• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ನಕಲಿ ನಂದಿನಿ ತುಪ್ಪಕ್ಕೆ ಕಡಿವಾಣ: ಗ್ರಾಹಕರ ರಕ್ಷಣೆಗಾಗಿ ಕೆಎಂಎಫ್ ಹೊಸ ಕ್ಯೂಆರ್ ಕೋಡ್ ತಂತ್ರಜ್ಞಾನ ಜಾರಿ

Teju Srinivas by Teju Srinivas
in ಪ್ರಮುಖ ಸುದ್ದಿ, ರಾಜ್ಯ, ವಿಜಯ ಟೈಮ್ಸ್‌
ನಕಲಿ ನಂದಿನಿ ತುಪ್ಪಕ್ಕೆ ಕಡಿವಾಣ: ಗ್ರಾಹಕರ ರಕ್ಷಣೆಗಾಗಿ ಕೆಎಂಎಫ್ ಹೊಸ ಕ್ಯೂಆರ್ ಕೋಡ್ ತಂತ್ರಜ್ಞಾನ ಜಾರಿ
0
SHARES
22
VIEWS
Share on FacebookShare on Twitter
  • ಮೊಬೈಲ್‌ನಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ (KMF new QR code on products) ಮಾಡಿದರೆ ಕ್ಷಣಾರ್ಧದಲ್ಲಿ ಮಾಹಿತಿ
  • ಪ್ರತಿಯೊಂದು ತುಪ್ಪದ ಬಾಟಲಿಗೂ ಡಿಜಿಟಲ್ ಗುರುತು ನೀಡಲು ಕೆಎಂಎಫ್ ನಿರ್ಧಾರ
  • ಕ್ಯೂಆರ್ ಕೋಡ್ ಮೂಲಕ ಉತ್ಪನ್ನದ ಸಂಪೂರ್ಣ ಮಾಹಿತಿ ಪಡೆಯುವ ವ್ಯವಸ್ಥೆ

Bengaluru: ರಾಜ್ಯದ ಜನರಿಗೆ ವಿಶ್ವಾಸದ ಸಂಕೇತವಾಗಿರುವ ನಂದಿನಿ ತುಪ್ಪದ ಹೆಸರಿನಲ್ಲಿ ನಕಲಿ ಉತ್ಪನ್ನಗಳು (KMF new QR code on products) ಮಾರುಕಟ್ಟೆಯಲ್ಲಿ ಹರಿದಾಡುತ್ತಿರುವ ಹಿನ್ನೆಲೆ, ಕರ್ನಾಟಕ ಹಾಲು ಮಹಾಮಂಡಳಿ (KMF) ಮಹತ್ವದ ಕ್ರಮ ಕೈಗೊಂಡಿದೆ.

ಇನ್ನು ಮುಂದೆ ಗ್ರಾಹಕರು ಖರೀದಿಸುವ ನಂದಿನಿ ತುಪ್ಪದ ಪ್ಯಾಕೆಟ್ (Packet) ಅಥವಾ ಬಾಟಲಿ (Bottle) ಅಸಲಿಯೋ ನಕಲಿಯೋ ಎಂಬುದನ್ನು ತಮ್ಮ ಮೊಬೈಲ್ ಮೂಲಕವೇ ಸುಲಭವಾಗಿ ಪರಿಶೀಲಿಸಬಹುದು.

KMF new QR code on products

ಇದಕ್ಕಾಗಿ ಕೆಎಂಎಫ್ ಹೊಸದಾಗಿ ಕ್ಯೂಆರ್ ಕೋಡ್ (QR Code) ಆಧಾರಿತ ತಂತ್ರಜ್ಞಾನವನ್ನು (KMF new QR code on products) ಪರಿಚಯಿಸಲು ಮುಂದಾಗಿದೆ.

ಈ ಕ್ರಮದಿಂದ ನಕಲಿ ಉತ್ಪನ್ನಗಳ ಮಾರಾಟಕ್ಕೆ ದೊಡ್ಡ ಮಟ್ಟದ ಬ್ರೇಕ್ ಸಿಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳು ಹಾಗೂ ಹೊರರಾಜ್ಯಗಳಲ್ಲಿ ನಂದಿನಿ ತುಪ್ಪದ ನಕಲಿ ಉತ್ಪನ್ನಗಳು ಮಾರಾಟವಾಗುತ್ತಿರುವ ಬಗ್ಗೆ

ಹಲವಾರು ದೂರುಗಳು ಬಂದಿದ್ದವು. ಇದು ಕೇವಲ ಗ್ರಾಹಕರ ಆರೋಗ್ಯಕ್ಕೆ ಅಪಾಯಕಾರಿಯಾಗುವುದಲ್ಲದೆ, ನಂದಿನಿ ಬ್ರ್ಯಾಂಡ್‌ನ ವಿಶ್ವಾಸಾರ್ಹತೆಗೆ ಕೂಡ ಹಾನಿ ಉಂಟುಮಾಡುತ್ತಿತ್ತು.

ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೆಎಂಎಫ್ ಆಡಳಿತ ಮಂಡಳಿ, ಆಹಾರ ಇಲಾಖೆಯ ಅನುಮತಿಯೊಂದಿಗೆ ಪ್ರತಿಯೊಂದು ತುಪ್ಪದ ಪ್ಯಾಕೆಟ್ ಹಾಗೂ ಬಾಟಲಿಗಳ ಮೇಲೆ ವಿಶೇಷ ಸುರಕ್ಷತಾ ಕ್ಯೂಆರ್ ಕೋಡ್ ಅಳವಡಿಸುವ ನಿರ್ಧಾರ ತೆಗೆದುಕೊಂಡಿದೆ.

ಈ ಹೊಸ ತಂತ್ರಜ್ಞಾನ ಬಳಕೆ ಬಹಳ ಸರಳವಾಗಿದೆ. ಗ್ರಾಹಕರು ತುಪ್ಪದ ಪ್ಯಾಕೆಟ್ ಮೇಲಿರುವ ಕ್ಯೂಆರ್ ಕೋಡ್ ಅನ್ನು ತಮ್ಮ ಸ್ಮಾರ್ಟ್‌ಫೋನ್ (Smartphone) ಮೂಲಕ ಸ್ಕ್ಯಾನ್ ಮಾಡಿದರೆ, ತಕ್ಷಣವೇ ಮೊಬೈಲ್‌ಗೆ ಒಟಿಪಿ (OTP) ಬರುತ್ತದೆ.

ಆ ಒಟಿಪಿಯನ್ನು ನಮೂದಿಸಿದ ನಂತರ ಆ ತುಪ್ಪದ ಉತ್ಪನ್ನಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಪರದೆಯ ಮೇಲೆ ಕಾಣಿಸುತ್ತದೆ. ಉತ್ಪಾದನೆಯಾದ ಡೈರಿ, ಉತ್ಪಾದನೆಯ

ದಿನಾಂಕ, ಪ್ಯಾಕಿಂಗ್ ದಿನಾಂಕ, ಮಾರುಕಟ್ಟೆಗೆ ಬಿಡುಗಡೆಯಾದ ಸಮಯ ಮತ್ತು ಅಧಿಕೃತ ಡೀಲರ್ (Dealer) ಹಾಗೂ ರಿಟೇಲರ್ ವಿವರಗಳು ಎಲ್ಲವೂ ಅದರಲ್ಲಿ ಲಭ್ಯವಾಗುತ್ತವೆ.

ಒಂದು ವೇಳೆ ಸ್ಕ್ಯಾನ್ ಮಾಡಿದಾಗ ಮಾಹಿತಿ ಸಿಗದಿದ್ದರೆ ಅಥವಾ ಒಟಿಪಿ ಬರದಿದ್ದರೆ, ಅದು ನಕಲಿ ಉತ್ಪನ್ನವಾಗಿರುವ ಸಾಧ್ಯತೆ ಇದೆ ಎಂದು ತಿಳಿದುಬರುತ್ತದೆ.

ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ಅವರ ಪ್ರಕಾರ, ನಕಲಿ ಉತ್ಪನ್ನಗಳ ವಿರುದ್ಧ ಹೋರಾಡಲು ಕ್ಯೂಆರ್ ಕೋಡ್ ವ್ಯವಸ್ಥೆ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ.

ಪ್ರಸ್ತುತ ಈ ತಂತ್ರಜ್ಞಾನವನ್ನು ನಂದಿನಿ ತುಪ್ಪಕ್ಕೆ ಮಾತ್ರ ಜಾರಿಗೆ ತರಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ನಂದಿನಿ ಬೆಣ್ಣೆ ಸೇರಿದಂತೆ ಇತರ ಪ್ರಮುಖ ಹಾಲು

ಉತ್ಪನ್ನಗಳಿಗೂ ಇದೇ ವಿಧಾನವನ್ನು ವಿಸ್ತರಿಸುವ ಯೋಜನೆ ಇದೆ. ಇದರಿಂದ ಗ್ರಾಹಕರು ಖರೀದಿಸುವ ಪ್ರತಿಯೊಂದು ಉತ್ಪನ್ನಕ್ಕೂ ಡಿಜಿಟಲ್ ಗುರುತು ಸಿಗಲಿದೆ.

