Mysore: ಕನ್ನಡಿಗರ ಜೀವನಾಡಿ ಎಂದೇ ಖ್ಯಾತಿಯಾಗಿರುವ ಕಾವೇರಿ (KRS level drops to 98ft) ನದಿಯ ಒಡಲಾಗಿರುವ ಕನ್ನಂಬಾಡಿ ಕಟ್ಟೆಯಲ್ಲಿ (ಕೆಆರ್‌ಎಸ್ ಜಲಾಶಯ) ನೀರಿನ ಪ್ರಮಾಣ
ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಜಲಾಶಯದ ನೀರಿನ ಮಟ್ಟವು 98 ಅಡಿಗಳಿಗೆ ತಗ್ಗಿರುವುದಲ್ಲದೆ. ಬರ ಹಾಗೂ ತಮಿಳುನಾಡಿಗೆ (Tamilanadu) ನೀರು ಹರಿಸುತ್ತಿರುವ ಪರಿಣಾಮ ಕೆಆರ್‌ಎಸ್
ಜಲಾಶಯವು (KRS level drops to 98ft) ದಿನದಿಂದ ದಿನಕ್ಕೆ ಕುಸಿಯುತ್ತಿದೆ.
ರಾಜ್ಯದಲ್ಲಿ ಮುಂಗಾರು ಮಳೆ ಕೊರತೆ ಎದುರಾಗಿದ್ದು, ಬರಗಾಲ ಸೃಷ್ಟಿಯಾಗಿರುವ ಹಿನ್ನೆಲೆ ಅದರಲ್ಲೂ ಕಾವೇರಿ ಕೊಳ್ಳದ ಅನ್ನದಾತರಿಗೆ ಸಂಕಷ್ಟ ಎದುರಾಗಿದೆ. ಸೋಮವಾರ (ಸಪ್ಟೆಂಬರ್ 11)
ಕೃಷ್ಣರಾಜಸಾಗರ ಜಲಾಶಯದಲ್ಲಿ ನೀರಿನ ಮಟ್ಟ 98 ಅಡಿಗೆ ಕುಸಿದಿದ್ದು, ಈ ಕಾರಣದಿಂದ ಕಾವೇರಿ ನದಿಪಾತ್ರದ ರೈತರಲ್ಲಿ ಆತಂಕ ಹೆಚ್ಚಾಗಿದೆ.
ಈ ವರ್ಷ 12 ಟಿಎಂಸಿಗೂ (TMC) ಅಧಿಕ ನೀರು ಖಾಲಿಯಾಗಿದ್ದು, ತಮಿಳುನಾಡಿಗೆ ನೀರು ಹರಿಸಿದ ಪರಿಣಾಮದಿಂದಾಗಿ ಜಲಾಶಯದ ಹಿನ್ನೀರು ಪ್ರದೇಶ ಬಹುತೇಕ ಬರಡು ಭೂಮಿಯಂತಾಗಿರುವುದಲ್ಲದೆ
ಮುಂದಿನ 3-4 ತಿಂಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗುವ ಸ್ಥಿತಿ ನಿರ್ಮಾಣವಾಗಿದೆ.
ಕೆಆರ್‌ಎಸ್ (KRS) ನೀರನ್ನ ಕೃಷಿ ಚಟುವಟಿಕೆಗೆ ಬಳಸುತ್ತಿರುವ ಮಂಡ್ಯ, ಮೈಸೂರು (Mysore) ಭಾಗದ ಅನೇಕ ರೈತರಿಗೆ ಈ ಬಾರಿ ನೀರಿನ ಅಭಾವ ಎದುರಾಗಿದ್ದು, ಸೆಪ್ಟೆಂಬರ್ ಎರಡನೇ ವಾರದಲ್ಲಿಯೇ
ಜಲಾಶಯದ ನೀರಿನ ಮಟ್ಟ 98 ಅಡಿಗೆ ಕುಸಿದಿರುವುದಲ್ಲದೆ ಮತ್ತೆ ನೀರು ಬಿಟ್ಟರೆ ಮುಂದಿನ 1 ತಿಂಗಳೊಳಗಾಗಿ ನೀರಿನ ಮಟ್ಟ ಇನ್ನೂ 5-6 ಅಡಿ ಕುಸಿತವಾಗಲಿರುವ ಕಾರಣ ಬೆಳೆಗೆ ನೀರಿಲ್ಲದೆ
ರೈತರು ಆತಂಕದಲ್ಲಿದ್ದು, ಈಗಗಾಲೇ ದೊಡ್ಡ ಮಟ್ಟದ ಹೋರಾಟ ಕೂಡ ಶುರುವಾಗಿದೆ.
