ಬೆಂಗಳೂರು, ಜ. 06: ನಟ ರಮೇಶ್ ಅರವಿಂದ್ ಮಂಗಳವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ತಮ್ಮ ಪುತ್ರಿಯ ವಿವಾಹ ಆರತಕ್ಷತೆಯ ಆಮಂತ್ರಣ ನೀಡಿ ಆಹ್ವಾನಿಸಿದರು.
ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ತೆರಳಿದ ನಟ ರಮೇಶ್, ತಮ್ಮ ಪುತ್ರಿ ಐಶ್ವರ್ಯ ಹಾಗೂ ಅಕ್ಷಯ್ ಅವರ ವಿವಾಹ ಆರತಕ್ಷತೆಯ ಆಹ್ವಾನ ಪತ್ರಿಕೆ ನೀಡಿದರು. ರಮೇಶ್ ಅರವಿಂದ್ ಈ ಹಿಂದೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸಹ ತಮ್ಮ ಪುತ್ರಿಯ ವಿವಾಹ ಆರತಕ್ಷತೆಯ ಆಮಂತ್ರಣ ಪತ್ರ ನೀಡಿದ್ದರು.