KPSC Accepting Applications for 400 Govt Veterinary Officer Posts.
Job News: ಕೆಪಿಎಸ್ಸಿ (KPSC) ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯಲ್ಲಿನ ಗ್ರೂಪ್ ಎ ವೃಂದದ 400 ಪಶು ವೈದ್ಯಾಧಿಕಾರಿ (Veterinary Officer) ಭರ್ತಿಗೆ ಇತ್ತೀಚೆಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಿದೆ. ಸದರಿ ಹುದ್ದೆಗಳಿಗೆ ಇಂದಿನಿಂದ ಆನ್ಲೈನ್ ಅಪ್ಲಿಕೇಶನ್ ಸ್ವೀಕಾರ ಆರಂಭಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆಗಸ್ಟ್ 12 ರಿಂದ ಸೆಪ್ಟೆಂಬರ್ 12 ರವರೆಗೆ ಅಪ್ಲಿಕೇಶನ್ ಸಲ್ಲಿಸಬಹುದಾಗಿದೆ. ಅರ್ಹತೆಯುಳ್ಳವರು ಅರ್ಜಿ ಸಲ್ಲಿಸಲು ಮಿಸ್ ಮಾಡದಿರಿ. ಅರ್ಜಿ ವಿಧಾನ ಹಾಗೂ ಅರ್ಜಿಗೆ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ.
ಹುದ್ದೆ ಹೆಸರು- ಪಶು ವೈದ್ಯಾಧಿಕಾರಿಗಳು
ಹುದ್ದೆಗಳ ಸಂಖ್ಯೆ-400 (342+58ಬ್ಯಾಕ್ಲಾಗ್)
ವೇತನ ಶ್ರೇಣಿ-Rs.52,650-97,100
ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ-12-08-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ-12-09-2024
ಹುದ್ದೆಗಳಿಗೆ ಅಪ್ಲಿಕೇಶನ್ ಸಲ್ಲಿಸುವ ವಿಧಾನ:
- ಕೆಪಿಎಸ್ಸಿ ವೆಬ್ಸೈಟ್ ವಿಳಾಸ https://www.kpsc.kar.nic.in/ ಕ್ಕೆ ಭೇಟಿ ನೀಡಿ.
- ಕೆಪಿಎಸ್ಸಿ ಮುಖಪುಟದಲ್ಲಿ ಸ್ಕ್ರಾಲ್ ಡೌನ್ ಮಾಡಿ.
‘Apply Online For Various Notification’ ಎಂದಿರುವಲ್ಲಿ ಕ್ಲಿಕ್ ಮಾಡಿ. - ಆಯೋಗದ ಮತ್ತೊಂದು ವೆಬ್ಪೇಜ್ ತೆರೆಯುತ್ತದೆ.
- ಇತ್ತೀಚೆಗೆ ಯಾವೆಲ್ಲ ಹುದ್ದೆಗೆ ಅರ್ಜಿ ಸ್ವೀಕರಿಸಲಾಗುತ್ತಿದೆಯೋ ಆ ಎಲ್ಲ ಹುದ್ದೆಗೆ ಅರ್ಜಿ ಲಿಂಕ್ ಇರುತ್ತದೆ.
- ಇಲ್ಲಿ ‘ Veterinary Officer Online Application’ ಗೆ ಸಂಬಂಧಿತ ಲಿಂಕ್ ಆಯ್ಕೆ ಮಾಡಿ ಕ್ಲಿಕ್ ಮಾಡಿ.
- ಹೊಸ ವೆಬ್ಪೇಜ್ ತೆರೆಯುತ್ತದೆ. ಇಲ್ಲಿ ‘Login’ ಮೆನು ಕೆಳಗಡೆ ‘New Registration’ ಎಂದಿರುವಲ್ಲಿ ಕ್ಲಿಕ್ ಮಾಡಿ.
- ಕೇಳಲಾದ ಬೇಸಿಕ್ ಮಾಹಿತಿಗಳನ್ನು ನೀಡಿ ಮೊದಲಿಗೆ ರಿಜಿಸ್ಟ್ರೇಷನ್ ಪಡೆದು ನಿಮ್ಮ ಪ್ರೊಫೈಲ್ ಕ್ರಿಯೇಟ್ ಮಾಡಬೇಕು.