ಕೆಆರ್‌ಎಸ್ ಡ್ಯಾಂ (Dam) ನಲ್ಲಿ ಸಮರ್ಪಕವಾಗಿ ಮಳೆ ಆಗದಿರುವ ಹಿನ್ನಲೆ ಭರ್ತಿಯಾಗಿಲ್ಲ ಹಾಗಾಗಿ ಮೈಸೂರು, ಮಂಡ್ಯ (Mandya) ಹಾಗೂ ಬೆಂಗಳೂರಿನಲ್ಲಿ ವಾಸಿಸುವ ಜನರು ಕುಡಿಯುವ
ನೀರನ್ನು ಹಾಗೂ ಕೃಷಿಗೆ ಈ ನೀರನ್ನೆ ಹೆಚ್ಚಾಗಿ ಬಳಸುತ್ತಿದ್ದು, ಈಗ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿರುವುದಲ್ಲದೆ ಮುಂದಿನ ಬೇಸಿಗೆಗೆ ಇದರ ಪರಿಣಾಮ ಹೆಚ್ಚಾಗಿ ಜನರಿಗೆ ತಟ್ಟಲಿದೆ
ಮತ್ತು ಮಂಗಳವಾರ ನೀರು ಬಿಡುಗಡೆ ವಿಚಾರವಾಗಿ ಕಾವೇರಿ ನದಿ ನಿರ್ವಹಣಾ ಪ್ರಾಧಿಕಾರ ಸಭೆ ನಡೆಸಲಿದ್ದು, ಈ ಸಭೆಯ ತೀರ್ಮಾನದ ಬಳಿಕ ರೈತರ ಮುಂದಿನ ಹೋರಾಟ ನಿರ್ಧಾರವಾಗಲಿದೆ.
ತಮಿಳುನಾಡು (Tamilnadu) ಸಲ್ಲಿಸಿದ್ದ ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಸೆಪ್ಟೆಂಬರ್ 21ಕ್ಕೆ ಮುಂದೂಡಿದ್ದು, ಕರ್ನಾಟಕವು (Karnataka)
ಕಾವೇರಿ ನೀರನ್ನು ಸಮರ್ಪಕವಾಗಿ ಹರಿಸುತ್ತಿಲ್ಲ ಎಂದು ಆರೋಪಿಸಿ ಸುಪ್ರಿಂಕೋರ್ಟ್ (Supreme Court) ಮೆಟ್ಟಿಲೇರಿರುವ ತಮಿಳುನಾಡು ಸರ್ಕಾರ ಹೆಚ್ಚು ನೀರು ಬಿಡುವುದಕ್ಕೆ ಕರ್ನಾಟಕಕ್ಕೆ ಸೂಚಿಸುವಂತೆ
ಅರ್ಜಿ ಸಲ್ಲಿಸಿತ್ತು. ಅಲ್ಲದೆ ಸದ್ಯಕ್ಕೆ ಅಂದಿನ ವಿಚಾರಣೆ ಬಗ್ಗೆ ಕಾವೇರಿ ಮಡಿಲಿನ ರೈತರು ಗಂಭೀರವಾಗಿ ಕಾದು ಕುಳಿತಿದ್ದು, ತದ ಬಳಿಕವೇ ಸರ್ಕಾರ ಕೂಡ ಇದರ ಕುರಿತು ಮುಂದಿನ ತೀರ್ಮಾನ ಕೈಗೊಳ್ಳಲಿದೆ.
ಇದನ್ನು ಓದಿ: ಬಂದ್ ವಾಪಸ್ಸು: ಬೆಂಗಳೂರು ಬಂದ್ ಹಿಂಪಡೆದ ಖಾಸಗಿ ಸಾರಿಗೆ ಒಕ್ಕೂಟ, ಬೇಡಿಕೆ ಈಡೇರಿಸುವುದಾಗಿ ರಾಮಲಿಂಗಾರೆಡ್ಡಿ ಭರವಸೆ
- ಭವ್ಯಶ್ರೀ ಆರ್.ಜೆ