- ನಂದಿನಿ ಸ್ಟ್ರಾಬೆರಿ ಹಾಲು ವಿವಾದ: ಡಾ. ಶರಣ್ಯಾ ಪದ್ಮಾ (KMF FIR against Dr Sharanya Padma) ವಿರುದ್ಧ ಪ್ರಕರಣ
- ಉತ್ಪನ್ನಗಳು ಸುರಕ್ಷಿತವೆಂದು ಕೆಎಂಎಫ್ ಸ್ಪಷ್ಟನೆ
- ಕ್ಯಾನ್ಸರ್ ಆರೋಪಕ್ಕೆ ಕೆಎಂಎಫ್ ತೀವ್ರ ಖಂಡನೆ; ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸಿದ ಹೇಳಿಕೆ
Bengaluru: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಒಂದು ರೀಲ್ಸ್ ವಿಡಿಯೋ (KMF FIR against Dr Sharanya Padma) ಇದೀಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ.
ಬೆಂಗಳೂರಿನ ಚರ್ಮರೋಗ ತಜ್ಞೆ ಡಾ. ಶರಣ್ಯಾ ಪದ್ಮಾ (Dr. Sharanya Padma) ಅವರು ಪ್ರಸಿದ್ಧ ಹಾಲು ಉತ್ಪನ್ನ ಬ್ರಾಂಡ್ ‘ನಂದಿನಿ’ (Nandhini) ಕುರಿತು
ಗಂಭೀರ ಆರೋಪಗಳನ್ನು ಮಾಡಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಹಾಲು ಮಹಾಮಂಡಳಿ (KMF) ಅವರ ವಿರುದ್ಧ ಪೊಲೀಸ್ ದೂರು ದಾಖಲಿಸಿದೆ.
ಈ ಹೇಳಿಕೆಗಳು ಆಧಾರರಹಿತ ಹಾಗೂ ಬ್ರಾಂಡ್ ಗೌರವಕ್ಕೆ ಧಕ್ಕೆ ತರುವಂತಿವೆ ಎಂದು ಕೆಎಂಎಫ್ ಆರೋಪಿಸಿದೆ. ಪ್ರಕರಣ ದಾಖಲಾದ ನಂತರ ಪೊಲೀಸರು
ತನಿಖೆ ಆರಂಭಿಸಿದ್ದು, ಈ ವಿಷಯ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಅಷ್ಟಕ್ಕೂ ಘಟನೆ ಏನೆಂದರೆ, ಮಣಿಪಾಲ್ ಆಸ್ಪತ್ರೆ ಮತ್ತು ಮಾಲೂರಿನ ಖಾಸಗಿ ಕ್ಲಿನಿಕ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ. ಶರಣ್ಯಾ ಪದ್ಮಾ
ಅವರು ಫೆಬ್ರವರಿ 8ರಂದು ಇನ್‌ಸ್ಟಾಗ್ರಾಮ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ವಿಡಿಯೋವನ್ನು ಅಪ್‌ಲೋಡ್ (Upload) ಮಾಡಿದ್ದರು.
ಆ ವಿಡಿಯೋದಲ್ಲಿ ನಂದಿನಿ ಬ್ರಾಂಡ್‌ನ ಕೆಲವು ಉತ್ಪನ್ನಗಳಾದ ಕ್ರೀಮ್ ಬನ್ (Cream Bun) , ಸ್ಟ್ರಾಬೆರಿ ಫ್ಲೇವರ್ಡ್ ಮಿಲ್ಕ್ (Strawberry Flavored Milk) ಹಾಗೂ ಇತರ ಪಾನೀಯಗಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ.
ವಿಡಿಯೋ ಕಡಿಮೆ ಅವಧಿಯದ್ದಾಗಿದ್ದರೂ ಅದರಲ್ಲಿದ್ದ ಆರೋಪಗಳು ಗಂಭೀರವಾಗಿದ್ದು, ಸಾವಿರಾರು ಮಂದಿ ವೀಕ್ಷಣೆ ಮಾಡಿ ಹಂಚಿಕೊಂಡಿದ್ದಾರೆ.
