ಸಾಲದ ಸೋಗಿನಲ್ಲಿರೋ ಕಿಲ್ಲರ್ ಆಪ್ಗಳ ಬಗ್ಗೆ ಇರಲಿ ಎಚ್ಚರ. ಈ ಡೆಡ್ಲಿ ಆಪ್ ನಿಂದ ಸೋತವರಿಗಿಂತ ಸತ್ತವರೇ ಹೆಚ್ಚು! ಅಜ್ಞಾತ ಜಾಗದಲ್ಲಿ ಕೂತು ನಿಮ್ಮ ಮಾನಕ್ಕೆ ಕುತ್ತು ತರ್ತಾರೆ. ಹೇಗೆ ಅಂತೀರಾ
ಖಾಸಗಿ ಫೊಟೋ /ವಿಡಿಯೋ ಲೀಕ್ ಮಾಡಿ ಹೆದರಿಸ್ತಾರೆ. ಅಸಲಿಗೆ ಏನಿದು ಡೆಡ್ಲಿ ಲೋನ್ ಆಪ್? ನಿಮ್ಮ ಬಣ್ಣಬಣ್ಣದ ಸ್ಮಾರ್ಟ್ ಫೋನ್ ಗಳಲ್ಲಿ ಇನ್ಸ್ಟೆಂಟ್ ಲೋನ್ ಆಪ್ಗಳಿದೆಯಾ? ಹಾಗಾದರೇ ನೀವು ಎಚ್ಚರ ವಹಿಸಿಲೇಬೇಕು. ಲೋನ್ ಆಪ್ಗಳ ಮೊರೆಹೋಗಿ, ಸಾಲದ ಸುಳಿಗೆ ಸಿಲುಕಿ ಹಾಕ್ಕೊಂಡು ಏನು ಮಾಡಬೇಕು ಅನ್ನೋದು ತೋಚದೆ ವಿಲವಿಲ ಒದ್ದಾಡ್ತ ಇದೀರಾ? ಹಾಗಾದ್ರೆ ಈ ಅಪಾಯಕಾರಿ ಆಪ್ ಗಳಿಂದಾಗುವ ಅಪಾಯವೇನು?

ನೀವು ಅಥವಾ ನಿಮಗೆ ತಿಳಿದವರೇನಾದರೂ ಈ ರೀತಿಯಲ್ಲಿ ಜೀವ ಹಿಂಡೋ ಅಪ್ಲಿಕೇಶನ್ ಸಹವಾಸಕ್ಕೆ ಬಿದ್ದು ಸಾವಿನ ಯೋಚನೆ ಮಾಡುವ ನಿರ್ಧಾರಕ್ಕೆ ಬಂದಿದ್ರೆ, ನೀವೇನ್ ಮಾಡಬಹುದು! ಮತ್ತು ನೀವು ಏನು ಮಾಡಬೇಕು ಎಂಬುದರ ಬಗ್ಗೆ ಇಲ್ಲಿ ತಿಳಿಸಲಾಗಿದೆ. ಈ ಲೋನ್ ಆಪ್ಗಳ ಹೆಸರು ಕೇಳುತ್ತಿದ್ದ ಹಾಗೆ ಎಷ್ಟೋ ಜನ ಬೆಚ್ಚಿ ಬೀಳ್ತಾರೆ. ಕೆಲವರಿಗಂತು ಚಳಿ ಜ್ವರನೇ ಬಂದು ಬಿಡುತ್ತೆ. ಯಾಕಂದ್ರೆ ಈ ಲೋನ್ ಆಪ್ಗಳು ಅದೆಷ್ಟೋ ಜನರ ಬದುಕೇ ಬರ್ಬಾದ್ ಮಾಡಿದೆ. ಕೆಲವರಂತು ಈ ಆಪ್ಗಳ ಕಾಟಕ್ಕೆ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ನೋ ಗ್ಯಾರಂಟಿ, ನೋ ಡಾಕ್ಯೂಮೆಂಟೇಷನ್, ನೋ ಗ್ಯಾರಂಟಿ, ಐದೇ ನಿಮಿಷದಲ್ಲಿ ಸಾಲ ಹೀಗೆ ಒಂದಾ, ಎರಡಾ, ನಾನಾ ಆಸೆ ತೋರಿಸಿ , ಕಲರ್ಫುಲ್ ಜಾಹೀರಾತು ಕೊಟ್ಟು ಹಣದ ಅವಶ್ಯಕತೆ ಇರುವವರನ್ನು ತನ್ನತ್ತ ಸೆಳೆಯುವುದೇ ಈ ಆಪ್ಗಳ ಪ್ರಮುಖ ಗುರಿಯಾಗಿದೆ.
