ಕೂತಲ್ಲೇ ಕೋಟಿ ಗಳಿಸಿ! ಎನ್‌ಎಫ್‌ಟಿ ಅನ್ನೋ ದುಡ್ಡಿನ ಖಜಾನೆ. ಈ ಖಜಾನೆಯ ಹಣ ನಿಮ್ಮದಾಗಿಸಬಹುದು. ನಿಮ್ಮ ಒಂದು ಫೋಟೋ NFTಯಲ್ಲಿ ಕೋಟಿಗೆ ಬಿಕರಿಯಾಗಬಹುದು. ಸ್ನೇಹಿತ್ರೆ ನೀವು Crypto currency , Bitcoin ಬಗ್ಗೆ ನೀವು ಬಹಳ ಕೇಳಿರಬಹುದು. ಅದ್ರಲ್ಲೂ ನಮ್ಮ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಿಟ್ ಕಾಯಿನ್ ಮೇಲೆ ಶೇಕಡಾ 30 ರಷ್ಟು ತೆರಿಗೆ ಹಾಕಿದ್ಮೇಲೆ ಕ್ರಿಪ್ಟೋ ಕರೆನ್ಸಿ ಬಗ್ಗೆ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಕ್ರಿಪ್ಟೋ ಕರೆನ್ಸಿ ಅಂದ್ರೆ ಕಣ್ಣಿಗೆ ಕಾಣದ, ಆದ್ರೆ ಚಾಲ್ತಿಯಲ್ಲಿರುವ ಡಿಜಿಟಲ್ ದುಡ್ಡು. ಇದಕ್ಕೆ ನಮ್ಮ ಭಾರತದಲ್ಲಿ ಇನ್ನೂ ಕಾನೂನಾತ್ಮಕ ಮಾನ್ಯತೆ ಲಭ್ಯವಾಗಿಲ್ಲ. ಆದ್ರೂ ಜನರು ಕ್ರಿಪ್ಟೋ ಕರೆನ್ಸಿಯಾಗಿರುವ ಬಿಟ್ ಕಾಯಿನ್ ರೂಪದಲ್ಲಿ ಹೂಡಿಕೆ ಮಾಡುತ್ತಲೇ ಇದ್ದಾರೆ.

ಈ ಬಿಟ್ ಕಾಯಿನ್ ರೂಪದ್ದೇ ಹೊಸದೊಂದು ಡಿಜಿಟಲ್ ಪ್ಲಾಟ್ ಫಾರಂ ಬಂದಿದೆ. ಈ ಡಿಜಿಟಲ್ ವೇದಿಕೆ ಅದೆಷ್ಟೋ ಜನರ ಅದೃಷ್ಟದ ಬಾಗಿಲು ತೆರೆದಿದೆ. ಇದು ಅನೇಕರ ಪಾಲಿಗೆ ಹಣ ಕೊಡೋ ಖಜಾನೆಯಾಗಿದೆ. ನಿಮ್ಮ ಒಂದು ಸೆಲ್ಫಿ NFTಯಲ್ಲಿ ಕೋಟಿ ಬೆಲೆ ಬಾಳಬಹುದು ಗೊತ್ತಾ? ಬನ್ನಿ ಹಾಗಾದ್ರೆ ಈ ಎನ್‌ಎಫ್‌ಟಿ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ. ನಾವೂ ನಮ್ಮ ಅದೃಷ್ಟವನ್ನ ಪರೀಕ್ಷಿಸೋಣ. NFT ಅಂದ್ರೆ ನಾನಾ ಫಂಜಿಬಲ್ ಟೋಕನ್ (non-Fungible token) ಕನ್ನಡದಲ್ಲಿ ಸರಳವಾಗಿ ಇದನ್ನ ಬದಲಿಸಲಾಗದ ಅಥವಾ ವಿನಿಮಯ ಮಾಡಲಾಗದ ಟೋಕನ್ ಅನ್ನಬಹುದು. ಇದು Crypto currency ಅಂದ್ರೆ ಈ Bitcoin ಅಂತ ಕೇಳಿದ್ರಲ್ಲ ಅದರ ಜಾತಿಗೆ ಸೇರಿ ಸೇರಿದೆ. NFT ಒಂದು ಹೊಸ ವಿದ್ಯಮಾನ. ಇದು ಬಹಳ interesting ಸಹ ಇದೆ. ಉದಾಹರಣೆಗೆ, ಜಾಕ್ ಡೊರ್ಸೆಯ್ (Jack Dorsey) ತಾನು ಮಾಡಿದ ಮೊದಲ tweetನ screenshot ಅನ್ನ ಕೆಲವು ತಿಂಗಳುಗಳ ಹಿಂದೆ NFT ಮಾಡಿದರು. ಅದು ಎಷ್ಟೊ ಕೋಟಿ ಮೌಲ್ಯ ಪಡೆಯಿತು.
