• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ರಾಜಕೀಯ

ಕೋಲಾರಕ್ಕೆ ಕೊಳಚೆ ನೀರು ಹರಿಸಿ, ಈಗ ಪುಣ್ಯತೀರ್ಥ ಅಂತ ಡಂಗುರ ಹೊಡಿಸಲು ನಾಚಿಕೆಯಾಗಲ್ವಾ? ಸಿದ್ದುಗೆ ಎಚ್‌ಡಿಕೆ ಗುದ್ದು

Rashmitha Anish by Rashmitha Anish
in ರಾಜಕೀಯ, ರಾಜ್ಯ
ಕೋಲಾರಕ್ಕೆ ಕೊಳಚೆ ನೀರು ಹರಿಸಿ, ಈಗ ಪುಣ್ಯತೀರ್ಥ ಅಂತ ಡಂಗುರ ಹೊಡಿಸಲು ನಾಚಿಕೆಯಾಗಲ್ವಾ? ಸಿದ್ದುಗೆ ಎಚ್‌ಡಿಕೆ ಗುದ್ದು
0
SHARES
27
VIEWS
Share on FacebookShare on Twitter

ನೈಟ್ರೇಟ್, ಪಾಸ್ಪರಸ್, ಸೀಸ ಸೇರಿ ಬೆಂಗಳೂರು ಜನರ ಮಲಮೂತ್ರಗಳೇ ತುಂಬಿರುವ ಕೊಳಚೆ ನೀರನ್ನು 3ನೇ ಹಂತದಲ್ಲಿ ಸಂಸ್ಕರಿಸದೆ ಕೋಲಾರಕ್ಕೆ ಹರಿಸಿದ್ದೇ ಮಹಾಪಾಪ.ಇಷ್ಟು ದಿನ ಅದನ್ನೇ ಪುಣ್ಯತೀರ್ಥ (kumaraswamy against to siddaramaiah) ಎಂದು ಡಂಗುರ ಹೊಡೆದವರು ನಿನ್ನೆ ಕೋಲಾರದಲ್ಲಿ 3ನೇ ಹಂತದ ಸಂಸ್ಕರಣೆ ಬಗ್ಗೆ ಹೇಳಿ ಕಾವೇರಿ ಬಗ್ಗೆ ಬೊಗಳೆ ಬಿಡುತ್ತೀರಲ್ಲ,

ಸ್ವಲ್ಪವಾದರೂ ಸಂಕೋಚ ಬೇಡವೇ? ಎಂದು ಜೆಡಿಎಸ್‌ನಾಯಕ ಎಚ್.ಡಿ.ಕುಮಾರಸ್ವಾಮಿ(HD Kumaraswamy) ಅವರು ವಿಪಕ್ಷ ನಾಯಕ ಸಿದ್ದರಾಮಯ್ಯ(siddaramaiah) ವಿರುದ್ದ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

jds leader

ಈ ಕುರಿತು ಸರಣಿ ಟ್ವೀಟ್‌ಮಾಡಿರುವ ಅವರು, 5 ವರ್ಷ ಸರಕಾರ ಮಾಡಿ ಎತ್ತಿನಹೊಳೆ ಹೆಸರಿನಲ್ಲಿ ಕೊಳ್ಳೆ ಹೊಡೆದ ಗಿರಾಕಿಗಳು,

ಆ ನಂತರ ಕೆಸಿ ವ್ಯಾಲಿಯ ವಿಷನೀರು ಹರಿಸಿ, ಈಗ ಚುನಾವಣೆ ಹೊತ್ತಿನಲ್ಲಿ ಕಾವೇರಿ(kumaraswamy against to siddaramaiah) ಎಂದು ಸುಳ್ಳು ಹೇಳುವುದು ಎಷ್ಟು ಸರಿ? ಒಮ್ಮೆ ಯೋಚನೆ ಮಾಡಿ ಕೃಷ್ಣಭೈರೇಗೌಡರೇ? ಮತ ಬೇಕಾದಾಗ ಮನಃಸಾಕ್ಷಿಯನ್ನು ಮಾರಿಕೊಳ್ಳುವುದು ನಿಮಗೆ ಶೋಭೆಯಲ್ಲ.

