ಬೆಂಗಳೂರು, ಜ. 02: ಕುಖ್ಯಾತ ಮನೆಗಳ್ಳರನ್ನು ಬಂಧಿಸಿರುವ ಬೆಂಗಳೂರು ನಗರದ ಸಿಸಿಬಿ ಪೊಲೀಸರು, 36 ಪ್ರಕರಣದಲ್ಲಿ ಬೇಕಾಗಿದ್ದ ಇಬ್ಬರು ಖದೀಮರನ್ನು ಬಂಧಿಸಿದ್ದಾರೆ.
ಉತ್ತರ ಪ್ರದೇಶ ಮೂಲದ ಫಾಹಿಮ್ ಇಸ್ಲಾಂ ಹಾಗೂ ಮುರ್ಸಲೀಮ್ ಮೊಹಮ್ಮದ್ ಎಂಬ ಆರೋಪಿಗಳನ್ನು ಬಂಧಿಸಿದ್ದು, ಬಂಧಿತರಿಂದ 4 ಕೆಜಿ ಚಿನ್ನವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಇದರ ಅಂದಾಜು ಮೌಲ್ಯ 2.3 ಕೋಟಿ ರೂ. ಎನ್ನಲಾಗಿದೆ. ಈ ಇಬ್ಬರು ಆರೋಪಿಗಳ ಬಂಧನದಿಂದ 36 ಪ್ರಕರಣ ಬೆಳಕಿಗೆ ಬಂದಿದ್ದು, ಮೂರು ವರ್ಷದಲ್ಲಿ ನಗರದಲ್ಲಿ ಬರೋಬ್ಬರಿ 36 ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ.
ಉತ್ತರಪ್ರದೇಶದಿಂದ ಕಾರಿನಲ್ಲಿ ಬರುತ್ತಿದ್ದ ಕಳ್ಳರು, ಮನೆಗಳಲ್ಲಿ ಚಿನ್ನಾಭರಣ ಕದ್ದು ಅದೇ ಕಾರಿನಲ್ಲಿ ಎಸ್ಕೇಪ್ ಆಗುತ್ತಿದ್ದರು. ಇದೀಗ ಫಿಂಗರ್ ಪ್ರಿಂಟ್ಸ್ ಮುಖಾಂತಾರ ಸಿಕ್ಕಿ ಬಿದ್ದ ಚಾಲಾಕಿ ಮನೆಗಳ್ಳರು, ದೆಹಲಿ, ಹರಿಯಾಣ, ಉತ್ತರ ಪ್ರದೇಶದಿಂದ ಗ್ಯಾಂಗ್ ಕಟ್ಟಿಕೊಂಡು ಬರುತ್ತಿದ್ದರು. ನಂತರ ರಾಜ್ಯದ ಬೆಂಗಳೂರು, ಬೆಳಗಾವಿ, ಗೋವಾ ರಾಜ್ಯದ ಪಣಜಿ, ತೆಲಂಗಾಣದ ಹೈದ್ರಾಬಾದ್ ನಲ್ಲಿ ಸರಣಿ ಮನೆಗಳ್ಳತನ ನಡೆಸುತ್ತಿದ್ದರು.
Grt detection by CCB team led by PI Hazresh..arrest 2 inter state burglary offenders..detect 35 burglary cases..camped in UP for a week..seized 2.3 cr worth 4 kg Gold ornaments..@CPBlr @BlrCityPolice pic.twitter.com/JTOoSO0oQs
— Sandeep Patil IPS (@ips_patil) January 2, 2021