Bengaluru : ಜೆಡಿಎಸ್‌ನಾಯಕ ಎಚ್.ಡಿ.ಕುಮಾರಸ್ವಾಮಿ (Kumaraswamy’s Brahmin statement) ಅವರು ಸಂಸದ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಅವರನ್ನು ಟೀಕಿಸುವ ಭರದಲ್ಲಿ
ಬ್ರಾಹ್ಮಣ ಸಮುದಾಯವನ್ನು ಅವಮಾನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕುಮಾರಸ್ವಾಮಿ ಮತ್ತು ಪ್ರಹ್ಲಾದ್ ಜೋಶಿ ನಡುವಿನ ವೈಯಕ್ತಿಕ ಟೀಕೆಗಳು ಇದೀಗ ಸಮುದಾಯಗಳ ಮೇಲೆ ಪ್ರಭಾವ ಬೀರುವ ಹಂತಕ್ಕೆ ಬಂದಿವೆ.

ಶೃಂಗೇರಿಯ (Sringeri) ಚಂದ್ರಮೌಳೇಶ್ವರ ದೇವಸ್ಥಾನದ ಮೇಲೆ ಮರಾಠ ಪೇಶ್ವೆ ಬ್ರಾಹ್ಮಣರು ದಾಳಿ ಮಾಡಿ, ದೇವಸ್ಥಾನವನ್ನು ಧ್ವಂಸ ಮಾಡಿದ್ದರು. ಪ್ರಹ್ಲಾದ್ ಜೋಶಿ
(Kumaraswamy’s Brahmin statement) ಅಂತಹ ಸಮುದಾಯಕ್ಕೆ ಸೇರಿದ ವ್ಯಕ್ತಿ.
ನಾನು ಹಳೇ ಕರ್ನಾಟಕದ (Karnataka) ಬ್ರಾಹ್ಮಣನ್ನು (Brahmin) ಟೀಕಿಸುತ್ತಿಲ್ಲ. ಆದರೆ ಮರಾಠ ಪೇಶ್ವೆ ಬ್ರಾಹ್ಮಣರು ಕನ್ನಡ ನಾಡಿನ ಮೇಲೆ ದೌರ್ಜನ್ಯ ಎಸಗಿದ್ದಾರೆ,
ಎಂದು ಎಚ್.ಡಿ.ಕುಮಾರಸ್ವಾಮಿ ಅವರು ನೇರವಾಗಿ ಮರಾಠ ಪೇಶ್ವೆ ಬ್ರಾಹ್ಮಣರ ವಿರುದ್ದ ವಾಗ್ದಾಳಿ ನಡೆಸಿದ್ದರು.
ಎಚ್.ಡಿ.ಕುಮಾರಸ್ವಾಮಿ ಅವರ ಈ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದೆ. ಇನ್ನೊಂದೆಡೆ ಈ ಹೇಳಿಕೆ ಹಳೇ ಮೈಸೂರು (Mysore) ಭಾಗದಲ್ಲಿ ಜೆಡಿಎಸ್ (JDS) ಮೇಲೆ ಋಣಾತ್ಮಕ ಪರಿಣಾಮ ಬೀರುವ ಸಾಧ್ಯತೆಯನ್ನು ಹೆಚ್ಚಿಸಿದೆ.
ಹಳೇ ಮೈಸೂರು ಭಾಗದ ನಗರ ಕೇಂದ್ರಗಳಲ್ಲಿ ಬ್ರಾಹ್ಮಣ ಮತಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಬ್ರಾಹ್ಮಣ ಸಮುದಾಯ ನಿರ್ಣಾಯಕ ಮತ ಬ್ಯಾಂಕ್ ಆಗಿರದಿದ್ದರೂ, ಅನೇಕ ಕ್ಷೇತ್ರಗಳಲ್ಲಿ 5 ರಿಂದ 10 ಸಾವಿರ ಬ್ರಾಹ್ಮಣ ಮತಗಳಿವೆ.