ನೀರೇ ಬರದಿರುವ ಎತ್ತಿನಹೊಳೆ ಹೆಸರಿನಲ್ಲಿ ಎತ್ತಿದ ಎತ್ತುವಳಿ ಸಾಲದೆಂದು ಕೆಸಿ ವ್ಯಾಲಿಯಲ್ಲಿ ಪರ್ಸಂಟೇಜ್ ಜೇಬಿಗಿಳಿಸಿದ್ದು ಯಾರು? ಹಣದ ದುರಾಸೆಗೆ ವಿಷನೀರು ಹರಿಸಿ ಕೋಲಾರ ಜಿಲ್ಲೆ ಜನರನ್ನು ಸಾವಿನಕೂಪಕ್ಕೆ ತಳ್ಳಿದವರು ಯಾರು?

congress leader

ಆ ಗುತ್ತಿಗೆದಾರನ ಹಿಂದೆ ಅನುದಿನ ಗಿರಕಿ ಹೊಡೆದ ಗಿರಾಕಿ ಯಾರು ಎಂದು ನಿಮಗೆ ಗೊತ್ತಿಲ್ಲವೆ ಕೃಷ್ಣಭೈರೇಗೌಡರೇ? ಎಂದು ಕಾಂಗ್ರೆಸ್‌ಶಾಸಕ ಕೃಷ್ಣಭೈರೇಗೌಡರನ್ನೂ(Krishna Bhaire gowda) ಪ್ರಶ್ನಿಸಿದ್ದಾರೆ.

ಇನ್ನೊಂದು ಟ್ವೀಟ್‌ನಲ್ಲಿ, ನಿಮ್ಮ ತಂದೆಯವರಾದ ಶ್ರೀ ಸಿ.ಭೈರೇಗೌಡರ ಬಗ್ಗೆ ನನಗೂ ಅಪಾರ ಗೌರವ ಇದೆ.

ಶ್ರೀ ದೇವೇಗೌಡರ ಸಂಪುಟದಲ್ಲಿ ಪ್ರಭಾವೀ ಮಂತ್ರಿಗಳಾಗಿದ್ದ ನಿಮ್ಮ ತಂದೆಯವರು ಅಂದೇ ಕೋಲಾರಕ್ಕೆ ಕಾವೇರಿ ನೀರು ಹರಿಸುವ ಬಗ್ಗೆ ದನಿ ಎತ್ತಬಹುದಿತ್ತು.

ಕೊನೆಗೆ ನೀವಾದರೂ ಹೋರಾಟ ನಡೆಸಬೇಕಿತ್ತು. ಮಾನ್ಯ ಕೃಷ್ಣಭೈರೇಗೌಡರೇ, ಕಾವೇರಿ ನದಿ ನೀರು ಹಂಚಿಕೆ ಬಗ್ಗೆ ನಿಮ್ಮ ಅಜ್ಞಾನಕ್ಕೆ ಏನೆಂದು ಹೇಳಬೇಕೋ ಗೊತ್ತಾಗುತ್ತಿಲ್ಲ.

ಇದನ್ನೂ ಓದಿ: https://vijayatimes.com/siddu-angry-against-bjp/

ಕಾವೇರಿ ನ್ಯಾಯಾಧಿಕರಣ ರಚನೆ ಆಗಿದ್ದು ಯಾವಾಗ? ರಾಜ್ಯಕ್ಕೆ ಕಾವೇರಿ ನೀರಿನ ಹಕ್ಕು ಸಾಧಿಸಲು ಮಾಜಿ ಪ್ರಧಾನಿಗಳಾದ ಶ್ರೀ ದೇವೇಗೌಡ(Devegowda) ಅವರ ಪಾತ್ರ ಏನು? ಎಂಬುದರ ಬಗ್ಗೆ ದಯಮಾಡಿ ಮಾಹಿತಿ ಪಡೆದುಕೊಳ್ಳಿ. ಶ್ರೀ ಕೃಷ್ಣಭೈರೇಗೌಡ ಅವರು ಬಹಳ ತಿಳಿವಳಿಕೆ ಉಳ್ಳವರು ಎಂದು ಭಾವಿಸಿದ್ದೆ.

