Actress kushboo : ನನ್ನ ಮೇಲೆ ಆತ ಲೈಂಗಿಕ ದೌರ್ಜನ್ಯ ಎಸಗಿದಾಗ ನನಗೆ ಕೇವಲ 8 ವರ್ಷ ವಯಸ್ಸು! ನನ್ನ ತಂದೆಯೇ ನನ್ನ ಮೇಲೆ ಲೈಂಗಿಕ ದೌರ್ಜನ್ಯ (khusboo shocking statement) ಎಸಗಿದ್ದರು ಎಂದು ಬಹುಭಾಷಾ ನಟಿ,
ರಾಜಕಾರಣಿ ಖುಷ್ಬು ಸುಂದರ್(Khushboo Sundar) ಅವರು ಇತ್ತೀಚೆಗೆ ನಡೆದ ಒಂದು ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.

ನನಗೆ 8 ವರ್ಷ ವಯಸ್ಸು, ಆಗ ನನ್ನ ತಂದೆ ನನ್ನ ಮೇಲೆ ಲೈಂಗಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡಿದ್ದರು. ಆಗ ನಾನು ಏನನ್ನೂ ಹೇಳಲಾಗದ ಪರಿಸ್ಥಿತಿ, ನನ್ನ ತಾಯಿ ನನ್ನನ್ನು ನಂಬದೇ ಇರಬಹುದು ಎಂದು ನಟಿ ಖುಷ್ಬು ಸುಂದರ್ ಹೇಳಿದ್ದಾರೆ.
ಮೋಜೋ ಸ್ಟೋರಿಗಾಗಿ ಬರ್ಖಾ ದತ್ (Barkha Dutt) ಅವರೊಂದಿಗೆ ನಡೆದ ಸಂವಾದದಲ್ಲಿ ತಮ್ಮ ಬಾಲ್ಯದ ದಿನಗಳ ಬಗ್ಗೆ (khusboo shocking statement) ಮನಬಿಚ್ಚಿ ಮಾತನಾಡಿದ ನಟಿ ಖುಷ್ಬು.
ಬಾಲ್ಯದಲ್ಲಿ ಮಗುವಿನ ಮೇಲೆ ದೌರ್ಜನ್ಯ ನಡೆದಾಗ, ಅದು ಮಗುವಿಗೆ ಜೀವಮಾನದ ಗಾಯವನ್ನು ಉಂಟುಮಾಡುತ್ತದೆ ಮತ್ತು ಅದು ಹುಡುಗಿಗೆ ಮಾತ್ರ ಅಥವಾ ಹುಡುಗನಿಗೆ ಮಾತ್ರ ಎಂದರ್ಥವಲ್ಲ!
ಮದುವೆಯಾದ ಬಳಿಕ ನನ್ನ ತಾಯಿ ಸಾಕಷ್ಟು ನಿಂದನೆಗೆ ಒಳಗಾಗುತ್ತಿದ್ದರು. ನನ್ನ ತಂದೆಗೆ ತನ್ನ ಹೆಂಡತಿಯನ್ನು ಹೊಡೆಯುವುದು, ತನ್ನ ಮಕ್ಕಳನ್ನು ಹೊಡೆಯುವುದು, ತನ್ನ ಏಕೈಕ ಮಗಳನ್ನು ಲೈಂಗಿಕವಾಗಿ ನಿಂದಿಸುವುದು ತನ್ನ ಜನ್ಮಸಿದ್ಧ ಹಕ್ಕು ಎಂದು ಆತ ಅಂದುಕೊಂಡಿದ್ದ.
ನನ್ನ ಮೇಲೆ ನನ್ನ ತಂದೆ ಲೈಂಗಿಕ ದೌರ್ಜನ್ಯ ಎಸಗಿದಾಗ ನನಗೆ ಕೇವಲ 8 ವರ್ಷ ವಯಸ್ಸು! ಆಗ ನಾನು ಏನನ್ನೂ ಹೇಳಲು ಸಾಧ್ಯವಾಗದ ಪರಿಸ್ಥಿತಿ. ನನ್ನ ತಾಯಿಗೆ ನನ್ನ ತಂದೆಯೇ ದೇವರಾಗಿದ್ದರು. ನನಗೆ 15 ವರ್ಷ ತುಂಬಿದ ಬಳಿಕ ತಂದೆಯ ವಿರುದ್ಧ ಮಾತನಾಡುವುದನ್ನು ಕಲಿತೆ ಎಂದು ಹೇಳಿದ್ದಾರೆ.