ಈ ಮೂಲಕ ಸಾಲ ಕೊಡ್ತೀವಿ ಅಂತ ಹೇಳಿ. ನಿಮ್ಮನ್ನು ಆಪ್ ಬಲೆಯೊಳಗೆ ಬೀಳಿಸುತ್ತಾರೆ. ಕೊರೋನಾ ನಂತರ ಜನ ಸಾಕಷ್ಟು ಸಮಸ್ಯೆಯಲ್ಲಿ ಸಿಲುಕಿದ್ದಾರೆ. ಲಾಕ್ಡೌನ್ ನಂತ್ರ ಅದೆಷ್ಟೋ ಜನ ಕೆಲಸ ಕಳೆದುಕೊಂಡಿದ್ದಾರೆ. ಕೈಯಲ್ಲಿ ಕಾಸಿಲ್ಲ, ಸಾಲ ಕೊಡುವವರೂ ಇಲ್ಲ. ಬ್ಯಾಂಕಲ್ಲಿ ಸಾಲ ತಗಳೋಣ ಅಂದ್ರೆ ಸಿಬಿಲ್ ಸ್ಕೋರ್ ಕೇಳ್ತಾರೆ. ಅದು ಇದ್ರೆ ಆ ಡಾಕ್ಯುಮೆಂಟ್, ಈ ಡಾಕ್ಯುಮೆಂಟ್ ಅಂತ ಎಲ್ಲೆಲ್ಲೂ ಸುತ್ತಾಡಿಸ್ತಾರೆ. ಆ ಕಾಗದ ಪತ್ರ ಜೋಡಿಸೋಕೆ ಸಾಧ್ಯ ಆಗದಿದ್ದಾಗ, ಉಳ್ದಿರೋದು ಒಂದೇ ದಾರಿ, ಇನ್ಸ್ಟಂಟ್ ಲೋನ್ ಆಪ್ಗಳ ಬಾಗಿಲ ತಟ್ಟೋದು. ಮೊಬೈಲ್ಗಳಲ್ಲಿ ಮನಿ ಟ್ಯಾಪ್, ಕ್ಯಾಶ್ ಮಾಮ ಅನ್ನೋ ಹಾಳು ಮೂಳು ಆಪ್ಗಳು ಸೋಶಿಯಲ್ ಮೀಡಿಯಾದಲ್ಲಿ ನಮ್ಮನ್ನ ಆಕರ್ಷಿಸುತ್ತವೆ.

ನಮ್ಮ ಹಣದ ಅವಶ್ಯಕತೆಯ ವೀಕ್ನೆಸನ್ನು ದಾಳವಾಗಿ ಬಳಸೋ ಆಪ್ಗಳು ನಮ್ಮಲ್ಲಿ ಒಂದಿಷ್ಟು ದಾಖಲೆಗಳನ್ನು ಕೇಳ್ತವೆ. ನಾವೋ ಅವರು ಕೇಳೋ ದಾಖಲೆಗಳಾದ ಪಾನ್ ಕಾರ್ಡ್, ಆಧಾರ್ ಸ್ಕ್ಯಾನ್, ಸೆಲ್ಫಿ ಮಾಡಿ ಕಲ್ಸೇ ಬಿಡ್ತೀವಿ. ಇನ್ನು ಈ ಆಪ್ಗಳಲ್ಲಿ ಕೇಳೋ ಎಲ್ಲಾ ಪ್ರಶ್ನೆಗಳಿಗೂ ಓಕೆ ಓಕೆ ಅಂತ ಕೊಡ್ತಾ ಹೋಗ್ತಿವಿ, ಅಲ್ಲಿ ಕೇಳೋದ್ ಏನು ಅನ್ನೋದನ್ನ ಓದೋದು ಕೂಡ ಇಲ್ಲ ಅಲ್ಲಿ ಏನ್ ಕೇಳ್ತಾರೆ? ನಿಮ್ಮ ಲೊಕೇಶನ್ ಕೇಳಿ ತಕ್ಷಣ ಓಕೆ ಕೊಟ್ವಿ, ನಮ್ಮ ಕಾಂಟೆಕ್ಟ್ ಲೀಸ್ಟೀಗೆ ಹೋಗೋ ಅನುಮತಿ ಕೇಳುತ್ತಾರೆ, ಅದಕ್ಕೂ ಓಕೆ ಕೊಟ್ವು ಇನ್ನು ಗ್ಯಾಲರಿ ವಿಡಿಯೋ ನೋಡೋಕೆ ಅನುಮತಿ ಕೇಳುತ್ತೆ, ಇನ್ನು ನಾವೂ ದುಡ್ಡು ಬೇಕು ಅನ್ನೋ ಧಾವಂತದಲ್ಲಿ ಅದಕ್ಕೂ ಓಕೆ ಕೊಡ್ತೀವಿ ಇನ್ನ ಅದು ಅಲ್ಲಿಗೆ ನಿಲ್ಲುತ್ತ ಖಂಡಿತ ಇಲ್ಲ!
