ಶುಕ್ರವಾರ ಕೋಲ್ಕತ್ತಾ ನೈಟ್ ರೈಡರ್ಸ್(Kolkata Night Riders) ಮತ್ತು ಪಂಜಾಬ್ ಕಿಂಗ್ಸ್(Punjab Kings) ನಡುವೆ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್(IPL) 2022ರ ಪಂದ್ಯದಲ್ಲಿ ಕೆಕೆಆರ್(KKR) ಭರ್ಜರಿ ಗೆಲುವನ್ನು ಸಾಧಿಸಿತು. 8ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್, ಆಂಡ್ರೆ ರಸೆಲ್ ಅವರ ಸ್ಪೋಟಕ ಬ್ಯಾಟಿಂಗ್ ದಾಳಿಯಿಂದ ಸೋಲನ್ನು ಅನುಭವಿಸಿತು.

ಚೇಸಿಂಗ್ ತಂಡಗಳು T20 ಲೀಗ್‌ನ ಹೊಸ ಆವೃತ್ತಿಯಲ್ಲಿಯೂ ಎಂದಿನಂತೆ ಮುಂದುವರೆಸಿದವು. ರಸ್ಸೆಲ್ ಒಬ್ಬರೇ ಅಖಾಡದಲ್ಲಿದ್ದು, ಸೋಲುವ ಪಂದ್ಯವನ್ನು ಗೆಲುವಿನ ಕಡೆ ಮುಖಮಾಡಿಸಿದರು. ಕೇವಲ 31 ಎಸೆತಗಳಲ್ಲಿ 70 ರನ್ ಗಳಿಸಿ ಔಟಾಗದೆ, ಜಯಿಸಲು ಕೋಲ್ಕತ್ತಾ 33 ಎಸೆತಗಳು ಬಾಕಿ ಇರುವಂತೆಯೇ 138 ರನ್‌ಗಳ ಅಲ್ಪ ಗುರಿಯನ್ನು ಲೀಲಾಜಾಲವಾಗಿ ತಲುಪಿತು. ಕೆಕೆಆರ್ ಪರ ಟಾಪ್ ಬ್ಯಾಟಿಂಗ್ ಲೈನ್ ಬ್ಯಾಕ್ ಟೂ ಬ್ಯಾಕ್ ಔಟಾದ ಬಳಿಕ ಒತ್ತಡದಲ್ಲಿದ್ದ ತಂಡದ ಪರ ನಿಂತ ರಸ್ಸೆಲ್, ಪಂಜಾಬ್ ಕಿಂಗ್ಸ್ ಬೌಲರ್‌ಗಳಿಗೆ 8 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಧೂಳಿಪಟ ಮಾಡಿದರು.
ಐಪಿಎಲ್ ಇತಿಹಾಸದಲ್ಲಿ ದೈತ್ಯ ಸ್ಪೋಟಕ ಬ್ಯಾಟ್ಸ್ ಮನ್ ಎಂದರೆ ಆ್ಯಂಡ್ರೆ ರಸೆಲ್ ಎಂಬುದು ಹಿಂದಿನಿಂದಲೂ ತಿಳಿದಿತ್ತು. ಆದ್ರೆ ಅದನ್ನು ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಮ್ಮೆ ನೆನಪಿಸಿದ್ದಾರೆ. ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಪಂದ್ಯವನ್ನು ತಮ್ನ ಕಡೆ ಸೆಳೆದುಕೊಂಡರು ರಸೆಲ್. ಈ ಮಧ್ಯೆ ವಿಕೆಟ್‌ಕೀಪರ್ ಸ್ಯಾಮ್ ಬಿಲ್ಲಿಂಗ್ಸ್ ಔಟಾದಾಗ KKR 51/4 ನಲ್ಲಿ ತೊಂದರೆಯಲ್ಲಿತ್ತು. ರಾಹುಲ್ ಚಹಾರ್ ಎಸೆದ ಒಂದೇ ಓವರ್‌ನಲ್ಲಿ ನಾಯಕ ಶ್ರೇಯಸ್ ಅಯ್ಯರ್ ಮತ್ತು ನಿತೀಶ್ ರಾಣಾ ಅವರನ್ನು ತಂಡ ಕಳೆದುಕೊಂಡಿತು.
ಆದಾಗ್ಯೂ, ರಸೆಲ್ ತಮ್ಮ ಸ್ಫೋಟಕ ಆಕ್ರಮಣಕಾರಿ ಬ್ಯಾಟಿಂಗ್ ಶುರು ಮಾಡಿದ್ದೆ ತಡ ಸಿಕ್ಸ್ ಹೊಡೆಯುವ ಮೂಲಕ ಸ್ಪಿನ್ ಬೋಲರ್ಸ್ ಅನ್ನು ಕೂಡ ಹಿಂದೆ ಹಾಕಿದ್ದಾರೆ. ರಸೆಲ್ 15 ನೇ ಓವರ್‌ನಲ್ಲಿ 2 ಬೃಹತ್ ಸಿಕ್ಸರ್‌ಗಳೊಂದಿಗೆ ಆಟವನ್ನು ಅಂತ್ಯಗೊಳಿಸಿದರು. ಬುಧವಾರದಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ KKR ಸೋಲು ಕಂಡ ಬಳಿಕ ಬೇಸರವನ್ನು ಹೊರಹಾಕಿದ್ದ ಆಂಡ್ರೆ ರಸೆಲ್ ತಮ್ಮ ಪವರ್ ಫುಲ್ ಹಿಟ್ಟಿಂಗ್ ನಿಂದ ತಂಡವನ್ನು ಗೆಲುವಿನ ಹಾದಿಗೆ ನೂಕಿದರು.