ಇದು ಕೊಪ್ಪಳ(Koppala) ಜಿಲ್ಲೆಯ(District) ಕುಷ್ಟಗಿ(Kushtagi) ತಾಲ್ಲೂಕಿನ ಕೃಷಿ ಇಲಾಖೆಯ(Agriculture Department) ಅವ್ಯವಸ್ಥೆ. ಇಲ್ಲಿ ಸರ್ಕಾರಿ ಅಧಿಕಾರಿಗಳಿಗಿಂತ ಹೊರಗಿನವರ ದರ್ಬಾರೇ ಜೋರು. ಇಷ್ಟೇ ಆದ್ರೆ ಸುಮ್ಮನೆ ಬಿಡಬಹುದು. ಆದ್ರೆ ಈ ಕೃಷಿ ಇಲಾಖೆಯ ಕರ್ಮಕಾಂಡದ ಇನ್ನೊಂದು ಸನ್ನಿವೇಶದ ಬಗ್ಗೆ ಹೇಳ್ತೀವಿ ಮುಂದೆ ಓದಿ.
ಇದು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ನಡೆದಿರೋ ಭಾರೀ ಅವ್ಯವಹಾರದ ಒಂದು ಸ್ಯಾಂಪಲ್ಲಷ್ಟೇ. ಕುಷ್ಟಗಿ ತಾಲ್ಲೂಕಿನಾದ್ಯಂತ ನರೇಗಾ ಯೋಜನೆಯಡಿ ಬಂದಿರುವ ಎಲ್ಲಾ ಕಾಮಗಾರಿಗಳನ್ನು ಯಂತ್ರದಿಂದ ಮಾಡಿಸಿ ಭಾರೀ ಗೋಲ್ಮಾಲ್ ಮಾಡಿದ್ದಾರೆ ತಾಲ್ಲೂಕಿನ ಸಹಾಯಕ ಕೃಷಿ ಅಧಿಕಾರಿ ತಿಪ್ಪೇಸ್ವಾಮಿ ಹಾಗೀ ಎ.ಓ ರಾಘವೇಂದ್ರ ಕೊಂಡಗುರಿ ಅನ್ನೋದು ಇಲ್ಲಿನ ಹೋರಾಟಗಾರರ ದೂರು.
ನರೇಗಾ ಯೋಜನೆಯಡಿ ಕುಷ್ಟಗಿ ತಾಲ್ಲೂಕಿನಲ್ಲಿ ಕೃಷಿ ಇಲಾಖೆಯ ಮೂಲಕ ಕೃಷಿ ಹೊಂಡ, ಬದು ನಿರ್ಮಾಣ ಕಾರ್ಯಗಳನ್ನು ಕೂಲಿ ಕಾರ್ಮಿಕರಿಂದ ಮಾಡಿಸಬೇಕಿತ್ತು. ಆದ್ರೆ ಇಲ್ಲಿ ಕೂಲಿ ಕಾರ್ಮಿಕರಿಂದ ಯಾವ ಕೆಲಸವನ್ನು ಮಾಡಿಸದೆ ಬರೀ ಜೆಸಿಬಿಯಿಂದಲೇ ಕೆಲಸಗಳನ್ನು ಮಾಡಿಸಿದ್ದಾರೆ. ಇದಕ್ಕೆ ಪೂರಕವಾದ ಸಾಕ್ಷಿ ನಮ್ಮ ಸಿಟಿಜನ್ ಜರ್ನಲಿಸ್ಟ್‌ಗೆ ಸಿಕ್ಕಿದೆ. ಕೃಷಿ ಅಧಿಕಾರಿಗಳ ಈ ಭಾರೀ ಗೊಲ್ಮಾಲ್ ಬಗ್ಗೆ ಸಾಕ್ಷಿ ಸಮೇತವಾಗಿ ಮೇಲಾಧಿಕಾರಿಗಳಿಗೆ ದೂರು ನೀಡಲಾಗಿದೆ. ಆದ್ರೆ ಅಧಿಕಾರಿಗಳು ಇನ್ನೂ ಈ ಭ್ರಷ್ಟ ಅಧಿಕಾರಿಗಳ ವಿರುದ್ಧ ಯಾವುದೇ ಕೈಗೊಂಡಿಲ್ಲ ಅನ್ನೋದು ಹೋರಾಟಗಾರರ ದೂರು.
ಇನ್ನು ಈ ಅಧಿಕಾರಿಗಳ ವಿರುದ್ಧ ದೂರು ಕೊಟ್ರೆ ಅಧಿಕಾರಿಗಳು ತಮ್ಮ ಬೆಂಬಲಿಗರಿಂದ ಬೆದರಿಕೆ ಒಡ್ಡುತ್ತಾರೆ. ಕೃಷಿ ಅಧಿಕಾರಿ ಬೆಂಬಲಿಗ, ಬಡಕಾರ್ಮಿಕರ ಹೊಟ್ಟೆ ತುಂಬಿಸಬೇಕಾದ ನರೇಗಾ ಯೋಜನೆ ಬಡವರ ಹೆಸರಲ್ಲಿ ಭ್ರಷ್ಟರು ಹೊಟ್ಟೆ ತುಂಬಿಸೋ ಯೋಜನೆಯಾಗಿ ಬಿಟ್ಟಿದೆ. ಕೂಲಿ ಕಾರ್ಮಿಕರ ನಕಲಿ ಅಕೌಂಟ್ ಸಿದ್ಧಪಡಿಸಿ ಕೊಟ್ಯಾಂತರ ರೂಪಾಯಿ ಲೂಟಿ ಮಾಡುತ್ತಿರುವ ಈ ಭ್ರಷ್ಟ ಕೃಷಿ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮಕೈಗೊಳ್ಳಬೇಕು ಅನ್ನೋದು ಕುಷ್ಟಗಿ ಮಂದಿಯ ಆಗ್ರಹವಾಗಿದೆ.
- ನಾಗರಾಜ್ ಕುಷ್ಟಗಿ