ಬೆಂಗಳೂರು, ಡಿ. 17: ಖ್ಯಾತ ಉದ್ಯಮಿ, ಶಿಕ್ಷಣ ತಜ್ಞ ಆರ್. ಎನ್ ಶೆಟ್ಟಿ ಗುರುವಾರ ವಯೋಸಹಜ ಕಾಯಿಲೆಯಿಂದ ನಸುಕಿನ ಜಾವ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಅವರು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರದಲ್ಲಿ ಜನಿಸಿದ ಇವರು, ಮುರುಡೇಶ್ವರ ದೇವಸ್ಥಾನದ ಅಉವಂಶಿಕ ಆಡಳಿತಾಧಿಕಾರಿಯಾಗಿ ಈ ಸ್ಥಳವನ್ನು ಪ್ರೇಕ್ಷಣೀಯ ಕ್ಷೇತ್ರವನ್ನಾಗಿ ಪರಿವರ್ತಿಸಿದ ಕೀರ್ತಿ ಇವರಿಗಿದೆ. ಮುರುಡೇಶ್ವರದ ಸಮುದ್ರ ತಟದಲ್ಲಿ 123 ಅಡಿ ಎತ್ತರದ ಶಿವನ ಪ್ರತಿಮೆಯನ್ನು ಸ್ಥಾಪಿಸಿದ್ದರು.
ಆರ್. ಎನ್ ಶೆಟ್ಟಿ ಕೇವಲ ಭಾರತದಲ್ಲಿ ಮಾತ್ರವಲ್ಲದೇ ವಿದೇಶದಲ್ಲಿಯೂ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ. 1967ರಲ್ಲಿ ಪಾಲುದಾರ ಕಂಪೆನಿಯಾದ ಆರ್. ಎನ್. ಶೆಟ್ಟಿ ಆಂಡ್ ಕಂಪೆನಿ ಆರಂಭಿಸಿ, ಆ ಕಂಪೆನಿಯ ಮೂಲಕ ಅನೇಕ ಸೇತುವೆ, ಆಣೆಕಟ್ಟು, ಕಟ್ಟಡಗಳನ್ನು ನಿರ್ಮಾಣ ಕಾರ್ಯ ಸೇರಿದಂತೆ ಅನೇಕ ಲೋಕೋಪಕಾರಿ ಕಾರ್ಯಗಳನ್ನು ನಿರ್ವಹಿಸಿದ್ದಾರೆ.