ವೈದ್ಯೆಯ ಆರೋಪಗಳ ಪ್ರಕಾರ, ನಂದಿನಿ ಉತ್ಪನ್ನಗಳು ‘ಟಾಕ್ಸಿಕ್’ (Toxic) ರಾಸಾಯನಿಕಗಳಿಂದ ಕೂಡಿದ್ದು, ಅವುಗಳನ್ನು ದೀರ್ಘಕಾಲ ಸೇವಿಸಿದರೆ
ಆಟೋಇಮ್ಯೂನ್ (Autoimmune) ಕಾಯಿಲೆಗಳು ಮತ್ತು ಭವಿಷ್ಯದಲ್ಲಿ ಕ್ಯಾನ್ಸರ್ ಸಂಭವಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ವಿಶೇಷವಾಗಿ ಸ್ಟ್ರಾಬೆರಿ ಹಾಲಿನಲ್ಲಿ ನೈಸರ್ಗಿಕ ಹಣ್ಣುಗಳಿಲ್ಲದೆ ಕೃತಕ (KMF FIR against Dr Sharanya Padma) ಬಣ್ಣಗಳು ಮತ್ತು ಪ್ರಿಸರ್ವೇಟಿವ್ಸ್ (Preservatives)
ಮಾತ್ರ ಇವೆ ಎಂದು ಅವರು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. “ಇದು ಆಹಾರವಲ್ಲ, ವಿಷ” ಎಂದು ಅವರು ಉಲ್ಲೇಖಿಸಿರುವುದು ಹೆಚ್ಚಿನ ವಿವಾದಕ್ಕೆ ಕಾರಣವಾಗಿದೆ.
ಸರ್ಕಾರ ಹಾಗೂ ಕೆಎಂಎಫ್ ಲಾಭದ ಉದ್ದೇಶದಿಂದ ಜನರ ಆರೋಗ್ಯದೊಂದಿಗೆ ಆಟವಾಡುತ್ತಿವೆ ಎಂಬ ಗಂಭೀರ ಆರೋಪವನ್ನೂ ಅವರು ಮಾಡಿದ್ದಾರೆ.
ಈ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿರುವ ಕರ್ನಾಟಕ ಹಾಲು ಮಹಾಮಂಡಳಿ, ತಮ್ಮ ಎಲ್ಲಾ ಉತ್ಪನ್ನಗಳು ಭಾರತೀಯ ಆಹಾರ ಸುರಕ್ಷತಾ ಮತ್ತು ಮಾನದಂಡ ಪ್ರಾಧಿಕಾರ (FSSAI) ನಿಗದಿಪಡಿಸಿರುವ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತವೆ ಎಂದು ಸ್ಪಷ್ಟಪಡಿಸಿದೆ.
ನಂದಿನಿ ಬ್ರಾಂಡ್ ದಶಕಗಳಿಂದ ಕೋಟ್ಯಾಂತರ ಗ್ರಾಹಕರ ವಿಶ್ವಾಸ ಗಳಿಸಿರುವ ಸಂಸ್ಥೆಯಾಗಿದ್ದು, ಈ ರೀತಿಯ ಆಧಾರರಹಿತ ಹೇಳಿಕೆಗಳು ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸುತ್ತವೆ ಎಂದು ಕೆಎಂಎಫ್ ಅಭಿಪ್ರಾಯಪಟ್ಟಿದೆ.
ಬ್ರಾಂಡ್ ಗೌರವಕ್ಕೆ ಧಕ್ಕೆ ತಂದಿರುವ ಹಿನ್ನೆಲೆಯಲ್ಲಿ ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯವಾಯಿತು ಎಂದು ಸಂಸ್ಥೆ ತಿಳಿಸಿದೆ.
ಕೆಎಂಎಫ್ ನೀಡಿದ ದೂರಿನ ಮೇರೆಗೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈದ್ಯರು,
ತಜ್ಞರು ನೀಡುವ ಹೇಳಿಕೆಗಳಿಗೆ ದೊಡ್ಡ ಪ್ರಭಾವವಿರುವುದರಿಂದ, ಇಂತಹ ಆರೋಪಗಳು ವೈಜ್ಞಾನಿಕ ಆಧಾರಗಳೊಂದಿಗೆ ಇರಬೇಕೆಂಬ ಚರ್ಚೆ ಈಗ ಉದ್ಭವಿಸಿದೆ.
ಒಂದು ಕಡೆ ಗ್ರಾಹಕರ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯವಾದರೆ, ಮತ್ತೊಂದು ಕಡೆ ಸಾಕ್ಷ್ಯಾಧಾರವಿಲ್ಲದ ಹೇಳಿಕೆಗಳು ಬ್ರಾಂಡ್‌ಗಳು ಮತ್ತು
ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಬಹುದು ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಈ ಪ್ರಕರಣದ ತನಿಖೆ ಬಳಿಕ ಸತ್ಯಾಸತ್ಯತೆ ಸ್ಪಷ್ಟವಾಗುವ ನಿರೀಕ್ಷೆಯಿದೆ.
ಇದನ್ನು ಓದಿ : https://vijayatimes.com/stone-pelting-during-shivaji-jayanti/