ಹೊಟ್ಟೆಯ ಕೊಬ್ಬನ್ನು ಕರಗಿಸಲು ಮನೆಯಲ್ಲೇ ಒಂದು ಆರೋಗ್ಯಕರ ಕಷಾಯ ಮಾಡಬಹುದಾಗಿದೆ. ಮೊದಲಾಗಿ ನಾವು ಓಮಿನ ಕಾಳು, ಸೋಂಪು ಚೆಕ್ಕೆ ಪುಡಿ, ಸ್ವಲ್ಪ ಪುದಿನಾ ಎಲೆಗಳನ್ನು ತೆಗೆದು ತೊಳೆದಿಟ್ಟುಕೊಳ್ಳಬೇಕು.
ಇವೆಲ್ಲವುಗಳನ್ನೂ ಸಮಪ್ರಮಾಣದಲ್ಲಿ (ಎರಡೆರಡು ಚಮಚ) ತೆಗೆದುಕೊಳ್ಳಬೇಕು. ಒಂದು ಚಮಚ ಲಿಂಬೆ ರಸವನ್ನು ರೆಡಿಯಾಗಿ ಇಟ್ಟುಕೊಂಡು ಬಳಿಕ ಒಂದು ಬೌಲಲ್ಲಿ ಎರಡು ಲೋಟ ನೀರನ್ನು ಕುದಿಯಲು ಇಡಬೇಕು ಆ ನೀರು ಕುದಿಯುವಾಗ ತಯಾರಿಸಿಕೊಂಡ ಎಲ್ಲಾ ವಸ್ತುಗಳನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಬೇಕು. ಕುದಿದ ಬಳಿಕ ಗ್ಯಾಸ್ ಆರಿಸಿ ,ಕುದಿದ ಕಷಾಯ ಆರಿದ ಬಳಿಕ ಲಿಂಬೆ ರಸವನ್ನು ಮಿಕ್ಸ್ ಮಾಡಿ ಬೆಳಿಗ್ಗೆ ಬರೀ ಹೊಟ್ಟೆಯಲ್ಲಿ ಕುಡಿಯಬೇಕು. ಈ ಕಷಾಯವನ್ನು ತಪ್ಪದೆ ಕುಡಿಯುತ್ತಿದ್ದರೆ ಹೊಟ್ಟೆಯ ಬೊಜ್ಜು ಕರಗುವುದು.
ಒಂದು ತಿಂಗಳು ಈ ಕಷಾಯವನ್ನು ನಿತ್ಯ ಸೇವನೆ ಮಾಡಬೇಕು. ಬೊಜ್ಜು ಕರಗುವುದಲ್ಲದೆ ದೇಹವನ್ನು ಆರೋಗ್ಯಯುತವಾಗಿ ಈ ಕಷಾಯ ಕಾಪಾಡುತ್ತದೆ. ಒಂದೇ ಪ್ರಮಾಣದಲ್ಲಿ ಇದನ್ನು ಉಪಯೋಗಿಸಬೇಕು ಒಂದು ಗ್ಲಾಸ್‌ಗಿಂತ ಹೆಚ್ಚು ಕುಡಿಯಬಾರದು. ಹೆಚ್ಚು ಕುಡಿಯುವುದರಿಂದ ದೇಹಕ್ಕೆ ಉಷ್ಠ ಅಂಶ ಹೆಚ್ಚಾಗುತ್ತದೆ. ಈ ಕಷಾಯ ಕುಡಿದ ಬಳಿಕ ಒಂದು ಗಂಟೆ ಬಿಟ್ಟು ಬೆಳಗ್ಗನ ಉಪಾಹಾರ ಸೇವನೆ ಮಾಡಬೇಕು. ಬಳಿಕ ಒಂದು ಗ್ಲಾಸ್ ಮಜ್ಜಿಗೆಯನ್ನು ಶುಂಠಿ ಪುಡಿಯನ್ನು ಸೇರಿಸಿ ಕುಡಿಯಬೇಕು. ಹೊಟ್ಟೆಯಲ್ಲಿ ಶೇಕರಣೆಯಾದ ಕೊಬ್ಬೆಲ್ಲಾ ಕರಗಿ ಹೊಟ್ಟೆ ಶುದ್ಧವಾಗುತ್ತದೆ.