ನಮ್ಮ ದೇಶದ ಇತಿಹಾಸದಲ್ಲಿ ಹಂಪಿಯು(Hampi) ಬೇರೆ ಬೇರೆ ಕಾರಣಗಳಿಂದ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ(kishkindhe is in karnataka).
ಇತಿಹಾಸ ತಜ್ಞರಿಗೆ(History Teller) ಹಂಪಿಯು ವಿಜಯನಗರ(Vijayanagar) ಸಾಮ್ರಾಜ್ಯದ ರಾಜಧಾನಿಯಾಗಿ ಕಾಣಿಸಿಕೊಂಡರೆ, ಪುರಾತತ್ವ ಶಾಸ್ತ್ರಜ್ಞರಿಗೆ ಅದು ಅತೀ ಪ್ರಾಚೀನ ಕಾಲದ ಜನವಸತಿಯ ಕೇಂದ್ರವಾಗಿ ಆಕರ್ಷಣೀಯವಾಗಿದೆ.

ಮಾನವ ಶಾಸ್ತ್ರಜ್ಞರು ಹಂಪಿ ಪರಿಸರದಲ್ಲಿ ಪ್ರಾಚೀನ ಮಾನವನ ಅಸ್ತಿತ್ವವನ್ನು ಗುರುತಿಸಿದ್ದಾರೆ. ಪ್ರಭು ಶ್ರೀರಾಮ(Sri Ram) ಹನುಮನನ್ನು(Hanuman) ಭೇಟಿಯಾಗಿದ್ದು ಕಿಷ್ಕಿಂದೆಯಲ್ಲಿ ಅನ್ನೋದು ನಮಗೆಲ್ಲ ಗೊತ್ತಿರೋ ವಿಷಯ.
ಆದ್ರೆ ಈ ಕಿಷ್ಕಿಂದೆ ಎಲ್ಲಿದೆ ಗೊತ್ತಾ? ಕಿಷ್ಕಿಂದೆ ಇರೋದೆಲ್ಲಿ ಅಂತ ಹೆಚ್ಚು ಹುಡುಕೋದು ಬೇಡ. ಅದು ನಮ್ಮದೇ ರಾಜ್ಯದ ಕೊಪ್ಪಳ ಜಿಲ್ಲೆಯ ಆನೆಗೊಂದಿಯಿಂದ ಮೂರು ಕಿ.ಮೀ ದೂರದಲ್ಲಿದೆ(kishkindhe is in karnataka).
ಈ ಬೆಟ್ಟ ಇರುವುದು ಹಂಪಿ ಸಮೀಪದ ಆನೆಗುಂದಿಯ ಬಳಿ. ಆದರೆ ಈ ಪ್ರದೇಶ ಸೇರುವುದು ಕೊಪ್ಪಳ ಜಿಲ್ಲೆಗೆ. ಹಂಪಿ ಇರುವುದು ಬಳ್ಳಾರಿಯಲ್ಲಿ.
ಈ ಎರಡು ಜಿಲ್ಲೆಗಳ ಮಧ್ಯ ಹರಿಯುವ ತುಂಗಭದ್ರಾ ನದಿ ಜಿಲ್ಲೆಗೆ ಗಡಿಯಂತಿದೆ. ಐತಿಹ್ಯಗಳ ಪ್ರಕಾರ ಹನುಮಂತನ ತಾಯಿ ಅಂಜನಾದೇವಿ ಈ ಪರ್ವತದಲ್ಲಿ ಆಂಜನೇಯನಿಗೆ ಇಲ್ಲಿಯೇ ಜನ್ಮ ನೀಡಿದ್ದಳು.
