಭಾರತದ ಪುರುಷರ ತಂಡ ನೇಪಾಳ ತಂಡವನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡಿತು.

ಪ್ರಿಯಾಂಕಾ ಇಂಗ್ಲೆ ನಾಯಕತ್ವದ ಮಹಿಳಾ ತಂಡ ನೇಪಾಳವನ್ನು 78-40 ಅಂಕಗಳ ಅಂತರದಿಂದ ಸೋಲಿಸಿ ಚಾಂಪಿಯನ್ (Champion) ಆಗಿ ಹೊರಹೊಮ್ಮಿತು. ಭಾರತ ಚೇಸ್ ಮತ್ತು ಡಿಫೆನ್ಸ್ (Chase and Defense) ಎರಡರಲ್ಲೂ ಪ್ರಾಬಲ್ಯ ಮೆರೆಯಿತು.ಟರ್ನ್-1ರಲ್ಲಿ ದಾಳಿಗಿಳಿದ ವುಮೆನ್ ಇನ್ ಬ್ಲೂ ತಂಡ (Women in Blue team) ರಕ್ಷಣಾ ವಿಭಾಗದಲ್ಲಿ ನೇಪಾಳದ ಆಟಗಾರ್ತಿಯರು ಮಾಡಿದ ತಪ್ಪುಗಳ ಸಂಪೂರ್ಣ ಲಾಭ ಪಡೆದು, 34-0 ಅಂತರದ ಬೃಹತ್ ಮುನ್ನಡೆ ಸಾಧಿಸಿತು. ಎರಡನೇ ಟರ್ನ್ನಲ್ಲಿ ನೇಪಾಳ ತಂಡ ಪ್ರತಿರೋಧ ನೀಡಿತ್ತಾದರೂ ಭಾರತದ ಡಿಫೆಂಡರ್ಗಳು ಸುಲಭವಾಗಿ ಅಂಕ ಗಳಿಸಲು ಅವಕಾಶ ನೀಡಲಿಲ್ಲ. ಹೀಗಾಗಿ, ಎರಡನೇ ಟರ್ನ್ 35-24 ಅಂಕಗಳ ಮುನ್ನಡೆ ಸಾಧಿಸಿತು. ಮೂರನೇ ಟರ್ನ್ನಲ್ಲಿ ಮತ್ತೊಮ್ಮೆ ದಾಳಿಗಿಳಿದ ಟೀಂ ಇಂಡಿಯಾ 49 ಅಂಕಗಳ ಭಾರಿ ಮುನ್ನಡೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು.\

ಇನ್ನು ಚೊಚ್ಚಲ ಖೋ ಖೋ ವಿಶ್ವಕಪ್ನಲ್ಲಿ (Kho Kho World Cup) ರೋಚಕ ಫೈನಲ್ನಲ್ಲಿ ನೇಪಾಳವನ್ನು 54-36 ಅಂಕಗಳಿಂದ ಸೋಲಿಸಿದ ಭಾರತೀಯ ಪುರುಷರ ತಂಡವು (Indian men’s team) ಕೂಡ ವಿಶ್ವ ಚಾಂಪಿಯಕನ್ ಆಗಿ ಹೊರ ಹೊಮ್ಮಿತು. ಭಾರತದ ಗೆಲುವಿನಲ್ಲಿ ನಾಯಕ ಪ್ರತೀಕ್ ವೈಕರ್ ಹಾಗೂ ರಾಮ್ ಜಿ ಕಶ್ಯಪ್ ಮಹತ್ವದ ಪಾತ್ರ ವಹಿಸಿದರು. ಶನಿವಾರ ನಡೆದ ಸೆಮಿ ಫೈನಲ್ನಲ್ಲಿ ದಕ್ಷಿಣ ಆಫ್ರಿಕಾ (South Africa) ತಂಡವನ್ನು 62-42 ಅಂಕಗಳಿಂದ ಮಣಿಸಿದ ಭಾರತ ಪುರುಷರ ತಂಡ ಫೈನಲ್ಗೆ ತಲುಪಿತ್ತು.ಇನ್ನು, ಒಂದೇ ದಿನದಲ್ಲಿ ಮಹಿಳಾ ಮತ್ತು ಪುರುಷರ ತಂಡಗಳು ಚಾಪಿಯನ್ ಆಗುವ ಮೂಲಕ ಇತಿಹಾಸ ನಿರ್ಮಿಸಿವೆ.