• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಆರೋಗ್ಯ

Schizophrenia : `ಸ್ಕಿಜೋಫ್ರೇನಿಯಾ’ ಎನ್ನುವ ಅಪರೂಪದ ಮಾನಸಿಕ ಖಾಯಿಲೆ ಬಗ್ಗೆ ಇಲ್ಲಿ ವಿವರ ಓದಿ

Mohan Shetty by Mohan Shetty
in ಆರೋಗ್ಯ, ಮಾಹಿತಿ
Mental Health
0
SHARES
1
VIEWS
Share on FacebookShare on Twitter

Mental Health : ಪ್ರತಿ ವರ್ಷ ಮೇ 23 ರಂದು ‘ವಿಶ್ವ ಸ್ಕಿಜೋಪ್ರೇನಿಯಾ ದಿನಾಚರಣೆ’ಯನ್ನು (Schizophrenia day) ವಿಶ್ವ ಆರೋಗ್ಯ ಸಂಸ್ಥೆ (WHO) ಹಮ್ಮಿಕೊಳ್ಳುತ್ತಿದೆ.

ಸ್ಕಿಜೋಫ್ರೇನಿಯಾ ಎಂಬ ಮಾನಸಿಕ ಕಾಯಿಲೆಗೆ (Mental Issues) ಕನ್ನಡದಲ್ಲಿ ‘ಚಿತ್ತವಿಕಲತೆ’ ಎಂದು ಕರೆಯಬಹುದು.

Know More about schejophronia

ಜರ್ಮನಿಯ(Germany) ಮನೋವೈದ್ಯನಾದ ಎಮಿಲ್ ಕ್ರಿಪ್ಲಿನ್(Emil Kriplin) 1887ರಲ್ಲಿ ಮೊದಲ ಬಾರಿಗೆ ಇದನ್ನು ಗುರುತಿಸಿದನು. ಆಗ ಅವನು ಈ ಕಾಯಿಲೆಗೆ ‘ಡೆಮೆನ್ಷಿಯಾ ಪ್ರೀಕಾಕ್ಸ್‌’ ಎಂದು ಕರೆದನು.

ನಂತರ ಯೂಗಿನ್ ಬ್ಲಾಲರ್ ಎಂಬ ಮನೋವೈದ್ಯನು (psychiatrist)1911ರಲ್ಲಿ ಆ ಹೆಸರಿಗೆ ಬದಲಾಗಿ ‘ಸ್ಕಿಜೋಫ್ರೇನಿಯಾ’ ಎಂದು ಹೆಸರಿಸಿದನು. ಇದರ ಬಗ್ಗೆ ವಿವರವಾಗಿ ತಿಳಿಯೋಣ.


ಪ್ರತಿಯೊಬ್ಬ ವ್ಯಕ್ತಿಗೂ ಯೋಚಿಸುವಾಗ ಬೇರೆ ಬೇರೆ ಯೋಚನೆಗಳು ಬರುವುದು ಸಹಜ, ಆದರೆ ಅವುಗಳಲ್ಲಿ ಒಂದಕ್ಕೊಂದು ಸಂಬಂಧವಿರುತ್ತದೆ. ಅವು ವಾಸ್ತವಿಕತೆಗೆ ಅನುಗುಣವಾಗಿರುತ್ತವೆ.

ಇತರರಿಗೆ ಅರ್ಥವಾಗುವಂತೆ ಹೇಳುತ್ತಾನೆ. ಯೋಚನೆಗಳೊಂದಿಗೆ ಭಾವನೆಗಳ ಹೊಂದಾಣಿಕೆಯ ಮಿಳಿತವಿರುತ್ತದೆ. ಭ್ರಮೆಯಿಂದ ಕೂಡಿರುವುದಿಲ್ಲ.

https://youtu.be/QER42TJv9Uc

ಆಲೋಚನೆಗಳು ಅವನ ಹಿಡಿತದಲ್ಲಿರುತ್ತದೆ. ಎಮಿಲ್ ಕ್ರಿಪ್ಲಿನ್ (Emil Criplin) ತನ್ನಲ್ಲಿ ಬರುವ ರೋಗಿಗಳಲ್ಲಿ ಇವುಗಳ ಬದಲಾಗಿ ಅಸಂಬದ್ಧ ಯೋಚನೆಗಳನ್ನು ಗುರುತಿಸಿದನು.