ಇನ್ನು ಇರೋದು ಆಟ, ನೀವು ಹತ್ತು ಸಾವಿರಕ್ಕೆ ಲೋನ್ ಅಪ್ಲೇ ಮಾಡ್ತೀರ ಅಂದ್ಕೊಳಿ, ನಿಮಿಗೆ ಕೈಗೆ ಸೇರೋ ಹಣ 7300 ರೂಪಾಯಿ ಉಳಿದ ಹಣ ಪ್ರೊಸೆಸಿಂಗು ಟ್ಯಾಕ್ಸು ಅಂತ ಕಟ್ಟಾಗಿರುತ್ತೆ, ಇನ್ ಈ ಹಣವನ್ನು ತೀರಿಸೋ ಹೊತ್ತಿಗೆ 14,000 ದಾಟಿರುತ್ತೆ. ಅಂದ್ರೆ ಹೆಚ್ಚು ಕಮ್ಮಿ ತಿಂಗಳಿಗೆ 80%ರಷ್ಟು ಬಡ್ಡಿ ಅಂತಾಯ್ತು. ಇನ್ನು ಇದರ ಎಡೆಯಲ್ಲಿ ಬೇರೊಂದು ಲೋನ್ ಆಪ್ ಕಡೆಯವರ ಫೋನ್ ಕಾಲ್ ಬರುತ್ತೆ. ನಿಮಗೆ ಹಣದ ಅವಶ್ಯಕತೆ ಇದ್ರೆ ಹೇಳಿ ನಾವು ಒಸಿ ಹಣ ಕೊಡ್ತೀವಿ ಅಂತ ಆ ಕಡೆಯಿಂದ ಸುಂದರ ಸಖಿಯ ದ್ವನಿ ಕೇಳ್ಸುತ್ತೆ, ಇನ್ ನಾವು ಇಲ್ಲಿಂದ ತೆಗೆದು ಆ ಸಾಲ ತೀರಸೋದಕ್ಕೆ ಈ ಆಪ್ ನಲ್ಲು ಸಾಲ ತೆಗಿತೀವಿ ಇದು ಬಾಕಿ ಅಲ್ ಅದು ಬಾಕಿ. ಅಲ್ಲಿಗೆ ಆಪ್ ಸಾಲದ ಸುಳಿಯಲ್ಲಿ ಸಿಲುಕಿ ಒದ್ದಾಡಲು ಪ್ರಾರಂಭಿಸುತ್ತೇವೆ.

ಆಪ್ ತಂಡ ಕೊಡೊ ಟೈಮ್ ಒಳಗೆ ತೀರಿಸ್ಬೇಕು ಇಲ್ಲ ಅಂದ್ರೆ ಮತ್ತಷ್ಟು ಬಡ್ಡಿ ಬೀಳುತ್ತೆ. ಇನ್ನು ನಿಮ್ಮ ಪ್ರತಿಕ್ರಿಯೆ ಸಿಗದೆ ಇದ್ದಾಗ ನಿಮಿಗೆ ಸಾಲ ಕೊಟ್ಟಿರೋ ಆಪ್ ಕಡೆಯಿಂದ ಸ್ಥಳೀಯ ಏಜೇಂಟ್ ಕರೆ ಮಾಡ್ತಾನೆ. ಮೊದಲಿಗೆ ಸಾಲ ತೀರಿಸಿ ಬೇಗ ಅಂತಾರೆ, ಅಯ್ಯೋ ಇದ್ಯಾವ ಆಪ್ ರೀ? ಸಾಲ ವಾಪಸ್ ಕೊಡದೆ ಹೋದ್ರೆ ಏನ್ ಮಾಡಿಯಾರು!! ಅಂತ ನೀವು ಸುಮ್ನೆ ಕೂತ್ರೆ, ನಿಮಿಗೆ ಎರಡನೆ ಫೋನ್ ಕಾಲ್ ಬರುತ್ತೆ. ಸಾಲ ಮರುಪಾವತಿಸಿ ಎಂದು ಬೆದರಿಕೆ ಹಾಕ್ತಾರೆ. ಅವಾಚ್ಯವಾಗಿ ಬೈತಾರೆ. ನಿಮ್ಮ ವಂಶ ವೃಕ್ಷವನ್ನು ಬಿಡದೆ ನಿಂದಿಸೋಕೆ ಶುರು ಮಾಡ್ತಾರೆ.
