Visit Channel

104 ವರ್ಷದ ಅಜ್ಜಿ ಪಡೆದ ಅಂಕ 84 !

ತಿರುವನಂತಪುರ ನ 15 : ಕೇರಳ ಸಾಕ್ಷರತಾ ರಾಜ್ಯ ಎಂಬುವುದು ಎಲ್ಲರಿಗೂ ತಿಳಿದಿರುವ ವಿಷಯ ಈಗ ಮತ್ತೊಮ್ಮೆ ಅದು ನಿಜ ಎಂದು ಸಾಭೀತಾಗಿದೆ.  104 ವರ್ಷದ ವೃದ್ದೆಯೊಬ್ಬರು ಸಾಕ್ಷರತಾ ಪರೀಕ್ಷೆಯಲ್ಲಿ 100ಕ್ಕೆ 89 ಅಂಕಗಳನ್ನು ಪಡೆಯುವ ಮೂಲಕ ಕಲಿಕೆಗೆ ವಯಸ್ಸಿನ ಮಿತಿ ಇಲ್ಲ ಎಂದು ತೋರಿಸಿಕೊಟ್ಟಿದ್ದಾರೆ.

ಕೊಟ್ಟಾಯಂನ 104 ವರ್ಷದ ಕುಟ್ಟಿಯಮ್ಮ ಕೇರಳ ರಾಜ್ಯ ಸಾಕ್ಷರತಾ ಮಿಷನ್‌ನ ಪರೀಕ್ಷೆಯಲ್ಲಿ 89/100 ಅಂಕಗಳನ್ನು ಗಳಿಸಿದ್ದಾರೆ. ಜ್ಞಾನದ ಜಗತ್ತನ್ನು ಪ್ರವೇಶಿಸಲು ವಯಸ್ಸು ಅಡ್ಡಿಯಾಗುವುದಿಲ್ಲ. ಅತ್ಯಂತ ಗೌರವ ಮತ್ತು ಪ್ರೀತಿಯಿಂದ, ಕುಟ್ಟಿಯಮ್ಮ ಮತ್ತು ಇತರ ಎಲ್ಲ ಕಲಿಕಾ ಅಭ್ಯರ್ಥಿಗಳಿಗೆ ನಾನು ಶುಭ ಹಾರೈಸುತ್ತೇನೆ. ಭಾವಪರವಶಳಾಗಿರುವ ಕುಟ್ಟಿಯಮ್ಮನ ಚಂದದ ಫೋಟೋದೊಂದಿಗೆ ಅವರು ಟ್ವೀಟ್ ಮಾಡಿದ್ದಾರೆ.

ಇವರು ಈಗ 4ನೇ ತರಗತಿಗೆ ಸೇರಲು ಮತ್ತು ತನ್ನ ತರಗತಿಗಳನ್ನು ಮುಂದುವರಿಸಲು ಅರ್ಹತೆ ಪಡೆದಿದ್ದಾರೆ. ಆಯರ್ಕುನ್ನಂ ಮೂಲದ ಕುಟ್ಟಿಯಮ್ಮ (Kuttiyamma, a native of Ayarkunnam) ಅವರು ಗಣಿತ ಮತ್ತು ಮಲಯಾಳಂ(Maths and Malayalam) ಮುಖ್ಯ ವಿಷಯಗಳ ಪರೀಕ್ಷೆಯನ್ನು ಬರೆದಿದ್ದಾರೆ.

ತಿರುವಂಚೂರಿನ ಕುನ್ನೂಮ್ಪುರಂನಲ್ಲಿ ಸಾಕ್ಷರತಾ ಶಿಕ್ಷಕರಾಗಿರುವ ಪ್ರೇರಕ್ ರಹಾನಾ(Prerak Rahana) ಅವರು ಕುಟ್ಟಿಯಮ್ಮ ಅವರಿಗೆ ಶಿಕ್ಷಕರಾಗಿದ್ದರು. ಅವರು ಪ್ರತಿದಿನ ಸಂಜೆ ಕುಟ್ಟಿಯಮ್ಮ ಅವರಿಗೆ ಅವರ ನಿವಾಸಕ್ಕೇ ಹೋಗಿ ಪಾಠ ಕಲಿಸುತ್ತಿದ್ದರು. ಶಾಲೆಗೆ ಹೋಗದ ಕುಟ್ಟಿಯಮ್ಮಗೆ ಓದಲು ಬರುತ್ತಿದ್ದರೂ ಬರೆಯಲು ಗೊತ್ತಿರಲಿಲ್ಲ. ಆದರೆ, ಈಗ ಕುಟ್ಟಿಯಮ್ಮ ಅಕ್ಷರಸ್ತೆ.

