- ಮದುವಣಿತ್ತಿಯಂತೆ ಕಂಗೊಳಿಸುತ್ತಿರುವ ಕೆಆರ್ ಎಸ್ ಡ್ಯಾಂ (KRS dam history historic june)
- ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ಚಲುವರಾಯಸ್ವಾಮಿ ಭಾಗಿ
- ಕಾವೇರಿ ಮಾತೆಗೆ ಬಾಗಿನ ಅರ್ಪಿಸಿ ಹೊಸ ದಾಖಲೆ ಬರೆದ ಸಿಎಂ ಸಿದ್ಧರಾಮಯ್ಯ
Mandya: ಕಳೆದ ವರ್ಷಕ್ಕಿಂತ ಈ ವರ್ಷ ಮುಂಗಾರು (Monsoon) ಆರಂಭಕ್ಕೂ ಮೊದಲೇ ರಾಜ್ಯದಲ್ಲಿ ಭರ್ಜರಿ ಮಳೆಯಿಂದಾಗಿ (Rainy season) ಬಹುತೇಕ ಜಲಾಶಯಗಳು ಭರ್ತಿಯಾಗಿವೆ.
ಕೆಆರ್ ಎಸ್ ಅಣೆಕಟ್ಟು (KRS dam) ಗರಿಷ್ಠ ಸಾಮರ್ಥ್ಯಕ್ಕೆ ಭರ್ತಿಯಾಗಿರುವುದರಿಂದ ಈ ಭಾಗದ ಜೀವನಾಡಿ ನದಿಗೆ ಮುಖ್ಯಮಂತ್ರಿಗಳು (Chif Minister) ಬಾಗಿನ ಅರ್ಪಿಸುವುದು ವಾಡಿಕೆ.
ಹೀಗಾಗಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Sidddu) ಅವರು ಬಾಗಿನವನ್ನ ಸಮರ್ಪಣೆ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ಕೆಆರ್‌ಎಸ್ ಜಲಾಶಯ (KRS Reservoir) ಶೃಂಗಾರಗೊಂಡಿದೆ.
ಕನ್ನಂಬಾಡಿ ಕಟ್ಟೆ ಹಸಿರು ತಳಿರು-ತೋರಣ ಹೂಗಳಿಂದ ಹಾಗೂ ಕನ್ನಡ ಬಾವುಟಗಳಿಂದ (Karnataka Flag) ಕಂಗೊಳಿಸುತ್ತಿದ್ದು ನೋಡುಗರ ಮನ ಸೆಳೆಯುತ್ತಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ (Srirangapatna Taluk) ಕೃಷ್ಣರಾಜ ಸಾಗರ (KRS) ಅಣೆಕಟ್ಟು ಜೂನ್ ತಿಂಗಳಲ್ಲಿ ಸಂಪೂರ್ಣವಾಗಿ ಭರ್ತಿ ಆಗುವ ಮೂಲಕ 93 ವರ್ಷಗಳ (93 years) ಇತಿಹಾಸದಲ್ಲಿ ಐತಿಹಾಸಕ ದಾಖಲೆ ಬರೆದಿದೆ.
ಡ್ಯಾಂ ನಿರ್ಮಾಣ (Dam construction) ಆದಾಗಿನಿಂದ ಜೂನ್ ತಿಂಗಳಲ್ಲಿ ಇದುವರೆಗೂ ತುಂಬಿರಲಿಲ್ಲ.
ಆದರೆ 93 ವರ್ಷಗಳ ನಂತರ ಮೊಟ್ಟ ಮೊದಲ ಬಾರಿಗೆ ಇದೀಗ ಕೆಆರ್‌ಎಸ್ ಭರ್ತಿಯಾಗಿದೆ (KRS is filled) . 124.80 ಅಡಿಗಳ ಗರಿಷ್ಠ ಮಟ್ಟ ಸಂಪೂರ್ಣ ಭರ್ತಿ ಆಗಿದ್ದು ಹೊಸ ಮೈಲಿಗಲ್ಲು ಸೃಷ್ಟಿಯಾದಂತಾಗಿದೆ (Milestone) .

ಈ ಹಿನ್ನೆಲೆಯಲ್ಲಿ ವೈದಿಕ ಭಾನುಪ್ರಕಾಶ್ ಶರ್ಮ (Bhanuprakash Sharma) ನೇತೃತ್ವದಲ್ಲಿ ಬಾಗಿನ ಪೂಜಾ ಕೈಂಕರ್ಯ ನಡೆದಿದ್ದು ನಾಲ್ಕನೇ ಬಾರಿಗೆ ಕಾವೇರಿ ನದಿಗೆ (Kaveri River) ಮುಖ್ಯಮಂತ್ರಿ ಸಿದ್ದರಾಮಯ್ಯ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ಬಾಗಿನ ಸಮರ್ಪಣೆ ಮಾಡಿದ್ದಾರೆ.
ಸಿಎಂ ಗೆ ಬೆಂಗಳೂರು ನಗರಾಭಿವೃದ್ಧಿ ಹಾಗೂ ಜಲ ಸಂಪನ್ಮೂಲ (Bangalore Urban Development and Water Resources) ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(DKS) ,
ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಚಲುವರಾಯಸ್ವಾಮಿ (N. Chaluvarayaswamy) ಸೇರಿದಂತೆ ಹಲವು ನಾಯಕರು ಸಾಥ್ ಕೊಡಲಿದ್ದಾರೆ.
ಕೆಆರ್‌ಎಸ್ ಜಲಾಶಯ (KRS Reservoir) ಇತಿಹಾಸದಲ್ಲೇ ಇದೇ ಮೊಟ್ಟ ಮೊದಲ ಬಾರಿಗೆ ಜೂನ್ನಲ್ಲಿ ಸಂಪೂರ್ಣವಾಗಿ ಭರ್ತಿಯಾಗಿದೆ.
ಜೂನ್ ತಿಂಗಳಲ್ಲೇ ಕೆಆರ್ಎಸ್ಗೆ (KRS) ಬಾಗಿನ ಅರ್ಪಿಸುತ್ತಿರುವ ಕರ್ನಾಟಕದ ಮೊಟ್ಟ ಮೊದಲ ಮುಖ್ಯಮಂತ್ರಿ ಸಿಎಂ ಸಿದ್ಧರಾಮಯ್ಯ ಆಗಿದ್ದಾರೆ.
1979 ರಂದು ಡಿ ದೇವರಾಜ ಅರಸು (D Devaraja Arasu) ಅವರ ಕಾಲದಲ್ಲಿ ಬಾಗಿನ ಕಾರ್ಯಕ್ರಮ ಆರಂಭವಾಗಿತ್ತು.
ಇದನ್ನು ಓದಿ : ಬಾಲಿವುಡ್ ನಟಿ ಶೆಫಾಲಿ ಜರಿವಾಲ ಹೃದಯಾಘಾತಕ್ಕೆ ಬ*, ಹುಡುಗರು ಸಿನಿಮಾದ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದ ನಟಿ
ಅಂದಿನಿಂದ ಇಂದಿನವರೆಗೂ ಜೂನ್ನಲ್ಲಿ ಯಾರು ಬಾಗಿನ ಸಲ್ಲಿಸಿರಲಿಲ್ಲ. (KRS dam history historic june) ಹೀಗಾಗಿ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ನೂತನ ದಾಖಲೆ ಬರೆದಿದ್ದಾರೆ.