ಯೋಚನೆಗಳು ವಾಸ್ತವಿಕತೆಗೆ ಹೊಂದಿಕೊಂಡಿರದೆ ಭ್ರಮಾನಿರತವಾಗಿರುತ್ತಿದ್ದವು. ಆದರೆ ನೆನಪಿನ ಶಕ್ತಿ ಸರಿಯಾಗಿರುತ್ತಿತ್ತು. ಕ್ರಿಪ್ಲಿನ್, ಇದು ಹರೆಯದವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಎಂಬುದನ್ನು ಗಮನಿಸಿದನು.

ಅದಕ್ಕಾಗಿ ಈ ಕಾಯಿಲೆಗೆ ಡೆಮೆನ್ಷಿಯಾ ಪ್ರಿಕಾಕ್ಸ್ ಎಂದು ಹೆಸರಿಸಿದನು. ಆದರೆ, ಇದಕ್ಕೆ ವೈಜ್ಞಾನಿಕವಾದ (Scientific) ಮನೋವೈದ್ಯಕೀಯ ಚಿಕಿತ್ಸೆ ಆ ಕಾಲದಲ್ಲಿ ಇರಲಿಲ್ಲ.

Know More - about schejophronia

ಒಮ್ಮೆ ಒಬ್ಬ ವ್ಯಕ್ತಿಗೆ ಈ ಕಾಯಿಲೆ ಬಂದರೆ ಅವನ ಭವಿಷ್ಯವೇ ಕತ್ತಲಾಗುತ್ತಿತ್ತು. ಡೆಮೆನ್ಷಿಯಾ ಪ್ರಿಕಾಕ್ಸ್ ಅಥವಾ ಸ್ಕಿಜೋಫ್ರೇನಿಯಾ (schejophronia) ಕಾಯಿಲೆಯು ಎಂದೂ ವಾಸಿಯಾದ ಉದಾಹರಣೆಗಳಿರಲಿಲ್ಲ.

ಆದರೆ, ಮಾನಸಿಕ ಕಾಯಿಲೆಗಳಲ್ಲಿ ದೈಹಿಕ ಕಾಯಿಲೆಗಳಂತೆ ಬೇರೆ ಬೇರೆ ವಿಧಗಳಿವೆ ಎಂಬುದನ್ನು ಮೊದಲಿಗೆ ಗಮನಿಸಿದವರೂ ಸಹ ಕ್ರಿಪ್ಲಿನ್ ಅವರೇ.

ನಂತರ ಯೂಗಿನ್ ಬ್ಲಾಲರ್ ಸ್ಕಿಜೋಫ್ರೇನಿಯಾ ಎಂದು ಕರೆದು, ಅವುಗಳಲ್ಲಿಯೂ ವಿಧಗಳಿವೆ ಎಂಬುದನ್ನು ಗುರುತಿಸಿದರು. ಅವಕ್ಕೆ ಕ್ರಮವಾಗಿ ಸಿಂಪಲ್, ಕ್ಯಟಟಾನಿಕ್, ಪ್ಯಾರಾನಾಯ್ಡ್ ಮತ್ತು ಹೆಬಿಫ್ರೀನಿಕ್ ಸ್ಕಿಜೋಫ್ರೇನಿಯಾ ಎಂದು ಕರೆದನು.

ಯಾವ ವಿಧದ ಸ್ಕಿಜೋಫ್ರೇನಿಯಾವೇ ಆಗಲಿ ಅವರು ಜೀವನದಲ್ಲಿ ಸಾಧನೆಗೈಯ್ಯುವುದರಲ್ಲಿ ಹಿಂದುಳಿಯುತ್ತಿದ್ದರು.

ಇದನ್ನೂ ಓದಿ : https://vijayatimes.com/tweet-war-over-bjp-and-congress/

ಇತರರೊಂದಿಗೆ ಹೊಂದಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ವಾಸ್ತವಿಕ ಪ್ರಪಂಚಕ್ಕೆ ಹೊಂದಿಕೊಳ್ಳುವುದು ಕಷ್ಟವಾಗುತ್ತಿತ್ತು. ಅದರಲ್ಲಿಯೂ ಪ್ಯಾರಾನಾಯ್ಡ್ ಸ್ಕಿಜೋಫ್ರೇನಿಯಾವನ್ನು ಬಿಟ್ಟು,

ಉಳಿದವರು ಆಜೀವಪರ್ಯಂತ ಮಾನಸಿಕ ಆಸ್ಪತ್ರೆಗಳಲ್ಲಿಯೇ ಕಾಲ ಕಳೆಯಬೇಕಾಗುತ್ತಿತ್ತು.