ಅದರ ಕುರುಹಾಗಿ ಅಂಜನಾದಿ ಬೆಟ್ಟದಲ್ಲಿ ಅತ್ಯಂತ ಪ್ರಾಚೀನವಾದ ಆಂಜನೇಯ ಮಂದಿರವಿದೆ. ಸಮೀಪದಲ್ಲಿಯೇ ತುಂಗಭದ್ರ ನದಿ ಎರಡು ಭಾಗವಾಗಿ ಹರಿಯುತ್ತಾಳೆ.
https://vijayatimes.com/siddaramaiah-for-kolar-vidhansabha/
ಇದಕ್ಕೂ ಮಹಾಕಾವ್ಯಗಳಲ್ಲಿ ಉಲ್ಲೇಖ ಸಿಗುತ್ತದೆ. ಆ ಪ್ರಕಾರ ಇಲ್ಲಿ ಹನುಮನನ್ನು ಹೆತ್ತ ಬಾಣಂತಿ ಅಂಜನಾದೇವಿಯ ಸ್ನಾನಕ್ಕೆ ನೀರಿಲ್ಲದಂತಾಯಿತು. ತಾಯಿ ಚಿಂತಕ್ರಾಂತಳಾಗಿ ಕುಳಿತಿರುವುದನ್ನು ಗಮನಿಸಿದ ಹಸುಗೂಸು ಹನುಮಂತ ಆ ತುಂಗಭದ್ರೆಯ ಒಂದು ಭಾಗವನ್ನು ತಾನಿರುವ ಬೆಟ್ಟದ ಹತ್ತಿರಕ್ಕೆ ತಿರುಗಿಸಿದನಂತೆ.
ಅಂದಿನಿಂದ ಒಮ್ಮುಖವಾಗಿ ಹರಿಯುವ ತುಂಗೆ ಋಷಿಮುಖ ಪರ್ವತದ ಎಡ- ಬಲಗಳಲ್ಲಿ ಹರಿಯಲಾರಂಭಿಸಿತು. ಎರಡು ಭಾಗವಾದ ಆ ಸ್ಥಳವನ್ನು ‘ಹನುಮನ ಸೆಳವು’ ಎಂದು ಕರೆಯಲಾಗುತ್ತದೆ.
ರಾಮಾಯಣ ಕಾವ್ಯದಲ್ಲಿ ಉಲ್ಲೇಖವಾಗಿರುವ ಕಿಷ್ಕಿಂದೆ, ಅಂಜನಾದ್ರಿ ಪರ್ವತಗಳ ಗುರುತು ಆನೆಗೊಂದಿ ಸುತ್ತಮುತ್ತಲಿನ ಪ್ರದೇಶದಲ್ಲಿ ಇಂದಿಗೂ ಇವೆ. ಇಲ್ಲಿಯೇ ವಾನರನಂತೆ ಕಾಣುವ ಚಿತ್ರಗಳಿವೆ. 4000 ವರ್ಷಗಳ ಹಿಂದಿನ ಅನೇಕ ಚಿತ್ರಗಳಿವೆ.
ವಾನರ ಬದುಕಿನ ಚಿತ್ರಗಳಿವೆ. 11 ನೇ ಶತಮಾನದ ಅನೇಕ ಶಾಸನಗಳು ಹನುಮ ಹುಟ್ಟಿದ್ದು ಇಲ್ಲೇ ಎಂದು ಉಲ್ಲೇಖಿಸುತ್ತವೆ. ವಿಜಯನಗರ ಸಾಮ್ರಾಜ್ಯದ ಅರಸು, ಈ ಪ್ರದೇಶದ ಮಹತ್ವ ಅರಿತು ರಾಮ ಆಂಜನೇಯನ ಒಡನಾಟ ಕಂಡು ಹಂಪಿಯಲ್ಲಿ ಅನೇಕ ರಾಮನ ದೇವಾಲಯ ನಿರ್ಮಾಣ ಮಾಡಿದ್ದಾರೆ.

ಅನೇಕ ಕಂಬಗಳ ಮೇಲೆ,ರಾಮ ಹಾಗೂ ಆಂಜನೇಯನ
ಕೆತ್ತನೆ ಮಾಡಲಾಗಿದೆ. ಏನೇ ಆದ್ರೂ, ಭಜರಂಗಬಲಿ ಜನಿಸಿದ ಈ ರಾಜ್ಯದಲ್ಲಿ ಜನಿಸಿರೋದು ನಮ್ಮ ಪುಣ್ಯವೇ ಸರಿ.
- ಪವಿತ್ರ ಸಚಿನ್