Bengaluru (ಜು.12): ಸರ್ಕಾರದ ಮೇಲೆ ವಿಧಾನಸಭೆ ಆರಂಭವಾದ ದಿನದಿಂದಲೂ ಮುಗಿಬಿದ್ದಿರುವ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ (Kumaraswamy about electricity price)
ನಾಯಕ ಎಚ್ಡಿ ಕುಮಾರಸ್ವಾಮಿ (H.D Kumaraswamy) ಸರ್ಕಾರವನ್ನು ವಿವಿಧ ವಿಚಾರಗಳಲ್ಲಿ ಬುಧವಾರ ರಾಜ್ಯಪಾಲದ ಭಾಷಣದ ಮೇಲಿನ ಚರ್ಚೆ ಸಂದರ್ಭದಲ್ಲೂ ತರಾಟೆಗೆ ತೆಗೆದುಕೊಂಡರು.
ವರ್ಗಾವಣೆ ದಂಧೆಯ ಕುರಿತಾಗಿ ಮತ್ತು ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಆಗಿರುವ ಪರಿಣಾಮಗಳ ಬಗ್ಗೆ ಅವರು ಮಾತನಾಡಿದರು.
‘ಇನ್ನೂರು ಯುನಿಟ್ ವಿದ್ಯುತ್ ಉಚಿತ ಎಂದು ನೀವೆಲ್ಲರೂ ಫೋಟೋ ಹಾಕಿಕೊಂಡಿದ್ದೀರಲ್ಲ. ಆದರೆ ಈಗ ವಿದ್ಯುತ್ ದರ ಏರಿಕೆ ಆಗಿದೆ ಅದರ ಕುರಿತಂತೆಯೂ ಕೂಡ ನೀವು ಫೋಟೋ
ಹಾಕಿಕೊಂಡು ಪ್ರಚಾರ ಮಾಡಬೇಕಲ್ವಾ? ಎಂದು ಕುಮಾರಸ್ವಾಮಿ ಹೇಳಿದ್ದರು ಇದಕ್ಕೆ ವಿರುದ್ಧವಾಗಿ ಬಿಜೆಪಿ (BJP) ಶಾಸಕರ ಕಡೆ ಕಾಂಗ್ರೆಸ್ (Congress) ಶಾಸಕರು ಕೈತೋರಿಸಿ ವಿದ್ಯುತ್
ದರ ಏರಿಕೆ ಮಾಡಿದ್ದು ನಾವಲ್ಲ ಅವರು ಎಂದು (Kumaraswamy about electricity price) ಹೇಳಿದರು.

ಯಾರು ಜಾಸ್ತಿ ಮಾಡಿದ್ದಾರೋ ಅವರದ್ದೇ ಫೋಟೋ ಹಾಕಿ ಎಂದು ಈ ವೇಳೆ ಕುಮಾರಸ್ವಾಮಿ ಹೇಳಿದರು. ಈಗಾಗಲೇ ಅನೇಕ ಹಳ್ಳಿಗಳಲ್ಲಿ ಬಸ್ ಗಳ ಕೊರತೆ ಇದೆ. ನಿಮ್ಮ ಶಕ್ತಿ ಯೋಜನೆಯಿಂದ
ಖಾಸಗಿ ಬಸ್ ಗಳಿಗೆ ತೊಂದರೆ ಆಗಿದೆ. ಆಟೋಗಳಿಗೆ ಸಹ ಇದರಿಂದ ತುಂಬಾ ತೊಂದರೆ ಆಗಿದೆ. ಅವರಿಗೆ ಯಾವ ಪರಿಹಾರ ಕೊಡಬೇಕು ಎಂಬುದರ ಬಗ್ಗೆ ಸರ್ಕಾರ ಯೋಚಿಸಬೇಕು ಎಂದು ಹೇಳಿದರು.
ಇದನ್ನೂ ಓದಿ : ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಜನಸಾಮಾನ್ಯರು ಹೈರಾಣು..! ಅಕ್ಕಿ, ಬೇಳೆಕಾಳುಗಳ ಬೆಲೆಗೆ ನಿಯಂತ್ರಣ ಹಾಕಿ
ಇದೇ ವೇಳೆ ಎಚ್ಡಿಕೆ ಸದನದಲ್ಲಿ ಕೂಪನ್ (Coupon) ಅನ್ನು ಪ್ರದರ್ಶನ ಮಾಡಿದರು. ಇವತ್ತಿನ ಚುನಾವಣಾ ವ್ಯವಸ್ಥೆ ಈ ರೀತಿಯಾಗಿ ಇದೆ. ನಮಗೆ ಮತ ನೀಡಿದರೆ ಗಿಫ್ಟ್ ಕೊಡುವುದಾಗಿ ಈ
ಕೂಪನ್ ಗಳನ್ನು ಚುನಾವಣೆ ಸಂದರ್ಭದಲ್ಲಿ ಹಂಚಿದ್ದಾರೆ. ನಿಮ್ಮ ಐದು ಗ್ಯಾರಂಟಿ ಗಳ ಜೊತೆ ಈ ಒಂದು ಆರನೇ ಗ್ಯಾರಂಟಿ ಬಗ್ಗೆ ಹೇಳಿ ಎಂದು ಕುಮಾರಸ್ವಾಮಿ ಹೇಳಿದರು ಇದಕ್ಕೆ ವಿರುದ್ಧವಾಗಿ
ರಂಗಸ್ವಾಮಿ (Rangaswamy) ನಾವು ಗಿಫ್ಟ್ (Gift) ಅಂತಾ ಕೊಟ್ಟಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ರಂಗಸ್ವಾಮಿ ಅವರೇ ಕುಳಿತುಕೊಳ್ಳಿ, ನಾನು ನಿಮ್ಮ ಹೆಸರೇ ಹೇಳಿಲ್ಲ ಎಂದು ಈ ವೇಳೆ
ಕುಮಾರಸ್ವಾಮಿ ತಿರುಗೇಟು ನೀಡಿದರು

ಯಾವ ರೀತಿ ಭ್ರಷ್ಟಾಚಾರ ವರ್ಗಾವಣೆ ವಿಚಾರದಲ್ಲಿ ನಡೆಯುತ್ತಿದೆ ಎಂಬುದಕ್ಕೆ ದಾಖಲೆ ಇದೆ. ನಿಮಗೆ ನಾನು ಅದನ್ನು ಕಳಿಸುತ್ತೇನೆ ಸರ್ಕಾರ ಈ ವಿಚಾರದಲ್ಲಿ ಕ್ರಮ ತೆಗೆದುಕೊಳ್ಳುತ್ತಾ
ಎಂದು ಸಭಾಧ್ಯಕ್ಷರಿಗೆ ಪ್ರಶ್ನೆ ಮಾಡಿದರು. ಯಾವ ಇಲಾಖೆ ಎಂದು ನಾನು ಹೇಳುವುದಿಲ್ಲ ಆದರೆ ನಿಮಗೆ ಈ ದಾಖಲೆಯನ್ನು ಕಳಿಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು. ಆದರೆ ಏನು ಭ್ರಷ್ಟಾಚಾರ
ಯಾವ ಇಲಾಖೆ ಎಂಬ ಮಾಹಿತಿ ನೀಡಲು ನಿರಾಕರಿಸಿದರು.
ರಶ್ಮಿತಾ ಅನೀಶ್