ಕಿಡ್ನಿ(Kidney) ನಮ್ಮ ದೇಹದ ಪ್ರಮುಖ ಅಂಗವಾಗಿದೆ. ದೇಹದಲ್ಲಿ ಶುದ್ಧ ರಕ್ತವನ್ನು ಪರಿಚಲನೆ ಮಾಡುವಲ್ಲಿ ಮೂತ್ರಪಿಂಡಗಳು ಮುಖ್ಯ ಪಾತ್ರವಹಿಸುತ್ತವೆ. ಕಿಡ್ನಿ ವೈಫಲ್ಯವಾದರೆ(Kidney Failure) ದೇಹದಲ್ಲಿ ಅನೇಕ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದರೆ ಕಿಡ್ನಿ ವೈಫಲ್ಯವಾಗುವುದಕ್ಕಿಂತ ಮುಂಚೆ ಕೆಲ ಸೂಚನೆಗಳನ್ನು ನೀಡುತ್ತದೆ. ಅದರ ವಿವರ ಇಲ್ಲಿದೆ ನೋಡಿ.

• ಉಸಿರಾಟದ ತೊಂದರೆ : ಕಿಡ್ನಿ ವೈಫಲ್ಯವಾಗಿ ರೆಥ್ರೋಪೊಯೆಟಿನ್ ಎಂಬ ಹಾರ್ಮೋನ್(Harmone) ಉತ್ಪಾದಿಸುವುದು ಸಾಧ್ಯವಾಗುವುದಿಲ್ಲ. ಇದರಿಂದ ವ್ಯಕ್ತಿಗೆ ಎನಿಮಿಯಾ ಆಗಿ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ.
• ಹಸಿವಿನ ನಷ್ಟ : ಕಿಡ್ನಿ ಸರಿಯಾಗಿ ಕೆಲಸ ಮಾಡದಿದ್ದರೆ, ವಾಕರಿಕೆ, ವಾಂತಿ ಮತ್ತು ಹೊಟ್ಟೆಯ ತೊಂದರೆಗಳು ಕಂಡುಬರುತ್ತವೆ. ತೂಕ ನಷ್ಟವಾಗುವ ಸಾಧ್ಯತೆ ಕೂಡಾ ಇರುತ್ತದೆ.
• ತುರಿಕೆ : ಮೂತ್ರಪಿಂಡಗಳು ತ್ಯಾಜ್ಯವನ್ನು ತೆಗೆದುಹಾಕಲು ಸಾಧ್ಯವಾಗದಿದ್ದಾಗ ಚರ್ಮದಲ್ಲಿ ತುರಿಕೆ ಉಂಟಾಗುತ್ತದೆ. ಹೀಗಾಗಿ ತುರಿಕೆ ಉಂಟಾಗುತ್ತಿದ್ದರೆ ಜಾಗೃತಿ ವಹಿಸಬೇಕು.
• ಮೂತ್ರದ ಬಣ್ಣ ಬದಲಾವಣೆ : ಕಿಡ್ನಿ ವೈಫಲ್ಯವಾದಾಗ ಮೂತ್ರದಲ್ಲಿ ಪ್ರೋಟೀನ್ ಸೋರಿಕೆಯಾಗುತ್ತದೆ. ಇದನ್ನು ಅಲ್ಬುಮಿನ್ ಎಂದು ಕರೆಯಲಾಗುತ್ತದೆ. ಇದು ಮೂತ್ರಪಿಂಡ ವೈಫಲ್ಯದಿಂದ ಉಂಟಾಗುತ್ತದೆ. ಈ ಸಮಯದಲ್ಲಿ ಮೂತ್ರದ ಬಣ್ಣವು ಕಂದು ಅಥವಾ ವಿಪರೀತ ಹಳದಿಯಾಗಿರಬಹುದು.
• ನಿದ್ರಾಹೀನತೆ : ನಿದ್ರಾಹೀನತೆ ಮತ್ತು ಮೂತ್ರಪಿಂಡ ಕಾಯಿಲೆಯ ನಡುವಿನ ಸಂಪರ್ಕವನ್ನು ಸಂಶೋಧನೆಗಳು ತೋರಿಸುತ್ತವೆ. ನಿದ್ರಾಹೀನತೆಯು ದೇಹವು ಆಮ್ಲಜನಕ ಪಡೆಯುವುದನ್ನು ತಡೆಯುವ ಮೂಲಕ ಕಿಡ್ನಿಯನ್ನು ಹಾನಿಗೊಳಿಸುತ್ತದೆ.
• ಸದಾ ದಣಿವಾಗುವುದು : ಕಿಡ್ನಿ ದೇಹಕ್ಕೆ ಕೆಂಪು ರಕ್ತ ಕಣಗಳನ್ನು(Red Blood Cells) ಬಿಡುಗಡೆ ಮಾಡಲು ಸಹಾಯ ಮಾಡುತ್ತವೆ. ಕೆಂಪು ರಕ್ತ ಕಣಗಳು ಕಡಿಮೆಯಾದಾಗ ಸುಸ್ತು, ಆಯಾಸ ಕಾಣಿಸಿಕೊಳ್ಳುತ್ತದೆ. ಆಗ ದೇಹದಲ್ಲಿ ಅನೇಕ ವಿಷಕಾರಿ ಅಂಶಗಳು ಶೇಖರಣೆಯಾಗುತ್ತವೆ. ಕಿಡ್ನಿ ಸರಿಯಾಗಿ ಕೆಲಸ ಮಾಡುವುದಿಲ್ಲ. ಹೀಗಾಗಿ ದೇಹ ಸದಾ ದಣಿವಾಗುತ್ತದೆ.

• ಮುಖ ಮತ್ತು ಕಾಲುಗಳ ಊತ : ಕಿಡ್ನಿ ವೈಫಲ್ಯವಾದಾಗ ಕೈಗಳು, ಪಾದಗಳು, ಕಾಲುಗಳು ಮತ್ತು ಮುಖದಲ್ಲಿ ಊತವನ್ನು ಉಂಟುಮಾಡುತ್ತದೆ.