ಯಾರಿಗಾದರೂ ಸ್ಕಿಜೋಫ್ರೀನಿಯಾ ಇದೆ ಎಂದರೆ ಅವನ ಭವಿಷ್ಯ ಮುಗಿಯಿತೆಂದೇ ಭಾವಿಸುತ್ತಿದ್ದರು. ಕಾರಣ, ಅದಕ್ಕೆ ಸರಿಯಾದ ಚಿಕಿತ್ಸೆ ಇರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ.

ಬೇರೆಲ್ಲ ಕಾಯಿಲೆಗಳಂತೆ ಮಾನಸಿಕ ಕಾಯಿಲೆಗಳಲ್ಲೂ ಬೇರೆ ಬೇರೆ ವಿಧಗಳಿವೆ. ಕಾಯಿಲೆಗಳಿಗೆ ಕಾರಣಗಳು ನಮಗೆ ತಿಳಿದಿವೆ.

ಔಷಧ ಮತ್ತು ಮನೋಸಾಮಾಜಿಕ ಚಿಕಿತ್ಸೆಗಳಿಂದ ಸ್ಕಿಜೋಫ್ರೇನಿಯಾವೂ ಸೇರಿ ಎಲ್ಲ ಮಾನಸಿಕ ಕಾಯಿಲೆಗಳನ್ನು ಆರಂಭದಲ್ಲಿಯೇ ಗುರುತಿಸಿ ಚಿಕಿತ್ಸೆ (Treatment)ನೀಡಿದರೆ ಹೆಚ್ಚಿನವರು ಗುಣಮುಖರಾಗುತ್ತಾರೆ.

Know - More about schejophronia

ಅವರೂ ಎಲ್ಲರಂತೆ ಸಮಾಜದಲ್ಲಿ ಸಾಧನೆಗೈಯ್ಯಬಹುದು, ನೆಮ್ಮದಿಯ ಕುಟುಂಬ ಜೀವನ ನಡೆಸಲು ಸಾಧ್ಯ ಎಂಬುದನ್ನು ಮನೋವೈದ್ಯರು ಸಾಬೀತುಪಡಿಸಿದ್ದಾರೆ.

ಆದರೆ, ಇಷ್ಟೆಲ್ಲಾ ಸೌಲಭ್ಯಗಳಿದ್ದೂ, ಸಹ ಮಾನಸಿಕ ರೋಗಗಳ ಕುರಿತಾದ ತಪ್ಪು ಕಲ್ಪನೆಗಳು ಇನ್ನೂ ಉಳಿದಿವೆ. ಮನೋರೋಗಿ ಎಂಬ ಕಳಂಕ ಇನ್ನೂ ಸಮಾಜದಲ್ಲಿ ಆಳವಾಗಿದೆ.

ಹಾಗಾಗಿ ಹೆಚ್ಚಿನ ಮಂದಿ ಚಿಕಿತ್ಸೆಗೆ ಮುಂದಾಗುವುದಿಲ್ಲ, ಕಾಯಿಲೆ ಉಲ್ಬಣವಾದ ನಂತರ ಇನ್ನೇನು ಬೇರೆ ದಾರಿಯೇ ಇಲ್ಲ ಎಂಬಂತಾದಾಗ ಮಾತ್ರವೇ ಮನೋವೈದ್ಯರಲ್ಲಿಗೆ ಹೋಗುತ್ತಾರೆ.

ಇದರಿಂದಾಗಿ ಆರಂಭದಲ್ಲಿಯೇ ಸರಿಯಾದ ಚಿಕಿತ್ಸೆಯಿಂದ ವಂಚಿತರಾಗುತ್ತಾರೆ. ಅಷ್ಟೇ ಅಲ್ಲ, ಇದು ರೋಗಿಯ ಕುಟುಂಬದ ಮೇಲೂ, ಸಮಾಜದ ಮೇಲೂ ದುಷ್ಪರಿಣಾಮ ಬೀರುತ್ತದೆ.