ನಾನು 15 ವರ್ಷ ವಯಸ್ಸಿಗೆ ಬಂದಾಗ ನನ್ನ ತಂದೆಯ ವಿರುದ್ಧ ಮಾತನಾಡುವ ಧೈರ್ಯವನ್ನು ಹೊಂದಿದ್ದೆ. ಆ ವಯಸ್ಸಿನಲ್ಲಿ ನಾನು ಈ ಘಟನೆಯನ್ನು ಮನೆಯಲ್ಲಿ ಹೇಳಿದ್ದರೆ,
ಇದನ್ನು ಓದಿ: ಮಗ ಮತ್ತು ಸೊಸೆಯ ಹಿಂಸೆಗೆ ಮನನೊಂದು ತನ್ನ 1.5 ಕೋಟಿ ರೂ. ಆಸ್ತಿಯನ್ನು ಸರ್ಕಾರಕ್ಕೆ ಕೊಟ್ಟ ೮೫ ವರ್ಷದ ವೃದ್ಧ!
ನನ್ನ ಮನೆಯಲ್ಲಿನ ಇತರ ಸದಸ್ಯರು ನಿಂದನೆಗೆ ಒಳಗಾಗಬಹುದು ಎಂಬ ಭಯ ನನ್ನನ್ನು ಆವರಿಸಿಕೊಂಡಿದ್ದರಿಂದ, ಈ ಸಂಗತಿ ಕೆಲವು ವರ್ಷಗಳ ಕಾಲ ನನ್ನ ಬಾಯಿಯನ್ನು ಮುಚ್ಚುವಂತೆ ಮಾಡಿತು.
ನನ್ನ ತಾಯಿ ನನ್ನನ್ನು ನಂಬದಿರಬಹುದು ಎಂಬುದು ಹಲವು ಬಾರಿ ಅನಿಸಿತ್ತು. ಕಾರಣ, ಅವರು ತನ್ನ ಗಂಡನನ್ನು ದೇವರು ಎಂದು ಕಾಣುತ್ತಿದ್ದರು. ಗಂಡನೇ ದೇವರು ಎನ್ನುವ ಮನಸ್ಥಿತಿ ಅವರದ್ದಾಗಿತ್ತು.
ಹೀಗಾಗಿ ಕೆಲ ಕಾಲ ಏನನ್ನೂ ಮಾತನಾಡದೆ ಸುಮ್ಮನಿದ್ದ ನಾನು, 15ನೇ ವಯಸ್ಸಿಗೆ ಸಾಕು ಎಂದುಕೊಂಡು ಅವರ ವಿರುದ್ಧ ಸಿಡಿದೆದ್ದು ಮಾತನಾಡಿದೆ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.
ನಟಿ ಖುಷ್ಬು ಅವರು ಹಲವು ಭಾಷೆಯ ಚಿತ್ರಗಳಲ್ಲಿ ನಟಿಸುವ ಮೂಲಕ ಚಿತ್ರರಸಿಕರ ಮನಗೆದ್ದಿದ್ದು, ಕನ್ನಡ, ಹಿಂದಿ, ತಮಿಳು, ತೆಲುಗು, ಮಲೆಯಾಳಂ ಹೀಗೆ ಮುಂತಾದ ಭಾಷೆಗಳಲ್ಲಿ ನಟಿಸಿ, ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.
ಚಿತ್ರಗಳಲ್ಲಿ ನಟನೆ ಜೊತೆ ಜೊತೆಯಲ್ಲೇ 2010 ರಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಅವರು, ರಾಜಕೀಯದಲ್ಲಿ ಸಕ್ರಿಯರಾಗಿ ಪಾಲ್ಗೊಂಡಿದ್ದಾರೆ.
ಇತ್ತೀಚೆಗಷ್ಟೇ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಆಗಿ ನಾಮನಿರ್ದೇಶನಗೊಂಡ ಬೆನ್ನಲ್ಲೇ ತಮ್ಮ ಕಾರ್ಯವನ್ನು ಆರಂಭಿಸಿದ್ದಾರೆ.