Bengaluru: ಸಾಮಾನ್ಯ ದಿನಬಳಕೆ ವಸ್ತುಗಳ (Common daily use items) ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನತೆ ತೈಲ ಬೆಲೆ ಏರಿಕೆಯು ಕೂಡ ಕೈ ಸುಡುತ್ತಿರುವ ಕಾರಣ ವಿದ್ಯುತ್ ಚಾಲಿತ ವಾಹನಗಳತ್ತ (EV) ಮುಖ ಮಾಡಿದ್ದು, ರಾಜ್ಯವು ಎಲೆಕ್ಟ್ರಿಕ್ (The state is electric) ವಾಹನಗಳ ನೋಂದಣಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದೆ. ರಾಜ್ಯದಲ್ಲಿ (State) 2020-21 ರಿಂದ 2024-25ರ ಅವಧಿಯಲ್ಲಿ ಎಲೆಕ್ಟ್ರಿಕ್ ವಾಹನಗಳ (Electric vehicles) ನೋಂದಣಿ ಪ್ರಮಾಣವು ಶೇ.1,500ರಷ್ಟು ಹೆಚ್ಚಾಗಿದೆ.ಎಲೆಕ್ಟ್ರಿಕ್ ವಾಹನಗಳು ಮೊದಲಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಾಗ ಖರೀದಿ ಪ್ರಮಾಣ ನಿರಾಶದಾಯಕವಾಗಿತ್ತು. ಇ-ವಾಹನಗಳ (e-vehicles) ಕಾರ್ಯಕ್ಷಮತೆ ಬಗ್ಗೆ ಜನರಿಗೆ ನಂಬಿಕೆ ಇರಲಿಲ್ಲ. ಜತೆಗೆ, ವಾಹನಗಳ ಚಾರ್ಜಿಂಗ್ ಸ್ಟೇಷನ್‌ಗಳ ಬಗ್ಗೆಯೂ ಸಾಕಷ್ಟು ಗೊಂದಲಗಳಿದ್ದವು. ಹೀಗಾಗಿ, ಜನರು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಹಿಂದೇಟು ಹಾಕುತ್ತಿದ್ದರು.

ಆದರೆ ಆದರೆ, ರಾಜ್ಯ ಸರಕಾರ (State Govt) ಇ.ವಿ. ನೀತಿ ಜಾರಿಗೊಳಿಸಿದ ನಂತರ ವಿದ್ಯುತ್‌ಚಾಲಿತ ವಾಹನಗಳಿಗೆ (electric vehicles) ಹೆಚ್ಚಿನ ಉತ್ತೇಜನ ಸಿಕ್ಕಿದೆ. ವಾಹನ ಪ್ರಿಯರು ಪರಿಸರಸ್ನೇಹಿ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚು ಆಸಕ್ತಿ ತೋರುತ್ತಿದ್ದು, ಇ.ವಿ. ವಾಹನಗಳ ಖರೀದಿ ಭರಾಟೆ ಜೋರಾಗಿದೆ. ಪಟ್ಟಣಗಳು ಮತ್ತು ನಗರಗಳಲ್ಲಿ ಹೆಚ್ಚಿನ ಚಾರ್ಜಿಂಗ್ ಸ್ಟೇಷನ್‌ಗಳ ಸ್ಥಾಪನೆ, ಮಾರುಕಟ್ಟೆಯಲ್ಲಿ ವಿವಿಧ ಕಂಪನಿಗಳ ವಿದ್ಯುತ್‌ಚಾಲಿತ ವಾಹನ (Companies electric vehicle) ಮಾರಾಟಗಾರರೊಂದಿಗೆ ರಾಜ್ಯದಲ್ಲಿ ವಾಹನಗಳ ಸಂಖ್ಯೆ ವೃದ್ಧಿಸಿದೆ.ರಾಜ್ಯದಲ್ಲಿ5 ವರ್ಷಗಳ ಹಿಂದೆ ವಾರ್ಷಿಕ ಸರಾಸರಿ 11 ಸಾವಿರ ಇ-ವಾಹನಗಳು ನೋಂದಣಿಯಾಗುತ್ತಿದ್ದವು. ಈಗ ವಾರ್ಷಿಕ ಸರಾಸರಿ 1.60 ಲಕ್ಷ ಇ-ವಾಹನಗಳು ನೋಂದಣಿ ಆಗುತ್ತಿವೆ. ಮುಂದಿನ ಐದು ವರ್ಷಗಳಲ್ಲಿ (five years) ಈ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಸಹ ಹೇಳಿದ್ದಾರೆ.
ಇನ್ನು ಈಗಾಗಲೇ ಪರಿಸರಸ್ನೇಹಿಯಾಗಿರುವ ವಿದ್ಯುತ್‌ಚಾಲಿತ ವಾಹನಗಳ (Eco-friendly electric vehicles) ಖರೀದಿ ಉತ್ತೇಜಿಸುವ ಸಲುವಾಗಿ ಕೇಂದ್ರ ಸರಕಾರ 2016ರಲ್ಲಿಎಲ್ಲಾಬಗೆಯ ಎಲೆಕ್ಟ್ರಿಕ್ ವಾಹನಗಳಿಗೆ ಶೂನ್ಯ ರಸ್ತೆ ತೆರಿಗೆ ಘೋಷಿಸಿತ್ತು. ಅಂತೆಯೇ ರಾಜ್ಯದಲ್ಲೂವಿದ್ಯುತ್ ಚಾಲಿತ ವಾಹನಗಳ ಖರೀದಿಗೆ (25 ಲಕ್ಷಕ್ಕಿಂತ ಹೆಚ್ಚು ಮೌಲ್ಯದ ವಾಹನಗಳನ್ನು ಹೊರತುಪಡಿಸಿ) ತೆರಿಗೆ ವಿನಾಯಿತಿ (Tax Exemption) ನೀಡಲಾಗಿದೆ. ಇದರ ಫಲವಾಗಿ ವಾಹನ ಪ್ರಿಯರು ಹೆಚ್ಚು ಹೆಚ್ಚಾಗಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುತ್ತಿದ್ದಾರೆ.ಇನ್ನೂ ಹೆಚ್ಚಾಗಿ ಶೂನ್ಯ (Mostly zero) ತೆರಿಗೆ, ಪೆಟ್ರೋಲ್ ಮತ್ತು ಡೀಸೆಲ್ ತುಟ್ಟಿಯಾಗುತ್ತಿರುವುದು, ಕಡಿಮೆ ನಿರ್ವಹಣಾ ವೆಚ್ಚ, ಪರಿಸರ ರಕ್ಷಣೆ ದೃಷ್ಟಿಯಿಂದ ಇ-ವಾಹನಗಳಿಗೆ ಸರಕಾರ ನೀಡುತ್ತಿರುವ ಉತ್ತೇಜನ, ಜನ ಜಾಗೃತಿ, ಗೃಹಜ್ಯೋತಿ (Encouragement, public awareness, home lighting) ಯೋಜನೆ ಜಾರಿ ಸೇರಿದಂತೆ ನಾನಾ ಕಾರಣಗಳಿಂದ ರಾಜ್ಯದಲ್ಲಿಎಲೆಕ್ಟ್ರಿಕ್ ವಾಹನಗಳ ಖರೀದಿಯು ಏರುಗತಿಯಲ್ಲಿ ಸಾಗಿದೆ.