ದೇಶದಲ್ಲಿ ಕೋವಿಡ್ ಮೊದಲನೆ ಅಲೆ ಬಂದ ಕೂಡಲೇ ಮುಖಗವಸು ಅಂದರೆ ಮಾಸ್ಕ್ ಎಷ್ಟು ಅಗತ್ಯ ಎಂಬುದು ಎಲ್ಲರಿಗೂ ಕೊರೊನಾ ಅರಿವು ಮೂಡಿಸಿತು. ಸದ್ಯ ಇಂದು ಪ್ರತಿಯೊಬ್ಬರು ಮುಖಕ್ಕೆ ಮಾಸ್ಕ್ ಧರಿಸದೆ ಹೊರಬರುವುದು ತೀವ್ರ ಕಷ್ಟಕರವಾಗಿದೆ. ಅಂದು ಮಾಸ್ಕ್ ಇಲ್ಲದೇ ಸುಧೀರ್ಘವಾಗಿ ಉಸಿರಾಡಿತ್ತಿದ್ದರು. ಆದರೆ ಇಂದು ಮಾಸ್ಕ್ ಇಲ್ಲದೇ ಉಸಿರಾಡುವುದು ಅಸಾಧ್ಯ. ಇಂದು ಮಾರುಕಟ್ಟೆಯಲ್ಲಿ ಮಾಸ್ಕ್ ವ್ಯಾಪಾರ ಜೋರಾಗಿದ್ದು, ವಿವಿಧ ರೀತಿಯ ಮಾಸ್ಕ್ ಹೊರಬಂದಿದ್ದು ಜನರು ಮಾಸ್ಕ್ ಅನ್ನು ಒಂದು ರೀತಿ ಫ್ಯಾಷನ್ ಮಾಡಿಕೊಂಡಿದ್ದಾರೆ.
ಇದೇ ಸಾಲಿನಲ್ಲಿ ಈಗ ಹೊಸದಾಗಿ ಮಾರುಕಟ್ಟೆಗೆ ಕೇವಲ ಮೂಗನ್ನು ಮಾತ್ರ ಮುಚ್ಚುವಂಥ ಮಾಸ್ಕ್ ಒಂದು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಈ ವಿಶಿಷ್ಟವಾದ ಮಾಸ್ಕ್ ಅನ್ನು ದಕ್ಷಿಣ ಕೊರಿಯಾದ ತಯಾರಿಕಾ ಕಂಪನಿ ಪರಿಚಯಿಸಿದೆ. ಇದು ಮುಖವನ್ನು ಸಂಪೂರ್ಣವಾಗಿ ಮುಚ್ಚದೆ ಕೇವಲ ಮೂಗನ್ನು ಮಾತ್ರ ಮುಚ್ಚಬಹುದಾಗಿದೆ. ಈ ಮಾಸ್ಕ್ ನ್ನು ಆಹಾರ ತಿನ್ನುವಾಗ ಮತ್ತು ನೀರು ಕುಡಿಯುವಾಗ ಕೂಡ ಧರಿಸಿರಬಹುದು.
ಈ ವಿಶಿಷ್ಟವಾದ ಮಾಸ್ಕ್ ಎಲ್ಲಾ ಆನ್ಲೈನ್ ಮಾರುಕಟ್ಟೆಯ ಜಾಲ ತಾಣಗಳಲ್ಲಿ ಲಭ್ಯವಿದೆ. ಈ ಮಾಸ್ಕ್ ಅನ್ನು ಕೋಸ್ಕ್ ಮಾಸ್ಕ್ ಎಂದು ಹೆಸರಿಡಲಾಗಿದೆ. ಕೊರಿಯನ್ ಕಂಪನಿ ಅಟ್ಮ್ಯಾನ್ ಸಂಸ್ಥೆ ಬಿಡುಗಡೆಗೊಳಿಸಿದೆ. ಈ ಒಂದು ಮಾಸ್ಕ್ಗೆ ಬೇಡಿಕೆ ಕೂಡ ಹೆಚ್ಚಾಗಿದೆ. ಸದ್ಯ ಇನ್ಮುಂದೆ ಇದು ಕೂಡ ಟ್ರೆಂಡ್ ಆಗಿ ಪರಿವರ್ತನೆಯಾಗುವುದರಲ್ಲಿ ಅನುಮಾನವೇ ಬೇಡ ಎಂದು ಹೇಳಬಹುದು.