Dharwad : ಕಳೆದ 10 ವರ್ಷಗಳ (10 years) ಹಿಂದೆ ನಡೆದ ಗ್ರಾಮದ ದಲಿತರ ದೌರ್ಜನ್ಯ (Atrocities of Dalits) ಕೇಸ್ನಲ್ಲಿ ಕಳೆದ ತಿಂಗಳು ಕೊಪ್ಪಳ ಜಿಲ್ಲಾ (Koppal District) ನ್ಯಾಯಾಲಯವು 98 ಮಂದಿಗೆ ಜೀವಾವಧಿ ಶಿಕ್ಷೆ (98 sentenced to life imprisonment) ವಿಧಿಸಿ ತೀರ್ಪು ನೀಡಿತ್ತು. ಇದೊಂದು ಐತಿಹಾಸಿ ತೀರ್ಪು ಎನ್ನಲಾಗಿತ್ತು. ಇಡೀ ಗ್ರಾಮದ ಬಹುತೇಕ ಮನೆಗಳ ಸದಸ್ಯರು ಜೈಲು ಪಾಲಾಗಿದ್ದರು. ಆ ಬಳಿಕ ಅವರೆಲ್ಲಾ ಹೈಕೋರ್ಟ್ ಮೊರೆ ಹೋಗಿದ್ದರು. ಇದೀಗ ಕೊಪ್ಪಳ ಜಿಲ್ಲೆ ಮರಕುಂಬಿ (Marakumbi) ದಲಿತರ ಮೇಲೆ ದೌರ್ಜನ್ಯ ಪ್ರಕರಣದಲ್ಲಿ (case of tort) ಜಿಲ್ಲಾ ನ್ಯಾಯಾಲಯದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 97 ಮಂದಿಗೆ ಕರ್ನಾಟಕ ಹೈಕೋರ್ಟ್ (Karnataka High Court) ಧಾರವಾಡ ಪೀಠವು ಜಾಮೀನು ಮಂಜೂರು ಮಾಡಿದೆ.
ಇನ್ನು ಈ ಕುರಿತು ವಿಚಾರಣೆ (Inquiry) ನಡೆಸಿದ ಧಾರವಾಡ ಹೈಕೋರ್ಟ್ (Dharwad High Court) ವಿಭಾಗೀಯ ಪೀಠವು 98 ಅಪರಾಧಿಗಳ ಪೈಕಿ 97 ಜನರಿಗೆ ಜಾಮೀನು ಮುಂಜೂರು ಮಾಡಿ ಆದೇಶ ಹೊರಡಿಸಿದೆ. ಜಾಮೀನು ಅರ್ಜಿ (Bail application) ಹಾಕದ ಎ1 ಮಂಜುನಾಥ ಹೊರತು ಪಡಿಸಿ ಉಳಿದೆಲ್ಲರಿಗೂ ಜಾಮೀನು ಮುಂಜೂರು ಮಾಡಿದೆ.ಪ್ರತಿಯೊಬ್ಬರಿಗೂ 50 ಸಾವಿರ ಬಾಂಡ್ (50 thousand bond) ಹಾಗೂ ಒಬ್ಬರ ಶ್ಯೂರಿಟಿ ಪಡೆದು ಜಾಮೀನು ಮಂಜೂರು ಮಾಡಿದೆ.
ಅಷ್ಟಕ್ಕೂ ಕೊಪ್ಪಳ ಗಂಗಾವತಿ ( Koppala Gangavati) ಮರಕುಂಬಿ ಗ್ರಾಮದಲ್ಲಿ 2014 ರಲ್ಲಿ ಕ್ಷೌರದಂಗಡಿಗೆ (Barber shop) ಮತ್ತು ಹೋಟೆಲ್ನಲ್ಲಿ ದಲಿತರಿಗೆ ಪ್ರವೇಶ ನೀಡದೆ ಇರುವ ಕುರಿತು ಗಲಾಟೆ ನಡೆದಿತ್ತು. ಆಮೇಲೆ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದರು. ಇತ್ತ ಇದೇ ದಿನ ಗಂಗಾವತಿಯಲ್ಲಿ (Gangavati) ಮರಕುಂಬಿ ಗ್ರಾಮದ ಕೆಲ ಸರ್ವಣಿಯರು ಸಿನಿಮಾ ನೋಡಲು ಹೋದಾಗ ದಲಿತ ಯುವಕರು ಗಲಾಟೆ ನಡೆಸಿದ್ದರು. ಇದಾದ ಬಳಿಕ ರಾತ್ರಿಯ ವೇಳೆಯಲ್ಲಿ ದಲಿತರ ಕೇರಿಗೆ ಸರ್ವಣೀಯರು ನುಗ್ಗಿ ಗುಡಿಸಲುಗಳಿಗೆ ಬೆಂಕಿ ಹಚ್ಚಿದ್ದರು. ಅದೃಷ್ಟಕ್ಕೆ ಯಾವುದೇ ಪ್ರಾಣ ಹಾನಿ ಆಗಿರಲಿಲ್ಲ.ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ 117 ಜನರ (117 people) ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿನ ಆರೋಪಿಗಳಲ್ಲಿ (Accused in the case) ಕೆಲವರು ಮೃತಪಟ್ಟಿದ್ದಾರೆ. ಕೆಲವರದ್ದು ಹೆಸರು ಪುನಾರಾರ್ವತನೆಯಾಗಿದೆ. ಹೀಗಾಗಿ, 101 ಆರೋಪಿಗಳ ವಿರುದ್ಧ ಅಪರಾಧ ಸಾಬೀತಾದ ಹಿನ್ನಲೆ ಕೊಪ್ಪಳ ನ್ಯಾಯಾಲಯದಿಂದ ಶಿಕ್ಷೆಯ ಆದೇಶ ಹೊರ ಬಿದ್ದಿತ್ತು.ಈ ಪ್ರಕರಣದಲ್ಲಿ11 ಜನ ತೀರ್ಪು ಬರುವ ಪೂರ್ವದಲ್ಲಿಯೇ ಮೃತಪಟ್ಟಿದ್ದಾರೆ. ಕಳೆದ ಅಕ್ಟೋಬರ್ 28 ರಂದು ಕೊಪ್ಪಳ ಜಿಲ್ಲಾ ನ್ಯಾಯಾಲಯದಲ್ಲಿ (Koppal District Court) ಜೀವಾವದಿ ಶಿಕ್ಷೆ ಘೋಷಣೆ ಮಾಡಿತ್ತು. ಇದೀಗ ಹೈಕೋರ್ಟ್ ಅಪರಾಧಿಗಳಿಗೆ ಜಾಮೀನು ನೀಡಿದೆ.