ಕೆಎಸ್‌ಆರ್‌ಟಿಸಿ (KSRTC) ನಿಗಮಕ್ಕೆ ಮತ್ತೊಂದು ಗರಿ ಸೇರ್ಪಡೆ ಆಗಿದೆ. ಕರ್ನಾಟಕ ರಾಜ್ಯ (Karnataka State) ರಸ್ತೆ ಸಾರಿಗೆ ನಿಗಮವು 2024 ನೇ ಸಾಲಿನ 9 ರಾಷ್ಟ್ರೀಯ ಪ್ರಶಸ್ತಿಗಳನ್ನ (National awards) ಬಾಚಿಕೊಂಡಿದೆ. ಅಂಬಾರಿ ಉತ್ಸವ ಬಸ್, ಪಲ್ಲಕ್ಕಿ ಬಸ್‌ಗಳಿಗೆ ರಾಷ್ಟ್ರೀಯ ಪುರಸ್ಕಾರದ (National award for palanquin buses) ಗರಿ ಒಲಿದಿದೆ.
ಅತ್ಯುತ್ತಮ ಪರಿಸರ ನಿರ್ವಹಣೆ ಹಾಗೂ ವಿನೂತನ ಮಾನವ ಸಂಪನ್ಮೂಲ ಯೋಜನೆಗಳ ಅನುಷ್ಟಾನಕ್ಕಾಗಿ (Implementation of resource plans) ಗ್ರೋ ಕೇರ್ ಇಂಡಿಯಾ ಪ್ರಶಸ್ತಿ ಎರಡು ವಿಭಾಗದಲ್ಲಿ ಪಡೆದುಕೊಂಡಿದೆ. 2024 ರ ರಾಷ್ಟ್ರ ಮಟ್ಟದ ಪ್ರಶಸ್ತಿಗಳು (2024 National Level Awards) ಘೋಷಣೆ ಆಗಿದ್ದು, ಕೆಎಸ್‌ಆರ್‌ಟಿಸಿಗೆ ಬರೋಬ್ಬರಿ 9 ಪ್ರಶಸ್ತಿಗಳು ಒಲಿದು ಬಂದಿದೆ. ದೇಶದ ಅತ್ಯುತ್ತಮ ಸಾರಿಗೆ ಎಂಬ ಪ್ರಖ್ಯಾತಿ ಕೂಡ ಕೆಎಸ್‌ಆರ್‌ಟಿಸಿಗೆ (KSRTC) ಸಿಕ್ಕಿದೆ. ಈಈ ವರೆಗೂ ಕೆಎಸ್‌ಆರ್‌ಟಿಸಿ ಅತ್ಯುತ್ತಮ ಎಂಬ ಬಿರುದನ್ನ ಮುಂದುವರೆಸಿಕೊಂಡು ಬಂದಿರೋದು ವಿಶೇಷ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ (Karnataka State Road Transport) ನಿಗಮಕ್ಕೆ ಒಟ್ಟು 9 ರಾಷ್ಟ್ರಪ್ರಶಸ್ತಿ ಬಾಚಿಕೊಂಡಿದೆ. ಆಡ್‌ವರ್ಲ್ಡ್ ಶೋಡೌನ್ ವಿಭಾಗದಲ್ಲಿ 6, ಗ್ರೋ ಕೇರ್ ಇಂಡಿಯಾ ವಿಭಾಗದಲ್ಲಿ 2 ಹಾಗೂ ಪಿಆರ್‌ಎಸ್‌ಐ ರಾಷ್ಟ್ರೀಯ ಪ್ರಶಸ್ತಿ ವಿಭಾಗದಲ್ಲಿ (National Award category) ಒಂದು ಸೇರಿದಂತೆ ಒಟ್ಟು 6 ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
ಅಶ್ವಮೇಧ ಕ್ಲಾಸಿಕ್ ಬಸ್ಸುಗಳ (Ashwamedha Classic Buses) ಪರಿಚಯಕ್ಕಾಗಿ ಪರಿಣಾಮಕಾರಿ ಸಾರ್ವಜನಿಕ ಸಂಪರ್ಕ ಉಪಕ್ರಮ ಪ್ರಶಸ್ತಿ, ಅತ್ಯುತ್ತಮ ಕಾರ್ಪೋರೇಟ್ (Best corporate) ಸಂವಹನ ಹಾಗೂ ನಿರ್ವಹಣ ಪ್ರಶಸ್ತಿ ದೊರಕಿದೆ. ಅಂಬಾರಿ ಉತ್ಸವಕ್ಕೆ ಅತ್ಯುತ್ತಮ ಬ್ರ್ಯಾಂಡ್ ಅನುಭವ ಪ್ರಶಸ್ತಿ, ಪಲ್ಲಕ್ಕಿ ಬಸ್‌ಗೆ ಅತ್ಯುತ್ತಮ ಗ್ರಾಹಕ ಸ್ವೀಕೃತಿ ಪ್ರಶಸ್ತಿ, ಪ್ರತಿಷ್ಠಿತ ಬಸ್‌ಗಳ ಸೇವೆ ಬ್ರ್ಯಾಂಡ್‌ಗೆ ಅತ್ಯುತ್ತಮ ಸಾರ್ವಜನಿಕ ಸಂಪರ್ಕ ಪ್ರಶಸ್ತಿಗಳು ಲಭಿಸಿವೆ. ಕೆಎಸ್‌ಆರ್‌ಟಿಸಿ (KSRTC) ನಿಗಮವು ಅತ್ಯುತ್ತಮ ಪರಿಸರ ನಿರ್ವಹಣೆ ಹಾಗೂ ವಿನೂತನ ಮಾನವ ಸಂಪನ್ಮೂಲ ಯೋಜನೆಗಳ ಅನುಷ್ಠಾನಕ್ಕಾಗಿ ಗ್ರೋ ಕೇರ್ ಇಂಡಿಯಾ ಪ್ರಶಸ್ತಿಗಳನ್ನ ಎರಡು ವಿಭಾಗದಲ್ಲಿ ಪಡೆದಿದೆ. ದೆಹಲಿಯಲ್ಲಿ ಆಡ್‌ವರ್ಲ್ಡ್ ಪ್ರಶಸ್ತಿಗಳನ್ನ, ಗೋವಾದಲ್ಲಿ ಗ್ರೋ ಕೇರ್ ಇಂಡಿಯಾ ಪ್ರಶಸ್ತಿ ಹಾಗೂ ರಾಯಪುರದಲ್ಲಿ ಪಿಆರ್‌ಎಸ್‌ಐ ಪ್ರಶಸ್ತಿ ಪ್ರಧಾನ (PRSI Award Principal) ಮಾಡಲಾಗಿದೆ.