Visit Channel

ಮಾಜಿ ಶಾಸಕ ಕೋನರೆಡ್ಡಿ ಕಾಂಗ್ರೆಸ್‌ಗೆ ಸೇರ್ಪಡೆ

ಬೆಳಗಾವಿ ಡಿ 15 : ಮಾಜಿ ಶಾಸಕ, ಜೆಡಿಎಸ್‌ ಮುಖಂಡ ಕೋನರೆಡಿ ಅವರು ಜೆಡಿಎಸ್‌ ಪಕ್ಷ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಹಲವು ದಿನಗಳಿಂದ ಕಾಂಗ್ರೆಸ್ ಪರವಾಗಿ ಕೆಲಸಗಳನ್ನು ಮಾಡುತ್ತಿದ್ದ ಅವರು ಮಂಗಳವಾರ ಅಧಿಕೃತವಾಗಿ ಪಕ್ಷ ಸೇರಿದರು. ಬೆಳಗಾವಿ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಕೋನರೆಡ್ಡಿ ತಮ್ಮ ಹಲವು ಬೆಂಬಲಿಗರ ಜೊತೆ ಕಾಂಗ್ರೆಸ್ ಪಕ್ಷ ಸೇರಿದರು. ಅಧಿವೇಶನದ ಪ್ರಯತ್ನ ಎಲ್ಲಾ ಕಾಂಗ್ರೆಸ್ ನಾಯಕರು ಅಲ್ಲಿಯೇ ಇರುವುದರಿಂದ ಪಕ್ಷ ಸೇರ್ಪಡೆ ಕಾರ್ಯಕ್ರಮ ಅಲ್ಲಿಯೇ ಆಯೋಜಿಸಲಾಗಿತ್ತು.

ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಮುಂತಾದ ನಾಯಕರು ಪಕ್ಷದ ಬಾವುಟ ನೀಡಿ ಎನ್. ಎಚ್. ಕೋನರಡ್ಡಿಯನ್ನು ಪಕ್ಷಕ್ಕೆ ಬರಮಾಡಿಕೊಂಡರು. ಕೋನರೆಡ್ಡಿ ಬರಮಾಡಿಕೊಂಡ ಬಳಿಕ ಮಾತನಾಡಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, “ಕೋನರಡ್ಡಿ ಕಾಂಗ್ರೆಸ್ ಸೇರ್ಪಡೆಯಾಗಿರುವುದು ಅವರ ರಾಜಕೀಯ ಜೀನವನಕ್ಕೆ ದೊಡ್ಡ ತಿರುವು ನೀಡಲಿದೆ. ಜೆಡಿಎಸ್ ರಾಜ್ಯವ್ಯಾಪಿ ನೆಲೆ ಹೊಂದಿಲ್ಲ. ಅದು ಕೆಲವೇ ಜಿಲ್ಲೆಗೆ ಮಾತ್ರ ಸೀಮಿತ ಪಕವಾಗಿದೆ’ ಎಂದರು.

Latest News

Lal singh chadda
ಮನರಂಜನೆ

“ಲಾಲ್ ಸಿಂಗ್ ಚಡ್ಡಾ” ಚಿತ್ರ ಭಾರತೀಯ ಸೇನೆ ಮತ್ತು ಸಿಖ್ಖರನ್ನು ಅವಮಾನಿಸಿದೆ! : ಕ್ರಿಕೆಟಿಗ ಮಾಂಟಿ ಪನೇಸರ್

ಲಾಲ್ ಸಿಂಗ್ ಚಡ್ಡಾ  ಚಿತ್ರ ನಿಷೇಧಕ್ಕೆ ಮಾಂಟಿ ಪನೇಸರ್ ಕರೆ.  ಕ್ರಿಕೆಟಿಗ ಮಾಂಟಿ ಪನೇಸರ್ ಅವರು ಟ್ವಿಟರ್ನಲ್ಲಿ “ಲಾಲ್ ಸಿಂಗ್ ಚಡ್ಡಾ ಚಿತ್ರ ನಾಚಿಕೆಗೇಡಿನದು.

Medical Test
ಮಾಹಿತಿ

ಮದುವೆಗೂ ಮುನ್ನ ಈ ವೈದ್ಯಕೀಯ ಪರೀಕ್ಷೆಗಳನ್ನು ತಪ್ಪದೇ ಮಾಡಿಸಿಕೊಳ್ಳಿ ; ಅನುವಂಶಿಕ ಕಾಯಿಲೆಗಳನ್ನು ಪತ್ತೆ ಮಾಡಿ

ಕೆಲ ವೈದ್ಯಕೀಯ ಪರೀಕ್ಷೆಗಳನ್ನು ನಡೆಸುವುದರಿಂದ ಆನುವಂಶಿಕ ಕಾಯಿಲೆಗಳು ಪತ್ತೆ ಮಾಡಿ, ಅವುಗಳಿಗೆ ಚಿಕಿತ್ಸೆಯನ್ನು ಕೂಡ ಪಡೆದುಕೊಳ್ಳಬಹುದು.