Ahmedabad: ಕೊನೇ ಓವರ್‌ನಲ್ಲಿ 5 ಸಿಕ್ಷರ್ ಸಿಡಿಸಿದ ರಿಂಕು ಸಿಂಗ್. ಗೆಲುವು ಅಸಾಧ್ಯ ಅಂತಿದ್ದ ಕೆಕೆಆರ್‌ಗೆ (KKR) ಗೆಲುವಿನ ಸಿಹಿ. ಇದು ನಿನ್ನೆ ಕೆಕೆಆರ್ ಹಾಗೂ ಗುಜರಾತ್ ಟೈಟನ್ಸ್ (KKR Gujarat Titans Highlight) ವಿರುದ್ಧ ನಡೆದಿರುವ ರೋಚಕ ಪಂದ್ಯದ ಹೈಲೈಟ್. ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಾ 16ನೇ ಆವೃತ್ತಿಯ ಪಂದ್ಯಗಳು ದಿನದಿಂದ ದಿನಕ್ಕೆ ಇನ್ನಷ್ಟು ಕುತೂಹಲ ಹೆಚ್ಚಿಸುತ್ತಿವೆ. ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದಿದ್ದ ಸ್ಮರಣೀಯ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್, ಗುಜರಾತ್ ಟೈಟನ್ಸ್ (Gujarat Titans) ವಿರುದ್ಧ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಮೂರು ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.

ಈ ಪಂದ್ಯದ ಗೆಲುವು ಕೆಕೆಆರ್‌ಗೆ ಅಷ್ಟು ಸುಲಭವಾಗಿರಲಿಲ್ಲ. ಆದರೆ ಕೊನೆಯ ಓವರ್‌ನಲ್ಲಿ 29ರ ಅಗತ್ಯವಿತ್ತು.
ಅಂತಿಮ ಓವರ್‌ನಲ್ಲಿ ರಿಂಕು ಸಿಂಗ್ ಅವರು ಸತತ ಐದು ಸಿಕ್ಸರ್ (Sixer) ಗಳನ್ನು ಹೊಡೆಯುವ ಮೂಲಕ ಕೊಲ್ಕತ್ತಾ ತಂಡಕ್ಕೆ ಗೆಲುವು ತಂದು ಕೊಟ್ಟರು.
https://youtube.com/shorts/nonjJbhIJRU?feature=share
ಟೈಟನ್ಸ್ ಪರ ಅಂತಿಮ ಓವರ್ ಬೌಲ್ ಮಾಡಿದ್ದ ಯಶ್ ದಯಾಳ್ ಅವರಿಗೆ ಬಾರಿ ನಿರಾಶೆಯಾಯಿತು.
ಐಪಿಎಲ್ ಇತಿಹಾಸದಲ್ಲಿ ರಿಂಕು ಸಿಂಗ್ (Rinku Singh) ಅವರು, ಒಂದು ಓವರ್ (Over) ನಲ್ಲಿ ಐದು ಸಿಕ್ಸರ್ ಸಿಡಿಸಿದ ನಾಲ್ಕನೇ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.
ವೆಸ್ಟ್ ಇಂಡೀಸ್ ನ ಮಾಜಿ ಆಟಗಾರರಾದ ಕ್ರಿಸ್ ಗೇಲ್, ಈ ಸಾಧನೆಯನ್ನು ಮಾಡಿದ ಮೊದಲ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.
ಇನ್ನುಳಿದಂತೆ ರವೀಂದ್ರ ಜಡೇಜಾ ಹಾಗೂ ರಾಹುಲ್ ತೇವಾಟಿಯ ಅವರು ಈ ಸಾಧನೆಯನ್ನು ಮಾಡಿದ ಬ್ಯಾಟ್ಸ್ಮನ್ ಗಳಾಗಿದ್ದಾರೆ.
ಕ್ರಿಸ್ ಗೇಲ್ ಸಿಕ್ಸರ್ ಸ್ಮರಣೀಯ: ಕ್ರಿಸ್ ಗೇಲ್ (Chris Gayle)ರವರು ಐಪಿಎಲ್ ಇತಿಹಾಸದಲ್ಲಿ ಒಂದೇ ಓವರ್ ನಲ್ಲಿ ಐದು ಸಿಕ್ಸರ್ ಸಿಡಿಸಿದ ಮೊದಲ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.
2012ರ ಐಪಿಎಲ್ ಟೂರ್ನಿಯಲ್ಲಿ ಪುಣೆ ವಾರಿರ್ಸ್ ತಂಡದ ರಾಹುಲ್ ಶರ್ಮಾ ಅವರ ಓವರ್ ನಲ್ಲಿ ಕ್ರಿಸ್ ಗೇಲ್ ಈ ಸಾಧನೆ ಮಾಡಿದರು. ಒಂದು ಓವರ್ ನಲ್ಲಿ ಐದು ಸಿಕ್ಸರ್ ಸಿಡಿಸಿ ಈ ಸಾಧನೆ ಮೆರೆದಿದ್ದಾರೆ.
ಕ್ರಿಸ್ ಗೇಲ್ ರವರು ಈ ಆವೃತ್ತಿಯ ಟೂರ್ನಿಯಲ್ಲಿ ಆರ್‌ಸಿಬಿ ತಂಡದಲ್ಲಿ ಭರ್ಜರಿ ಫಾರ್ಮ್ ನಲ್ಲಿದ್ದರು.