- ರಿಜಿಸ್ಟ್ರೇಷನ್ ನಂತರ ಮತ್ತೆ ಲಾಗಿನ್ ಆಗುವ ಮೂಲಕ ಹುದ್ದೆ ಆಯ್ಕೆ ಮಾಡಿ, ಅರ್ಜಿ ಸಲ್ಲಿಸಬೇಕು.
- ಒಂದು ವೇಳೆ ಈಗಾಗಲೇ ರಿಜಿಸ್ಟ್ರೇಷನ್ ಪಡೆದಿದ್ದಲ್ಲಿ ಯೂಸರ್ನೇಮ್, ಪಾಸ್ವರ್ಡ್ ನೀಡಿ ಲಾಗಿನ್ ಆಗುವ ಮೂಲಕ ಅರ್ಜಿ ಸಲ್ಲಿಸಬಹುದು.
- ವಿದ್ಯಾರ್ಹತೆ, ವೈಯಕ್ತಿಕ ವಿವರಗಳನ್ನು ನಮೂದಿಸಿ, ಕೇಳಲಾದ ದಾಖಲೆಗಳ ಸ್ಕ್ಯಾನ್ ಕಾಪಿ ಅಪ್ಲೋಡ್ ಮಾಡುವುದು ಕಡ್ಡಾಯವಾಗಿದೆ. ಅರ್ಜಿ ಶುಲ್ಕ ವಿವರ:
- ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ ರೂ.600.
- ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ರೂ.300.
- ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.50
•ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. - ಅರ್ಜಿ ಶುಲ್ಕದ ಜೊತೆಗೆ ಎಲ್ಲಾ ಅಭ್ಯರ್ಥಿಗಳು ಪ್ರೋಸೆಸಿಂಗ್ ಚಾರ್ಜ್ ರೂ.35 ಪಾವತಿ ಮಾಡಬೇಕು.
ಪಶುವೈದ್ಯಾಧಿಕಾರಿ ಹುದ್ದೆಗೆ ವಿದ್ಯಾರ್ಹತೆಗಳು:
ಕನಿಷ್ಠ ಶೇ.50 ಅಂಕಗಳೊಂದಿಗೆ ಬಿ.ವಿ.ಎಸ್.ಸಿ ಅಥವಾ ಬಿ.ವಿ.ಎಸ್.ಸಿ ಮತ್ತು ಎ.ಹೆಚ್ ಪದವಿ, ಇತರೆ ಸಂಬಂಧಿತ ಪದವಿ ತೇರ್ಗಡೆ.ಭಾರತೀಯ ಪಶುವೈದ್ಯಕೀಯ ಪರಿಷತ್ತಿನ ಕಾಯ್ದೆ 1984 ರ ಅಡಿಯಲ್ಲಿ IVS ಅಥವಾ ಕರ್ನಾಟಕ ಪಶುವೈದ್ಯಕೀಯ ಪರಿಷತ್ತಿನಲ್ಲಿ ರಿಜಿಸ್ಟ್ರೇಷನ್ ಪಡೆದಿರಬೇಕು.
KPSC Veterinary Officer Recruitment 2024
ಪಶು ವೈದ್ಯಾಧಿಕಾರಿಗಳು ಹುದ್ದೆಗಳಿಗೆ ಅಪ್ಲಿಕೇಶನ್ ಸಲ್ಲಿಸಲು ವಯಸ್ಸಿನ ಅರ್ಹತೆಗಳು
ಕನಿಷ್ಠ 18 ವರ್ಷ ಆಗಿರಬೇಕು.
ಸಾಮಾನ್ಯ ಅರ್ಹತೆಯವರಿಗೆ ಗರಿಷ್ಠ 35 ವರ್ಷ ದಾಟಿರಬಾರದು.
ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ ದಾಟಿರಬಾರದು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ ದಾಟಿರಬಾರದು.