ಇನ್ನು ನಿಮ್ಮ ಫೋನ್ ಸ್ವಿಚ್ ಆಫ್ ಆಗೋದ್ರೆ, ನೀವೇ ನಿಮ್ಮ ಲೊಕೇಶನ್ ಆಕ್ಸಸ್ ನೋಡೋದಕ್ಕೆ ಅನುಮತಿ ಕೊಟ್ಟಿದ್ರಲ್ಲ, ಅದೇ ಲೊಕೇಶನಿಗೆ ಏಜೆಂಟ್ ಬಂದು ಕಾಡೋದಿಕ್ಕೆ ಶುರು ಮಾಡ್ತಾನೆ. ನಿರಂತರ ಬಂದು ಹೋಗೋದ್ರಿಂದ ಇದ್ದಿದ್ ಕೆಲ್ಸ ಬಿಟ್ಟು ದೂರ ಹೋಗ್ತೀರಾ ಅಂತಿಟ್ಕೊಳ್ಳಿ. ಇದು ಅಲ್ಲಿಗೆ ಮುಗಿಯಲ್ಲ! ನಿಮ್ಮ ಮೊಬೈಲ್ ಕಾಂಟಾಕ್ಟ್ ಲೀಸ್ಟಲ್ಲಿರೋ ಎಲ್ಲಾ ಮುಖ್ಯವಾದ ನಂಬರ್ಗಳು ಆ ಕಿರಾತಕಕರ ಕೈ ಸೇರಿರುತ್ತೆ. ಅದ್ರಲ್ಲಿರೋ ಡ್ಯಾಡಿ, ಮೊಮ್ಮಿ, ವೈಫು, ಆಂಟಿ ನಂಬರ್ಗಳಿಗೆ ಫೋನ್ ಮಾಡಿ ನಿಮ್ಮ ಬಗ್ಗೆ ಇಲ್ಲಸಲ್ಲದ ವಿಚಾರಗಳನ್ನ ಹಂಚಿಕೊಂಡು ಮನೆಯವರಿಗೂ ಹಿಂಸೆ ಕೊಡೋಕೆ ಶುರು ಮಾಡ್ತಾರೆ. ಅದಕ್ಕೂ ಬಗ್ಗಿಲ್ವ ನಿಮ್ಮ ಎಲ್ಲ ನಂಬರ್ಗಳನ್ನ ವಾಟ್ಸಪ್ ಗ್ರೂಪ್ ಮಾಡಿ ನಿಮ್ಮ ಭಾವಚಿತ್ರಕ್ಕೆ ಫ್ರಾಡ್ ಅಂತ ಮುದ್ರೆ ಒತ್ತಿ ನಿಮ್ಮ ಚಾರಿತ್ರ್ಯ ಹರಣ ಮಾಡ್ತಾರೆ.