ಈ ಸಮಯದಲ್ಲಿ ರಾಹುಲ್ ಶರ್ಮ (Rahul Sharma) ಓವರ್ನಲ್ಲಿ ಕ್ರಿಸ್ ಗೇಲ್ ಅವರು ಮೈದಾನದ ಎಲ್ಲಾ ಕಡೆ ಸಿಕ್ಸರ್ ಗಳ ಮೇಲೆ ಸಿಕ್ಸರ್ ಗಳನ್ನು ಸಿಡಿಸುವ ಮೂಲಕ ಆರ್‌ಸಿಬಿ ಅಭಿಮಾನಿಗಳಿಗೆ ಭರ್ಜರಿ ರಸದೌತಣವನ್ನು ನೀಡಿತ್ತು.

ರಾಹುಲ್ ತೆವಾಟಿಯ ಸಿಕ್ಸರ್ ಸಾಧನೆ: ಗುಜರಾತ್ ಟೈಟಾನ್ಸ್ ತಂಡದ ಆಲ್ರೌಂಡರ್ ರಾಹುಲ್ ತೇವಾಟಿಯ ಈ ಸಾಧನೆ ಮಾಡಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
ಇವರು 2020ರ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಈ ಸಾಧನೆ ಮಾಡಿದ್ದರು.
ಈ ಪಂದ್ಯದಲ್ಲಿ ಪಂಜಾಬ್ ಕಿಮ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ (Rajasthan Royals) ಸೋಲುವುದು ಬಹುತೇಕ ಖಚಿತವಾಗಿತ್ತು, ಅದರಂತೆ ಮಧ್ಯಮ ಕ್ರಮಾಂಕದ (KKR Gujarat Titans Highlight) ಆರಂಭದಲ್ಲಿ ಹೆಚ್ಚಿನ ಎಸೆತಗಳನ್ನು ತೆಗೆದುಕೊಂಡಿದ್ದರು.
ತದನಂತರ ಶೆಲ್ಡನ್ ಕಾರ್ಟಿಲ್ ಅವರ ಓವರ್ನಲ್ಲಿ ಐದು ಭರ್ಜರಿ ಸಿಕ್ಸರ್ ಗಳನ್ನು ಸಿಡಿಸುವ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡವನ್ನು ಗೆಲ್ಲಿಸಿದ್ದರು.
ರವೀಂದ್ರ ಜಡೇಜಾ ಸೂಪರ್ ಸಿಕ್ಸರ್: ರವೀಂದ್ರ ಜಡೇಜಾ (Ravindra Jadeja) ರವರು 2021ರ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಒಂದೇ ಓವರನಲ್ಲಿ 5 ಸಿಕ್ಸರ್ ಬಾರಿಸಿದ್ದರು.
ಈ ಆವೃತ್ತಿ ನಲ್ಲಿ ಆರ್ ಸಿ ಬಿ ಪರ ಅದ್ಭುತ ಲಯದಲ್ಲಿದ್ದ ರವೀಂದ್ರ ಜಡೇಜಾ, ಐದು ಭರ್ಜರಿಗಳನ್ನು ಬಾರಿಸಿದ್ದರು.
ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡವನ್ನು ಗೆಲ್ಲಿಸಿದ್ದರು.
ಆರಂಭದಲ್ಲಿ ಸ್ವಲ್ಪ ಹೆಚ್ಚಿನ ಎಸೆತಗಳನ್ನು ತೆಗೆದುಕೊಂಡಿದ್ದರು ನಂತರ ಹರ್ಷಲ್ ಪಟೇಲ್ ಐದು ಸಿಕ್ಸರ್ ಸಿಡಿಸುವ ಮೂಲಕ ಸಿಎಸ್‌ಕೆ ತಂಡವನ್ನು ಗೆಲುವಿನ ದಡ ಸೇರಿಸಿದ್ದರು.
ರಿಂಕು ಸಿಂಗ್ ಸಿಕ್ಸರ್ ಸಕ್ಸಸ್: ಕೊಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ತಂಡದ ರಿಂಕು ಸಿಂಗ್ ರವರು ಐಪಿಎಲ್ ಇತಿಹಾಸದಲ್ಲಿ ಒಂದೇ ಓವರ್ನಲ್ಲಿ ಐದು ಸಿಕ್ಸರ್ ಸಿಡಿಸಿದ ನಾಲ್ಕನೇ ಬ್ಯಾಟ್ಸ್ಮನ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಸೋಮವಾರ ನಡೆದಿದ್ದ 2023ರ ಐಪಿಎಲ್ ಟೂರ್ನಿಯಾ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ರಿಂಕು ಸಿಂಗ್ ರವರು ಈ ಸಾಧನೆಯನ್ನು ಮಾಡಿದ್ದಾರೆ.
ಕೊನೆಯ ಓವರ್ನಲ್ಲಿ 29 ರನ್ ಗಳು ಅಗತ್ಯವಿದ್ದಾಗ ಯಶ್ ದಯಾಳ್ ಅವರ ಓವರ್ನಲ್ಲಿ ರಿಂಕು ಭರ್ಜರಿ ಸಿಕ್ಸರ್ ಗಳನ್ನು ಸಿಡಿಸಿದ್ದರು.
ಈ ಮೂಲಕ ಕೊಲ್ಕತ್ತಾ ತಂಡವನ್ನು ಗೆಲುವಿನ ದಡ ಸೇರಿಸಿದರು.ಹಾಗಾಗಿ ರಿಂಕು ಸಿಂಗ್ ರವರ ಈ ಇನ್ನಿಂಗ್ಸ್(Innings), ಐಪಿಎಲ್ ಇತಿಹಾಸದ ಪುಟ ಸೇರಿದೆ
ಭವ್ಯಾ ಆರ್.ಜೆ