ಇತ್ತೀಚೆಗೆ ಸಿಸಿಬಿ ಪೊಲೀಸರ ಸಹಯೋಗದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಕರ್ನಾಟಕದಲ್ಲಷ್ಟೇ ಅಲ್ಲದೆ ತಮಿಳುನಾಡಿನ ತಿರುಪೂರಿನಲ್ಲಿಯೂ ನಕಲಿ ನಂದಿನಿ ತುಪ್ಪ ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆಹಚ್ಚಲಾಗಿತ್ತು.

ಈ ಹಿನ್ನೆಲೆಯಲ್ಲಿ ಕೆಎಂಎಫ್ ಈಗ ಬಾರ್‌ಕೋಡ್ ವ್ಯವಸ್ಥೆಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಕ್ಯೂಆರ್ ಕೋಡ್ ತಂತ್ರಜ್ಞಾನವನ್ನು ಅಳವಡಿಸಿದೆ.

ಇನ್ನು ಮುಂದೆ ಗ್ರಾಹಕರು ಅಂಗಡಿಯಲ್ಲಿ ತುಪ್ಪ ಖರೀದಿಸುವ ಮುನ್ನ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಕೆಎಂಎಫ್ ಮನವಿ ಮಾಡಿದೆ.

ಈ ಕ್ರಮದಿಂದ ನಕಲಿ ಉತ್ಪನ್ನಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜಾರಿಯಾಗುವುದರ ಜೊತೆಗೆ, ನಂದಿನಿ ಬ್ರ್ಯಾಂಡ್ ಮೇಲಿನ ಜನರ ವಿಶ್ವಾಸ ಇನ್ನಷ್ಟು ಬಲವಾಗಲಿದೆ.

ಇದನ್ನು ಓದಿ : https://vijayatimes.com/india-won-t20-world-cup/

Tags: bengaluruKMFnandhiniQR CODE

Related News

ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆಗೆ ಕುಮಾರಸ್ವಾಮಿ ಪಟ್ಟು: ಪೊಲೀಸ್ ಆಯುಕ್ತರ ಕಚೇರಿ ಮೆಟ್ಟಿಲ ಮೇಲೆ ಧರಣಿ
ರಾಜಕೀಯ

ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆಗೆ ಕುಮಾರಸ್ವಾಮಿ ಪಟ್ಟು: ಪೊಲೀಸ್ ಆಯುಕ್ತರ ಕಚೇರಿ ಮೆಟ್ಟಿಲ ಮೇಲೆ ಧರಣಿ

October 15, 2026
ಕರ್ನಾಟಕದಲ್ಲಿ ಶೇ. 32ರಷ್ಟು ಮಳೆ ಕೊರತೆ: 1918ರ ಬಳಿಕ ಈ ಸಲ ತೀವ್ರ ಮಳೆ ಅಭಾವ
ಪ್ರಮುಖ ಸುದ್ದಿ

ಕರ್ನಾಟಕದಲ್ಲಿ ಶೇ. 32ರಷ್ಟು ಮಳೆ ಕೊರತೆ: 1918ರ ಬಳಿಕ ಈ ಸಲ ತೀವ್ರ ಮಳೆ ಅಭಾವ

October 15, 2026
ಗ್ರಾಮ ಪಂಚಾಯಿತಿಗಳ ಆರ್ಥಿಕ ಬಲವರ್ಧನೆಗೆ ಮುಂದಾದ ಸರ್ಕಾರ : ಸಿಎಂ ಡಿಕೆ ಶಿವಕುಮಾರ್ ಮಹತ್ವದ ಘೋಷಣೆ
ಪ್ರಮುಖ ಸುದ್ದಿ

ಗ್ರಾಮ ಪಂಚಾಯಿತಿಗಳ ಆರ್ಥಿಕ ಬಲವರ್ಧನೆಗೆ ಮುಂದಾದ ಸರ್ಕಾರ : ಸಿಎಂ ಡಿಕೆ ಶಿವಕುಮಾರ್ ಮಹತ್ವದ ಘೋಷಣೆ

October 15, 2026
ಸಿದ್ದರಾಮಯ್ಯ ನಕಲಿ ವಿಡಿಯೋ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಇಬ್ಬರು ಶಂಕಿತರು ಪೊಲೀಸ್ ವಶಕ್ಕೆ
ಪ್ರಮುಖ ಸುದ್ದಿ

ಸಿದ್ದರಾಮಯ್ಯ ನಕಲಿ ವಿಡಿಯೋ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಇಬ್ಬರು ಶಂಕಿತರು ಪೊಲೀಸ್ ವಶಕ್ಕೆ

October 14, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.