ಸರಿ ಈ ವಿಷ ಚಕ್ರದೊಳಗೆ ಸಿಲುಕಿ ಸದ್ದೇ ಬಾರದ ನೋವು ಅನುಭವಿಸ್ಥಿದ್ರೆ ಇದ್ರಿಂದ ಹೊರ ಬರೋದು ಹೇಗೆ? ಸ್ನೇಹಿತರೆ ಪ್ಲೇ ಸ್ಟೋರ್ ನಲ್ಲಿ ಸುಮಾರು 200 ಕ್ಕೂ ಹೆಚ್ಚು ಇನ್ಸ್ಟೆಂಟ್ ಲೋನ್ ಆಪ್ಗಳು ಇದೆ. ಇದ್ಯಾವುದಕ್ಕೂ RBI ನ ಅನುಮತಿ ಇಲ್ಲ. ಪಕ್ಕಾ ಫ್ರಾಡ್ ಆಪ್ ಗಳು. ಇನ್ನು ಇದರ ಹೆಡ್ ಆಫೀಸ್ ಗಳು ಇಂಡೋನೆಶ್ಯಾ, ಚೀನಾಗಳಲ್ಲಿ ಕಾರ್ಯಚರಿಸುತ್ತದೆ. ಇತ್ತೀಚೆಗೆ ಲೋನ್ ಪಡೆದ ಅನೇಕ ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ಪ್ರಕರಣ ಹೆಚ್ಚಾದ ಬೆನ್ನಲ್ಲೇ ತಿಳಿದಿರೋ ಅಂಶವೇನಂದರೇ ಬೆಂಗಳೂರು, ಫರೀದಾಬಾದ್, ನೋಯಿಡದಲ್ಲು ಇದರ ಆಫೀಸ್ಗಳು ಇದೇ ಅನ್ನೋದು. ಅಲ್ಲಿ ಕೆಲ್ಸ ಮಾಡೋ ಹುಡುಗರೆಲ್ಲರು ನಮ್ಮ ಭಾರತೀಯರೆ, ಕೊಡೋ ಸಂಬಳಕ್ಕೆ ಸಾಲ ಪಡೆದವರ ಚಾರಿತ್ರ್ಯ ಹರಣವನ್ನ ನಿಯತ್ತಾಗಿ ನಿರ್ವಹಿಸುತ್ತಾರೆ. ನಿಮಗೆ ಸಾಲ ಕೊಡ್ತಿರೋ ಬಹುತೇಕ ಆಪ್ಗಳಿಗೆ ಲೈಸನ್ಸ್ ಇಲ್ಲ, ಅವರಿಗೆ ಹಣದ ವ್ಯವಹಾರ ಮಾಡೋ ಅನುಮತಿ ಇಲ್ಲ. ಅವರು ಮಾಡ್ತಿರೋದು ಪಕ್ಕ ಅವ್ಯವಹಾರ ದಂಧೆ!
ಇನ್ನು ಅಗತ್ಯಕ್ಕಿಂತ ಹೆಚ್ಚು ಬಡ್ಡಿ ವಸೂಲಿ ಮಾಡೋದಿದೆಯಲ್ಲ ಅದು ಕೂಡ ಅಕ್ಷಮ್ಯ ಅಪರಾಧವೇ. ಇನ್ನು ನಿಮಗೆ ಕರೆ ಮಾಡಿ ಬೆದರಿಕೆ ಹಾಕೋದು ಕೂಡ ಶಿಕ್ಷಾರ್ಹ ಅಪರಾಧವೇ. ಇಂಡಿಯನ್ ಪೆನಲ್ ಕೊಡ್ನ ಸೆಕ್ಷನ್ 384 ರ ಅಡಿಯಲ್ಲಿ ಎಕ್ಸ್ಟ್ರಾಕ್ಷನ್ ಸೆಕ್ಷನ್ 499 ರ ಅಡಿಯಲ್ಲಿ ಮಾನಹಾನಿ, ಸೆಕ್ಷನ್ 506 ರ ಅಡಿಯಲ್ಲಿ ಪ್ರಾಣ ಬೆದರಿಕೆ, IT act 66 ಅಡಿಯಲ್ಲಿ ನೀವು ಅವರ ವಿರುದ್ಧ ಸ್ಥಳೀಯ ಪೊಲೀಸ್ ಸ್ಟೇಷನಿಗೆ ಹೋಗಿ ದೂರು ದಾಖಲಿಸಿ. ಮುಂದಿದ್ದು ಅವರು ನೋಡ್ಕೋತಾರೆ. ಈ ರೀತಿಯ ಲೋನ್ ಆಪ್ಗಳು ನಿಮ್ಮ ಮೊಬೈಲ್ ನಲ್ಲಿ ಇದ್ದರೆ ಈ ಕೂಡಲೇ ತೆಗೆದುಹಾಕಿ. ಇಂಥ ಲೋನ್ ಆಪ್ಗಳಿಂದ ಮುಕ್ತಿ ಹೊಂದುವುದು ಒಳಿತು!