ನನ್ನಂತೆ ಅವರು ಹಳ್ಳಿಯಲ್ಲಿ ಕಲಿಯದೆ ವಿದೇಶದಲ್ಲಿ ಕಲಿತವರು. ಅವರ ಜ್ಞಾನದ ಪರಿಧಿ ದೊಡ್ಡದು ಎಂದು ತಿಳಿದಿದ್ದೆ. ಕೋಲಾರದಲ್ಲಿ ನಿನ್ನೆ ಅವರು ಕೊಟ್ಟ ಹೇಳಿಕೆ ಗಮನಿಸಿದ ಮೇಲೆ ಅವರ ಕುರಿತ ನನ್ನ ಅಭಿಪ್ರಾಯ ತಪ್ಪೆಂದು ಎನಿಸಿತು ಎಂದು ಲೇವಡಿ ಮಾಡಿದ್ದಾರೆ.

Tags: HDKumaraswamypolioticalSiddaramaiah

Related News

ರಾಜಧಾನಿಯಲ್ಲಿ ಕುಮಾರಸ್ವಾಮಿ ರಣಕಹಳೆ: ಹೆಬ್ಬಾಳ ಅಭ್ಯರ್ಥಿ ಡಾ.ಮೋಹಿದ್ ಅಲ್ತಾಫ್‌ಗೆ ಮತದಾರರಿಂದ ಭರ್ಜರಿ ಬೆಂಬಲ
ರಾಜಕೀಯ

ರಾಜಧಾನಿಯಲ್ಲಿ ಕುಮಾರಸ್ವಾಮಿ ರಣಕಹಳೆ: ಹೆಬ್ಬಾಳ ಅಭ್ಯರ್ಥಿ ಡಾ.ಮೋಹಿದ್ ಅಲ್ತಾಫ್‌ಗೆ ಮತದಾರರಿಂದ ಭರ್ಜರಿ ಬೆಂಬಲ

March 23, 2023
ನಂಜನಗೂಡಿನಲ್ಲಿ ಧೃವ ನಾರಾಯಣ ಪುತ್ರನಿಗೆ ನನ್ನ ಬೆಂಬಲ – ಎಚ್.ಸಿ. ಮಹದೇವಪ್ಪ ಘೋಷಣೆ
ರಾಜಕೀಯ

ನಂಜನಗೂಡಿನಲ್ಲಿ ಧೃವ ನಾರಾಯಣ ಪುತ್ರನಿಗೆ ನನ್ನ ಬೆಂಬಲ – ಎಚ್.ಸಿ. ಮಹದೇವಪ್ಪ ಘೋಷಣೆ

March 23, 2023
ರಾಹುಲ್ ಗಾಂಧಿಗೆ ಎರಡು ವರ್ಷಗಳ ಜೈಲು ಶಿಕ್ಷೆ! ಪ್ರಧಾನಿ ವಿರುದ್ಧ ಅವಹೇಳನಕಾರಿ ಹೇಳಿಕೆ ಪ್ರಕರಣ
Vijaya Time

ರಾಹುಲ್ ಗಾಂಧಿಗೆ ಎರಡು ವರ್ಷಗಳ ಜೈಲು ಶಿಕ್ಷೆ! ಪ್ರಧಾನಿ ವಿರುದ್ಧ ಅವಹೇಳನಕಾರಿ ಹೇಳಿಕೆ ಪ್ರಕರಣ

March 23, 2023
ಉರಿಗೌಡ – ನಂಜೇಗೌಡ ವಿವಾದ : ಬಿಜೆಪಿ ನಾಯಕರಿಗೆ ಖಡಕ್‌ಸೂಚನೆ !
ರಾಜಕೀಯ

ಉರಿಗೌಡ – ನಂಜೇಗೌಡ ವಿವಾದ : ಬಿಜೆಪಿ ನಾಯಕರಿಗೆ ಖಡಕ್‌ಸೂಚನೆ !

March 20, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.