Hospet Vijayanagara: ಕ್ರಾಂತಿ ಚಿತ್ರದ ಎರಡನೇ ಹಾಡನ್ನು ಅಭಿಮಾನಿಗಳಿಂದ ಬಿಡುಗಡೆಗೊಳಿಸಲು ಉತ್ತರ ಕರ್ನಾಟಕದ, ಹೊಸಪೇಟೆಗೆ ತೆರಳಿದ್ದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (kranti movie viral news) ಮೇಲೆ ಕಿಡಿಗೇಡಿಗಳು ಚಪ್ಪಲಿ ಎಸೆದಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ!

ಇದನ್ನೂ ನೋಡಿ : https://twitter.com/nanminiradio/status/1604656655152873473?t=Y-XF4pmIIvgyMkcTOf0Cag&s=08
ದಾಸ ದರ್ಶನ್ ಅಭಿನಯದ ‘ಕ್ರಾಂತಿ’ (kranthi) ಚಿತ್ರ ಇದೇ ಜನವರಿ ೨೩, ೨೦೨೩ ರಂದು ರಾಜ್ಯಾದ್ಯಂತ ಬಿಡುಗಡೆಯಾಗಲು ಸಜ್ಜಾಗಿದ್ದು, ಚಿತ್ರದ ಪ್ರಚಾರಕ್ಕೆ ಚಿತ್ರತಂಡ ಈಗಾಗಲೇ ಸಕಲ ಸಿದ್ಧತೆಗಳೊಂದಿಗೆ ಜನಮನ ಸೆಳೆಯುತ್ತಿದೆ.
ಈ ನಡುವೆ ಮೊನ್ನೆಯಷ್ಟೇ ಮೈಸೂರಿನಲ್ಲಿ (Mysore) ಕ್ರಾಂತಿ ಚಿತ್ರದ ಮೊದಲ ಹಾಡನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಚಿತ್ರತಂಡ, ಅಭಿಮಾನಿಯೊಬ್ಬರ ಆಗಮನದ ಮೂಲಕ ಹಾಡನ್ನು ಬಿಡುಗಡೆಗೊಳಿಸಿತು.
ಸದ್ಯ ಇದೇ ರೀತಿಯಲ್ಲಿ ಚಿತ್ರದ ಎರಡನೇ ಹಾಡನ್ನು ಬಿಡುಗಡೆಗೊಳಿಸಲು ಉತ್ತರ ಕರ್ನಾಟಕದ, ಹೊಸಪೇಟೆ ನಗರಕ್ಕೆ ಇಡೀ ಕ್ರಾಂತಿ ಚಿತ್ರತಂಡ ಬಸ್ಸಿನಲ್ಲಿ ಆಗಮಿಸಿ,
ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಅಭಿಮಾನಿಗಳ ಮಧ್ಯೆ ಎರಡನೇ ಚಿತ್ರದ ಹಾಡನ್ನು ಅಭಿಮಾನಿಯೊಬ್ಬರಿಂದ ಬಿಡುಗಡೆಗೊಳಿಸಿದರು.

ಈ ವೇಳೆ ವೇದಿಕೆಯ ಮೇಲೆ ನಿಂತಿದ್ದ ನಟ ದರ್ಶನ್, ನಟಿ ರಚಿತಾ ರಾಮ್ (Rachita Ram) ಹಾಗೂ ಚಿತ್ರತಂಡಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಅಭಿಮಾನಿಗಳನ್ನು ನಿಯಂತ್ರಿಸಲು ಕಷ್ಟವಾಯಿತು.
ಪೊಲೀಸರ ಬಿಗಿ ಬಂದೋಬಸ್ತ್ ಇದ್ದರು ಕೂಡ ಅಭಿಮಾನಿಗಳ ಮುತ್ತಿಗೆ ವೇದಿಕೆಯ ಮೇಲೆ ಅಪ್ಪಳಿಸಿದೆ.
ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಲು ಮುಂದಾದ ದರ್ಶನ್, ನಾಯಕಿ ರಚಿತಾ ರಾಮ್ ಅವರಿಗೆ ಮಾತನಾಡಲು ಹೇಳಿದರು,
ಕೂಡಲೇ ಮೈಕ್ ಹಿಡಿದು ಮಾತನಾಡಲು ರಚಿತಾ ಮುಂದಾದಾಗ ಪೊಲೀಸರ ಮುಂದೆಯೇ ಯುವಕರ ಗುಂಪೊಂದು ದರ್ಶನ್ ಅವರ ಮುಖಕ್ಕೆ ಚಪ್ಪಲಿಯನ್ನು ಎಸೆದು ಉದ್ಧಟತನ ಪ್ರದರ್ಶಿಸಿದ್ದಾರೆ.
ಇದನ್ನೂ ಓದಿ : https://vijayatimes.com/argentina-fifa-world-cup-winner/
ಚಪ್ಪಲಿ ವೇದಿಕೆಯ ಮೇಲೆ ಬೀಳುತ್ತಿದ್ದಂತೆ ಪೊಲೀಸರು ಚಪ್ಪಲಿಯನ್ನು ಕೆಳೆಗೆ ಎಸೆದು, ಕಿಡಿಗೇಡಿಗಳತ್ತ ಗಮನ ಹರಿಸಿದ್ದಾರೆ. ದರ್ಶನ್ ಅವರು ಈ ಘಟನೆಗೆ ಹೆಚ್ಚು ಸ್ಪಂದಿಸದೇ,
ಇರಲಿ ಪರವಾಗಿಲ್ಲ ಬಿಡಿ ಎಂದು ಹೇಳುವ ಮೂಲಕ ಸ್ಥಳದಿಂದ ಹೊರಟಿದ್ದಾರೆ ಎನ್ನಲಾಗಿದೆ. ಈ ಒಂದು ಘಟನೆಯ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವೀಡಿಯೋ ಟ್ವಿಟರ್ (Twitter) ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ನಟ ದರ್ಶನ್ ಅವರ ಮೇಲೆ ಚಪ್ಪಲಿ ಎಸೆದ ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆಯಾಗಬೇಕು, ಒಬ್ಬ ನಟನ ಮೇಲೆ ಇಂಥ ನಡೆ ಸರಿಯಲ್ಲ! ಇದಕ್ಕೆ ತೀವ್ರ ಖಂಡನೆ ಇದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸದ್ಯ ಈ ಘಟನೆ ಬಗ್ಗೆ ದರ್ಶನ್ ಅಭಿಮಾನಿಗಳು ತೀವ್ರ ಬೇಸರ ವ್ಯಕ್ತಪಡಿಸಿದ್ದು, ದರ್ಶನ್ ಅವರ ಮಾತುಗಳಿಗೆ ಸ್ಪಂದನೆ ನೀಡಿದ್ದಾರೆ.