ಇನ್ನು ಭಾರತ ಮೂಲದ ಪರಾಗ್ ಅಗರ್ವಾಲ್ ಅನ್ನೋ ಉದ್ಯಮಿ ಚಹಾ ಕುಡಿಯುತ್ತಿರೊ ಚಿತ್ರವನ್ನು vardam tea company ಅಗರ್ವಾಲ್ ಅವರಿಗೆ NFT ರೂಪದಲ್ಲಿ ಉಡುಗೊರೆಯಾಗಿ ನೀಡಿತ್ತು. ಈಗ ಆ ಫೋಟೋ ಬೆಲೆ ಕೋಟಿ ದಾಟಿದೆ. ಇನ್ನೊಂದು ಇಂಟರೆಸ್ಟಿಂಗ್ ಘಟನೆ ಹೇಳೋದಾದ್ರೆ 29 ವರ್ಷಗಳ ಹಿಂದೆ ಜಗತ್ತಿನ ಮೊದಲ SMS merry Christmas ಅನ್ನೋ ಸಂದೇಶವನ್ನು Vodaphone company ಎನ್‌ಎಫ್‌ಟಿ ರೂಪದಲ್ಲಿ ಹರಾಜು ಹಾಕಿತ್ತು. ಎಸ್‌ಎಂಎಸ್‌ನ ಈ ಎನ್‌ಎಫ್‌ಟಿ ಸುಮಾರು 1.13 ಕೋಟಿಗೆ ಬಿಕರಿ ಅಯಿತು.

ಇಂಥಾ ಸಾಕಷ್ಟು ಉದಾಹರಣೆಗಳಿವೆ. ಆದರೆ ನಮ್ಮಂಥ ಜನ ಸಾಮಾನ್ಯರಿಗೆ ಹುಟ್ಟೋ ಪ್ರಶ್ನೆ ಏನಪ್ಪಾ ಅಂದ್ರೆ ಇವರಿಗೇನು ಹುಚ್ಚಾ ಅಂತ? ಯಾವುದೋ ಒಂದು tweetಗೆ, SMS screenshot ಗೆ ಇಷ್ಟು ಹಣ ಖರ್ಚು ಮಾಡೊಕ್ಕೆ. ಇವೆಲ್ಲಾ ಸುಲಭವಾಗಿ ಸಿಗುತ್ತೆ ಅಲ್ಲ ಅಂತ? ಇಲ್ಲೆ ನಮಗೆ NFTಯ ಮಹತ್ವ ತಿಳಿಯೋದು. ಎನ್‌ಎಫ್‌ಟಿಯನ್ನು ಸರಳವಾಗಿ ಅರ್ಥಮಾಡಿಕೊಳ್ಳಬೇಕು ಅಂದ್ರೆ ನಮಗೆ ಯಾವುದೋ ಪ್ರಾಜೆಕ್ಟ್‌ಗೆ ಮೊನಾಲಿಸಾ ಚಿತ್ರ ಬೇಕಾಗುತ್ತೆ. ಅದನ್ನ ನಾವು ಸುಲಭವಾಗಿ internet ನಲ್ಲಿ ಪಡ್ಕೋತೀವಿ. ಆದ್ರೆ ಮೋನಾಲೀಸಾ ಅಸಲಿ painting download ಮಾಡೋಕೆ ಸಾದ್ಯನಾ? ಇಲ್ಲ.
