Karnataka : ಚುನಾವಣಾ ಕರ್ತವ್ಯಕ್ಕೆ ಕೆಎಸ್ಆರ್ಟಿಸಿ (KSRTC) ಎಷ್ಟು ಬಸ್ಗಳನ್ನು ಕಾಯ್ದಿರಿಸಲಾಗಿದೆ ಎಂದು ನಿಮಗೆ ತಿಳಿದಿದೆಯೇ? ಮೇ 9 ಮತ್ತು 10 ರಂದು ಕೆಎಸ್ಆರ್ಟಿಸಿ ಬಸ್ ಸೇವೆಯಲ್ಲಿ ಬದಲಾವಣೆಯಾಗಲಿದೆ ಎಂಬುದನ್ನು ಪ್ರಯಾಣಿಕರು ಗಮನಿಸಿ.ಮೇ 9 ಮತ್ತು 10 ರಂದು ಕರ್ನಾಟಕ ಚುನಾವಣೆಯ ಸಂದರ್ಭದಲ್ಲಿ KSRTC ಬಸ್ ಸೇವೆಗಳಲ್ಲಿ ಬದಲಾವಣೆ ಮಾಡಲಾಗಿದೆ.
ಚುನಾವಣೆ ಸಮಯದಲ್ಲಿ ನೀವು ಬೇರೆ ಜಿಲ್ಲೆಗಳಿಗೆ ಪ್ರಯಾಣ ಮಾಡಬೇಕೆಂದು ಅಂದುಕೊಂಡಿದ್ದರೆ ಒಂದು ಬಾರಿ ಕರ್ನಾಟಕ ಸಾರಿಗೆ ಇಲಾಖೆಯ (KSRTC buses ready for polling) ಆನ್ಲೈನ್ ಪೋರ್ಟಗಳನ್ನು ಪರಿಶೀಲಿಸಿ.
ಏಕೆಂದರೆ 2023 ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಇರುವುದರಿಂದ ಕರ್ನಾಟಕ ಸಾರಿಗೆ ಬಸ್ (KSRTC) ಸೇವೆಯಲ್ಲಿ ಮೇ 9 ಮತ್ತು 10 ರಂದು ಅಡೆತಡೆಗಳನ್ನು ಉಂಟಾಗಲಿವೆ ಎಂದು ತಿಳಿದು ಬಂದಿದೆ.
ಕೆಎಸ್ಆರ್ಸಿಯ ಮಾಧ್ಯಮ ಪ್ರಕಟಣೆಯ ಪ್ರಕಾರ, ಮೇ 10 ರಂದು ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿ ಮತದಾನದ ಕಾರಣ ಬಸ್ ಸಂಚಾರದ ಮೇಲೆ ಪರಿಣಾಮ ಬೀರಲಿದೆ.
10ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ (Assembly election) ಸಿದ್ಧತೆಯಾಗಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕೆಎಸ್ಆರ್ಟಿಸಿ ಬಸ್ಗಳನ್ನು ಕರ್ತವ್ಯಕ್ಕೆ ನಿಯೋಜಿಸಿದೆ.
ಇದನ್ನೂ ಓದಿ : https://vijayatimes.com/rcb-vs-delhi-capitals/
ಇದರಿಂದ 9 ಮತ್ತು 10ರಂದು ರಾಜ್ಯಾದ್ಯಂತ ಬಸ್ ಸಂಚಾರ ವ್ಯತ್ಯಯವಾಗಲಿದೆ. ಪ್ರಯಾಣಿಕರಿಗೆ ಈ ಸಂದರ್ಭಗಳಲ್ಲಿ ಬಸ್ ವ್ಯವಸ್ಥೆ ಸರಿಯಾಗಿ ಸಿಗುವುದು ಸ್ವಲ್ಪ ಕಷ್ಟಕರವಾಗಿರುತ್ತದೆ.
ಆದ್ದರಿಂದ ಪ್ರಯಾಣಿಕರು ಇಂತಹ ಅನನುಕೂಲತೆಯ ಸಮಯದಲ್ಲಿ ಸಹಕರಿಸುವಂತೆ ಕೆಎಸ್ಆರ್ಟಿಸಿ ಮನವಿ ಮಾಡಿದೆ.
ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾದ ಬಸ್ಸುಗಳ ಸಂಖ್ಯೆ :
Namma ಕರ್ನಾಟಕ ರಾಜ್ಯದಲ್ಲಿ ಒಟ್ಟು 8100 KSRTC ಬಸ್ಗಳನ್ನು ಹೊಂದಿದೆ, ಅದರಲ್ಲಿ 3700 ಬಸ್ಗಳನ್ನು ಪ್ರಸ್ತುತ ಚುನಾವಣಾ ಕರ್ತವ್ಯಕ್ಕಾಗಿ ಕಾಯ್ದಿರಿಸಲಾಗಿದೆ.
ಆದ್ದರಿಂದಾಗಿ ಮೇ 9 ಮತ್ತು 10ರಂದು ಕೇವಲ 4400 ಕೆಎಸ್ಆರ್ಟಿಸಿ ಬಸ್ಗಳು ಮಾತ್ರ ಬಳಕೆಗೆ ಲಭ್ಯವಾಗಲಿದೆ.
ಅಂದರೆ ಕೇವಲ 4400 ಬಸ್ ಗಳು ಪ್ರಯಾಣಕ್ಕೆ ಲಭ್ಯವಾಗಿರುತ್ತವೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆ ಎರಡು ದಿನಗಳ ಕಾಲ ಕೆಎಸ್ಆರ್ಟಿಸಿ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಗಳು ಇದೆ.ಪ್ರಯಾಣಿಕರು ಸಹಕರಿಸಬೇಕಾಗುತ್ತದೆ.
- ರಶ್ಮಿತಾ ಅನೀಶ್