ನೇರ ಹಣಾಹಣಿ ಇರುವ ಕ್ಷೇತ್ರಗಳಲ್ಲಿ ಬ್ರಾಹ್ಮಣ ಮತಗಳು ಕೂಡಾ ಜೆಡಿಎಸ್ ಅಭ್ಯರ್ಥಿಗಳಿಗೆ ನೆರವಾಗಲಿವೆ. ಆದರೆ ಇದೀಗ ಕುಮಾರಸ್ವಾಮಿ ಅವರು ನೀಡಿರುವ
ಈ ಹೇಳಿಕೆ ಬ್ರಾಹ್ಮಣ ಮತಗಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿಸಿದೆ.

ಕಳೆದ ಅನೇಕ ದಶಕಗಳಿಂದ ಹಳೇ ಮೈಸೂರು ಭಾಗದಲ್ಲಿ ಬ್ರಾಹ್ಮಣ ಸಮುದಾಯ ಜೆಡಿಎಸ್‌ನೊಂದಿಗೆ ಗುರುತಿಸಿಕೊಂಡಿದೆ. ಮೈಸೂರು ನಗರ ಹೊರತುಪಡಿಸಿ, ಮಂಡ್ಯ (Mandya), ಶ್ರೀರಂಗಪಟ್ಟಣ, ಮೇಲುಕೋಟೆ,
ಪಾಂಡವಪುರ, ಮದ್ದೂರು, ಶ್ರವಣಬೆಳಗೊಳ, ಹಳೇಬೀಡು ಮುಂತಾದ ಕ್ಷೇತ್ರಗಳಲ್ಲಿ ಬ್ರಾಹ್ಮಣ ಸಮುದಾಯ ಜೆಡಿಎಸ್‌ನೊಂದಿಗೆ ಗುರುತಿಸಿಕೊಂಡಿದೆ.
ಆದರೆ ಇದೀಗ ಕುಮಾರಸ್ವಾಮಿ ಅವರು ನೀಡಿರುವ ಹೇಳಿಕೆ ಜೆಡಿಎಸ್ ಅಭ್ಯರ್ಥಿಗಳಿಗೆ ತಲೆನೋವು ತಂದಿದೆ.
ಇದನ್ನೂ ಓದಿ: ರೈತರ ಸಾಲ ಮನ್ನಾ ಮಾಡುವುದರಿಂದ ದೇಶಕ್ಕೇನೂ ಲಾಭವಿಲ್ಲ : ಸಂಸದ ತೇಜಸ್ವಿ ಸೂರ್ಯ
ಬಹಿರಂಗವಾಗಿ ಬ್ರಾಹ್ಮಣ ಸಮುದಾಯವನ್ನು ಅವಹೇಳನ ಮಾಡುವ ರೀತಿಯಲ್ಲಿ ಕುಮಾರಸ್ವಾಮಿ ಅವರು ನೀಡಿರುವ ಹೇಳಿಕೆ ಕೇವಲ ಮರಾಠ ಬ್ರಾಹ್ಮಣರಿಗೆ ಮಾತ್ರ ಸೀಮಿತ ಎನ್ನುವ ಕುಮಾರಸ್ವಾಮಿ
ಅವರ ಸ್ಪಷ್ಟನೆಯನ್ನು ಸಮುದಾಯ ಒಪ್ಪುವಂತೆ ಕಾಣುತ್ತಿಲ್ಲ.
ಏಕೆಂದರೆ ಬ್ರಾಹ್ಮಣರಲ್ಲೇ ವಿವಿಧ ಪಂಗಡಗಳನ್ನು ಕರ್ನಾಟಕದಲ್ಲಿ ಗುರುತಿಸಲು ಸಾಧ್ಯವಿಲ್ಲ. ಹೀಗಾಗಿ ಇದರ ಪರಿಣಾಮ ಮುಂಬರುವ ಚುನಾವಣೆಯಲ್ಲಿ ಜೆಡಿಎಸ್‌ಮೇಲೆ ಉಂಟಾಗುವುದು ಸ್ಪಷ್ಟವಾಗಿದೆ.