Mysuru : ನಾಡಹಬ್ಬ ದಸರಾ (Mysuru Dasara Festival) ಮಹೋತ್ಸವ ಮುಕ್ತಾಯವಾಗಿದ್ದು, ಕಳೆದ ಎರಡು ವರ್ಷಗಳಿಂದ ಸರಳ ದಸರಾ ಆಚರಿಸಲಾಗಿತ್ತು.
ಈ ವರ್ಷ ಅದ್ದೂರಿಯಾಗಿ ದಸರಾವನ್ನು ಆಚರಣೆ ಮಾಡಲಾಗಿದೆ. ನಾಡಹಬ್ಬ ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯ ವೇಳೆ ನಡೆದ ದಸರಾ ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ಕೊಡಗು (Kodagu) ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದೆ.

ನಾಡಿನ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಅನೇಕ ಸ್ತಬ್ದ ಚಿತ್ರಗಳು ದಸರಾದ ಜಂಬೂಸವಾರಿಯಲ್ಲಿ(Jamboo Savari) ಭಾಗಿಯಾಗಿದ್ದವು. ಎಲ್ಲ ಸ್ತಬ್ದ ಚಿತ್ರಗಳನ್ನು ವೀಕ್ಷಿಸಿದ ದಸರಾ ಸಮಿತಿ, ಜೀವನದಿ ಕಾವೇರಿ ಉಗಮದ ಬ್ರಹ್ಮಗಿರಿ ಬೆಟ್ಟ, ಭಾಗಮಂಡಲದ ಭಗಂಡೇಶ್ವರ ದೇವಸ್ಥಾನ, ಕಾವೇರಿ ಕುಂಡಿಕೆ,
ಇದನ್ನೂ ಓದಿ : https://vijayatimes.com/i-became-youth-being-with-rahul-gandhi/
ಕೊಡಗಿನ ಜಲಪಾತಗಳು, ಕೊಡಗಿನ ಕಾಫಿ,ಕಿತ್ತಳೆ, ಏಲಕ್ಕಿ, ಕರಿಮೆಣಸು ಬೆಳೆ ಒಳಕೊಂಡಿರುವ ಕೊಡಗು (Kodagu Wins Still Image Award) ಜಿಲ್ಲೆಯ ಸ್ತಬ್ದ ಚಿತ್ರಕ್ಕೆ ಪ್ರಥಮ ಸ್ಥಾನ ನೀಡಿದರು.
ಇನ್ನು ಮೈಸೂರು ಪೇಟ, ಮೈಸೂರು ಪಾಕ್, ನಂಜನಗೂಡು ರಸಬಾಳೆ, ಮೈಸೂರು ದಸರಾ, ಮೈಸೂರು ಮಲ್ಲಿಗೆ, ಮಹಿಷಾಸುರ, ಬೆಟ್ಟದ ನಂದಿ,
ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಾಲಯಗಳನ್ನು ಒಳಗೊಂಡಿರುವ ಮೈಸೂರು ಜಿಲ್ಲೆಯ ಸ್ತಬ್ದ ಚಿತ್ರಕ್ಕೆ ದ್ವಿತೀಯ ಸ್ಥಾನ ನೀಡಲಾಯಿತು.

ಇನ್ನು ವಾಣಿವಿಲಾಸ ಜಲಾಶಯ, ರಾಜ ವೀರ ಮದಕರಿ ನಾಯಕ, ವೀರವನಿತೆ ವನಕೆ ಓಬವ್ವ ಕಲಾಕೃತಿಯ ಚಿತ್ರಗಳನ್ನು ಒಳಗೊಂಡಿರುವ ಚಿತ್ರದುರ್ಗ ಜಿಲ್ಲೆಯ ಸ್ತಬ್ದಚಿತ್ರಕ್ಕೆ ತೃತೀಯ ಸ್ಥಾನ ನೀಡಲಾಯಿತು.
ಇನ್ನು ವಿವಿಧ ಇಲಾಖೆಗಳು ಹಾಗೂ ನಿಗಮ ಮಂಡಳಿ ವಿಭಾಗದಲ್ಲಿ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ (Kodagu Wins Still Image Award)ಮತ್ತು ಜೀವನೋಪಾಯ ಇಲಾಖೆಗೆ ಪ್ರಥಮ ಸ್ಥಾನ.
ಇದನ್ನೂ ಓದಿ : https://vijayatimes.com/health-facts-of-winter-melon/
ಕೆಎಂಎಫ್ ನಿರ್ಮಿಸಿದ್ದ ನಂದಿನಿ ಕ್ಷೀರಧಾರೆ ಮತ್ತು ಉತ್ಪನ್ನಗಳಿಗೆ ದ್ವಿತೀಯ ಸ್ಥಾನ, ಡಾ.ಬಾಬು ಜನಜೀವನರಾಮ್ ಅಭಿವೃದ್ಧಿ ನಿಗಮದ ಲಿಡ್ಕರ್ ಉತ್ಪನ್ನಗಳಿಗೆ ತೃತೀಯ ಬಹುಮಾನ ನೀಡಲಾಯಿತು.
- ಮಹೇಶ್.ಪಿ.ಎಚ್