Bengaluru : ಕ್ರಾಂತಿ ಚಿತ್ರದ ಸಕ್ಸಸ್ ಬಗ್ಗೆ ಮಾತನಾಡಿದ ಚಿತ್ರದ ನಿರ್ಮಾಪಕಿ ಶೈಲಜಾ(shailaja nag) ನಾಗ್, ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರು ಅಭಿನಯಿಸಿದ ಕ್ರಾಂತಿ(Kranthi movie producer statement) ಗಳಿಸಿದ ಯಶಸ್ಸಿನ ಬಗ್ಗೆ ಒಂದಿಷ್ಟು ವಿಷಯಗಳನ್ನು ಮಾಧ್ಯಮ ಮಿತ್ರರೊಂದಿಗೆ ಹಂಚಿಕೊಂಡಿದ್ದಾರೆ.

ಬಹಳ ಸಂತಸದಿಂದ ಮಾತನ್ನು ಶುರು ಮಾಡಿದ ಶೈಲಜಾ ನಾಗ್ ಅವರು, ನಮ್ಮ ಇಡೀ ಚಿತ್ರತಂಡ (Film industry) ನಮ್ಮೊಂದಿಗೆ ಹೇಗಿತ್ತು ಅಂದ್ರೆ,
ದರ್ಶನ್ ಅವರಿಂದ ಹಿಡಿದು ರಚಿತಾ ರಾಮ್( Rachita Ram)ವರೆಗೂ ಪ್ರತಿಯೊಬ್ಬರು ಪ್ರತಿ ಸಲ ನಾವು ಒಂದು ಸಾಂಗ್ ನಿಂದ ಯಾವುದೇ ಚಿಕ್ಕದೊಂದು ವಿಷಯವಾಗಲಿ ಎಲ್ಲರೂ (Kranthi movie producer statement) ಒಟ್ಟುಗೂಡಿ ಅದನ್ನು ನೆರವೇರಿಸುತ್ತಿದ್ದೆವು.
ಒಂದು ಸಾಂಗ್ ಬಿಡುಗಡೆ ದಿನಕ್ಕೂ ನಾವೆಲ್ಲಾ ಒಂದು ತಂಡವಾಗಿ ಒಂದೇ ಬಣ್ಣದ ಬಟ್ಟೆಯನ್ನು ಧರಿಸಿ ಕಾರ್ಯಕ್ರಮಕ್ಕೆ ಹೋಗಬೇಕು ಎಂದು ನಿರ್ಧರಿಸುತ್ತಿದ್ದೆವು.
ಮೊದಲ ಹಾಡು ಧರಣಿಯನ್ನು ರಿಲೀಸ್ ಮಾಡುವಾಗ ನಾವೆಲ್ಲರೂ ಕೆಂಪು ಬಣ್ಣದ ಉಡುಗೆ ತೊಟ್ಟು ಮೈಸೂರಿನಲ್ಲಿ (Mysore)ಬಿಡುಗಡೆ ಮಾಡಿದ್ವಿ.
ತದನಂತರ ಹೊಸಪೇಟೆಯಲ್ಲಿ (Hosapete)ಬೊಂಬೆ ಬೊಂಬೆ ಹಾಡನ್ನು ಬಿಡುಗಡೆ ಮಾಡಿದ್ವಿ, ಆ ಹಾಡಿಗೆ ನಾವೆಲ್ಲರೂ ಒಂದು ತಂಡವಾಗಿ ಬ್ಲೂ ಬಣ್ಣದ ಉಡುಗೆಯನ್ನು ತೊಟ್ಟು ಹೋಗಿದ್ವಿ,
ನಂತರ ಹುಬ್ಬಳ್ಳಿಯಲ್ಲಿ ಕಪ್ಪು ಬಣ್ಣ ಧರಿಸಿ ಹೋಗಿದ್ವಿ ಹೀಗೆ ಎಲ್ಲಾ ಒಂದು ಶುಭ ಸಂದರ್ಭಕ್ಕೆ ನಾವು ಒಗ್ಗಟಾಗಿ ಒಂದು ಬಣ್ಣ ಧರಿಸಿ ಹೋಗ್ತಿದ್ವಿ.

ಅದೇ ರೀತಿ ಚಿತ್ರದ ಟ್ರೇಲರ್ ಬಿಡುಗಡೆ ಸಂದರ್ಭಕ್ಕೂ ಕೂಡ ನಾವೆಲ್ಲಾ ಬಿಳಿ ಬಣ್ಣದ ಉಡುಗೆ ಧರಿಸಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ್ವಿ.
ಈಗ ನೋಡಿ ನಾವು ಸಕ್ಸಸ್ ಸಮಯ ಹಾಗಾಗಿ ನಾವೆಲ್ಲಾ ಈ ಬಾರಿ ವಿಭಿನ್ನ ಬಣ್ಣದ ಉಡುಗೆ ತೊಟ್ಟು ಈ ಕಾರ್ಯಕ್ರಮಕ್ಕೆ ನಿಮ್ಮ ಮುಂದೆ ಹಾಜರಾಗಿದ್ದೀವಿ.
ಒಂದು ಕುಟುಂಬದ ಥರ ಅಂತ ಹೇಳೋದಲ್ಲಾ, ನಾವೆಲ್ಲಾ ಹಾಗೇ ಇದ್ದೀವಿ! ಮೊದಲ ದಿನ ಹೇಗೆ ನಗು ನಗುತ ಇದ್ದೆವೋ ಎಲ್ಲರೂ, ಅದೇ ಕ್ರಮದಲ್ಲಿ ಇಂದಿಗೂ ಕೂಡ ನಾವೆಲ್ಲಾ ಇದ್ದೇವೆ.

ಜನವರಿ 26 ರಂದು ನಾವು ಸಿನಿಮಾ ಬಿಡುಗಡೆ ಮಾಡಿದ್ವಿ, ಅದಕ್ಕೂ ಮುನ್ನವೇ ಮುಂಗಡ ಬುಕಿಂಗ್ ನಲ್ಲೇ ಗ್ರೇಟ್ ಓಪನಿಂಗ್ ಸಿಕ್ಕಿತ್ತು. ಅಲ್ಲಿಂದ ಇಲ್ಲಿಯವರೆಗೂ ಚಿತ್ರದ ಬಗ್ಗೆ ಒಳ್ಳೆ ಅಭಿಪ್ರಾಯಗಳು,
ವಿಮರ್ಶೆಗಳು ನಮಗೆ ಕೇಳಿಬಂದಿವೆ. ಕೆಲ ರಾಜಕೀಯ ಪಕ್ಷಗಳು ಕೂಡ ನಮ್ಮ ಚಿತ್ರಕ್ಕೆ ಬೆಂಬಲ ಸೂಚಿಸಿವೆ.
ನಾನು ಪೈರೆಸಿ ಎಲ್ಲಾ ಸಿನಿಮಾಗಳು ಆಗುತ್ತೆ, ನಂದೆ ಆಗುತ್ತೆ ಅಂತ ಅಳುತ್ತ ಕುಳಿತುಕೊಳ್ಳುವ ಅಭ್ಯಾಸದವಳು ನಾನಲ್ಲ! ಯಾವುದೇ ಆದ್ರೂ ಗುಂಡಿಗೆ ಇಟ್ಟುಕೊಂಡು ಹೋಗಬೇಕು ಅನ್ನೋಳು ನಾನು ಎಂದು ವೇದಿಕೆಯಲ್ಲಿ ಮಾತನಾಡುವಾಗ ಹೇಳಿದ್ದಾರೆ.