ಇದನ್ನೂ ಓದಿ : https://vijayatimes.com/naseem-shah-auction-his-sixer-bat/

ತಾಯಿ ಈ ರೋಗದಿಂದ ಬಳಲುತ್ತಿದ್ದರೆ ಅದು ಮಕ್ಕಳ ಬೆಳವಣಿಗೆಯ ಮೇಲೂ ದುಷ್ಪರಿಣಾಮ ಬೀರಬಹುದು.
ಹಾಗಾಗಿ, ಈ ಮೇಲಿನ ಅಂಶಗಳನ್ನು ಗಮನಿಸಿ, ಸಮಾಜದಲ್ಲಿ ಅರಿವನ್ನು ಮೂಡಿಸಬೇಕು.

ಸ್ಕಿಜೋಫ್ರೇನಿಯಾ ಬಗ್ಗೆ ನಕಾರಾತ್ಮಕ ಭಾವನೆ ತೋರದೆ, ಆದಿಯಲ್ಲೇ ಚಿಕಿತ್ಸೆ ತೆಗೆದುಕೊಂಡಲ್ಲಿ ಇದು ಖಂಡಿತ ವಾಸಿಯಾಗುತ್ತದೆ.

ಮನೋರೋಗಕ್ಕೆ, ಅದರಲ್ಲಿಯೂ ವಿಶೇಷವಾಗಿ ಸ್ಕಿಜೋಫ್ರೇನಿಯಾಕ್ಕಿರುವ ಕಳಂಕ ಅಳಿಸಿ ಹಾಕಬೇಕು. ತಪ್ಪು ಕಲ್ಪನೆ ಹೊಡೆದೋಡಿಸಬೇಕು.

ಹೀಗೆ ಹಲವು ಉದ್ದೇಶಗಳಿಂದ `ವಿಶ್ವ ಸ್ಕಿಜೋಫ್ರೇನಿಯಾ ದಿನ’ವನ್ನು ಆಚರಿಸಲಾಗುತ್ತಿದೆ.
  • ಪವಿತ್ರ
Tags: healthtipsMental Healthschejophronia

Related News

ನಿಮ್ಮ ಕರುಳಿನ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬೇಕಾ ಹಾಗಾದರೆ ಈ 5 ಆಹಾರಗಳನ್ನು ಸೇವಿಸಿ
ಆರೋಗ್ಯ

ನಿಮ್ಮ ಕರುಳಿನ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬೇಕಾ ಹಾಗಾದರೆ ಈ 5 ಆಹಾರಗಳನ್ನು ಸೇವಿಸಿ

September 30, 2023
ಪುಟ್ಟ ಬೆಳ್ಳುಳ್ಳಿಯಿಂದ ಅದೆಷ್ಟೊಂದು ಪ್ರಯೋಜನಗಳಿವೆ ಅನ್ನೋದು ನಿಮಗೆ ಗೊತ್ತಾ?
ಆರೋಗ್ಯ

ಪುಟ್ಟ ಬೆಳ್ಳುಳ್ಳಿಯಿಂದ ಅದೆಷ್ಟೊಂದು ಪ್ರಯೋಜನಗಳಿವೆ ಅನ್ನೋದು ನಿಮಗೆ ಗೊತ್ತಾ?

September 29, 2023
ನಿಮ್ಮ ಉಗುರುಗಳು ಆರೋಗ್ಯದ ಬಗ್ಗೆ ಏನನ್ನು ತಿಳಿಸುತ್ತದೆ ಅಂತ ಗೊತ್ತಾ?
ಆರೋಗ್ಯ

ನಿಮ್ಮ ಉಗುರುಗಳು ಆರೋಗ್ಯದ ಬಗ್ಗೆ ಏನನ್ನು ತಿಳಿಸುತ್ತದೆ ಅಂತ ಗೊತ್ತಾ?

September 28, 2023
ಡಯಾಬಿಟಿಸ್ ಇರುವವರು ಖಾಲಿ ಹೊಟ್ಟೆಯಲ್ಲಿ ಈ ಪಾನೀಯಗಳನ್ನು ಸೇವಿಸಿ
ಆರೋಗ್ಯ

ಡಯಾಬಿಟಿಸ್ ಇರುವವರು ಖಾಲಿ ಹೊಟ್ಟೆಯಲ್ಲಿ ಈ ಪಾನೀಯಗಳನ್ನು ಸೇವಿಸಿ

September 27, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.