ಅಸಲಿ ಮೋನಾಲೀಸಾ ಚಿತ್ರ ಬೇಕಾದ್ರೆ ನಾವು ಒಂದಾ ಕದೀಬೇಕು ಇಲ್ಲಾ ಅದೇ ಪೈಟಿಂಗ್ ಅನ್ನು ಖರೀದಿಸಬೇಕು. ಅಂದ್ರೆ ಒಂದು ಸಲ ಅದು ಒರಿಜಿನಲ್ ಅಂತ ಮುದ್ರೆ ಒತ್ತಿದ್ರೆ ಆ ಮೇಲೆ ಅದನ್ನು ಯಾರೂ ನಕಲಿ ಮಾಡೋಕೆ ಸಾಧ್ಯ ಇಲ್ಲ. ಇದೇ ಕೆಲಸವನ್ನು ಎನ್‌ಎಫ್‌ಟಿ ಮಾಡುತ್ತೆ. ಒಂದು ಸಲ ಯಾವುದೇ ಸಂಗೀತ, ಆಲ್ಬಂ, ಫೋಟೋ, ಪೈಟಿಂಗ್, ಸಂದೇಶ ಏನೇ ಇರಲಿ ಅದನ್ನು ನೀವು ಎನ್‌ಎಫ್‌ಟಿ ಮಾಡಿದ್ರೆ ಮತ್ತೆ ಅದನ್ನು ಯಾರೂ ನಕಲಿ ಮಾಡಲು ಸಾಧ್ಯವಿಲ್ಲ. ಈ ಎನ್‌ಎಫ್‌ಟಿ ಬಿಟ್ ಕಾಯಿನ್ ಥರಾ blockchain ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸುತ್ತೆ. ಅಂದ್ರೆ ಒಂದು NFT ಅಥವ ಒಂದು ಕಲಾಕೃತಿ ಎಷ್ಟೆ ಕೈ ಬದಲಾಯಿಸಿದ್ರೂ ಅದರ ಮೂಲ ದಾಖಲೆ ಬದಲಾಗುವುದಿಲ್ಲ. ಮೂಲ ಕೃತಿ ಯಾರದ್ದು ಅನ್ನೋದು ಸ್ಪಷ್ಟವಾಗಿ ತಿಳಿಯುತ್ತೆ.
ಕಲಾಕೃತಿಗಳಿಗೆ ಭಾರೀ ಬೇಡಿಕೆ :

ಇಂದು NFT ಯಲ್ಲಿ ಹಲವು ಪ್ರಸಿದ್ಧ ಕಲಾಕೃತಿಗಳು ಕೋಟ್ಯಾಂತರ ರೂಪಾಯಿಗೆ ಬಿಕರಿಯಾಗ್ತಿವೆ. ಇನ್ನು ವಿಭಿನ್ನವಾಗಿರೋ ಸೆಲ್ಫಿಗಳನ್ನು ಎನ್‌ಎಫ್‌ಟಿ ಮಾಡಿ ಕೋಟ್ಯಾಂತರ ರೂಪಾಯಿ ಗಳಿಸ್ತಿದ್ದಾರೆ. ಇದಕ್ಕೆ ಇಂಡೋನೇಷಿಯಾದ ವಿದ್ಯಾರ್ಥಿ ಗೊಜಾಲಿಯೇ ಸಾಕ್ಷಿ. ಈತ ಹವ್ಯಾಸಕ್ಕಾಗಿ ತೆಗೆದ ಸೆಲ್ಫಿ ಇಂದು ಎನ್‌ಎಫ್‌ಟಿ ಆತನನ್ನು ಕೋಟ್ಯಾಧಿಪತಿ ಮಾಡಿದೆ.

ಈ ರೀತಿ ಅನೇಕರು ಎನ್‌ಎಫ್‌ಟಿ ಮೂಲಕ ತಮ್ಮ ಅದೃಷ್ಟ ಪರೀಕ್ಷೆ ಮಾಡ್ತಿದ್ದಾರೆ. ಕೆಲವರು ಕೈ ತುಂಬಾ ಹಣ ಗಳಿಸ್ತಿರೋದು ಸತ್ಯ. ಆದ್ರೆ ಈ ವ್ಯವಹಾರ crypto currency ಮೂಲಕ ನಡೆಯುತ್ತಿರುವುದರಿಂದ ಈ ಟ್ರೆಂಡ್ ಗಟ್ಟಿಯಾಗುತ್ತಾ ಅಥವಾ ನೀರಿನ ಮೇಲಿನ ಗುಳ್ಳೆಯಂತೆ ಠುಸ್ ಆಗುತ್ತಾ ಕಾದು ನೋಡೋಣ.
- ಪದ್ಮಶ್ರೀ