ಕುಟ್ಟಿಯಮ್ಮ ಅವರು ಬರೆಯಲು, ಕಲಿಯಲು ತುಂಬಾ ಉತ್ಸುಕರಾಗಿದ್ದರು. ಕುಟ್ಟಿಯಮ್ಮ ಅವರಿಗೆ ಶ್ರವಣದಲ್ಲಿ ಸ್ವಲ್ಪ ಸಮಸ್ಯೆಗಳಿವೆ. ಆದರೆ, ಬೇರೆ ಯಾವುದೇ ದೊಡ್ಡ ಆರೋಗ್ಯ ಸಮಸ್ಯೆಗಳಿಲ್ಲ. ಅವರು ಪ್ರಕಾಶಮಾನವಾದ ಬೆಳಕಿನಲ್ಲಿಯೂ ಕನ್ನಡಕವಿಲ್ಲದೆ ಓದುತ್ತಾರೆ ಅಂತಾರೆ ಅವರ ಟೀಚರ್​ ರಹಾನಾ.

ಕುಟ್ಟಿಯಮ್ಮ ಅವರ ಪತಿ ಟಿ ಕೆ ಕೊಂತಿ ಅವರು 2002ರಲ್ಲಿ ನಿಧನರಾದರು. ನಂತರ ಅವರು ತಮ್ಮ ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ. ಕೊಟ್ಟಾಯಂನಿಂದ ಒಟ್ಟು 509 ಮಂದಿ ಮತ್ತು ಅಯರ್ಕುನ್ನಂನಿಂದ 7 ಮಂದಿ ಸಾಕ್ಷರತಾ ಪರೀಕ್ಷೆ ಬರೆದಿದ್ದಾರೆ. ಕುಟ್ಟಿಯಮ್ಮನ ಕೇಂದ್ರದಿಂದ ಪರೀಕ್ಷೆ ಬರೆದವರೆಲ್ಲರೂ ಉತ್ತೀರ್ಣರಾಗಿದ್ದು, 104 ವರ್ಷದ ಕುಟ್ಟಿಯಮ್ಮ ಟಾಪರ್ ಆಗಿದ್ದಾರೆ

Latest News

PV Sindhu
ಕ್ರೀಡೆ

ಕಾಮನ್‍ವೆಲ್ತ್ ಗೇಮ್ಸ್ 2022 ರಲ್ಲಿ ಚಿನ್ನ ಗೆದ್ದ ಪಿ.ವಿ ಸಿಂಧೂ ; ಹರಿದುಬರುತ್ತಿದೆ ಅಭಿನಂದನೆಗಳ ಮಹಾಪೂರ

ಕಾಮನ್‍ವೆಲ್ತ್ ಗೇಮ್ಸ್ 2022 ರಲ್ಲಿ(CommonWealth Games 2022) ಭಾರತೀಯ ಬ್ಯಾಡ್ಮಿಂಟನ್(Badminton) ಇತಿಹಾಸದಲ್ಲಿ ಎಂದಿಗೂ ನೆನಪಿನಲ್ಲಿ ಉಳಿಯುವಂತೆ ಮಾಡಿದೆ ಪಿ.ವಿ ಸಿಂಧೂ(P.V Sindhu) ಅವರ ಸಾಧನೆ.

China
ದೇಶ-ವಿದೇಶ

12 ಸಾವಿರಕ್ಕಿಂತ ಕಡಿಮೆ ಬೆಲೆಯ ಚೀನಿ ಫೋನ್ ಬ್ಯಾನ್?? ; ಭಾರತದಲ್ಲಿ ಚೀನಿ ಕಂಪನಿಗಳ ಪಾಲು ಎಷ್ಟಿದೆ?

ಚೀನಾದ ವಿವೋ, ಕ್ಸಿಯೋಮಿ, ಒಪ್ಪೋ ಕಂಪನಿಗಳು ಸ್ಮಾರ್ಟ್‍ಫೋನ್, ಮೊಬೈಲ್ ಉತ್ಪಾದನೆಯಲ್ಲಿ ಪ್ರಾಬಲ್ಯ ಸಾಧಿಸಿದ ಪರಿಣಾಮ ದೇಶೀಯ ಕಂಪನಿಗಳು ನಷ್ಟವನ್ನು ಅನುಭವಿಸಿ ಮಾರುಕಟ್ಟೆಯಿಂದಲೇ ಹಿಂದೆ ಸರಿದಿವೆ.

Lorry driver
ಪ್ರಮುಖ ಸುದ್ದಿ

ಕುಡಿದು ಲಾರಿ ಚಾಲಕನ ಮೇಲೆ ಹಲ್ಲೆ ಮಾಡಿದ ಪೊಲೀಸರು ; ಕೇಸ್ ದಾಖಲಿಸಿಕೊಳ್ಳದೆ ಕಾನೂನು ಉಲ್ಲಂಘನೆ!

ಕುಡಿದ ಆಮಲಿನಲ್ಲಿದ್ದ ಮೂವರು ಪೊಲೀಸರು, “ನೀನು ಯಾವ ಸೀಮೆ ಡ್ರೈವರ್ ___*****” ಎಂದು ಅವಾಚ್ಯ ಪದಗಳಿಂದ ನಿಂದಿಸಿದ್ದಲ್ಲದೇ, ಚಾಲಕನ ಕೈ, ಕಾಲು ಸೇರಿದಂತೆ ಗುಪ್ತಾಂಗದ ಜಾಗಕ್ಕೆ ಒದ್ದು, ಮಾರಾಣಾಂತಿಕ ಹಲ್ಲೆ ನಡೆಸಿದ್ದಾರೆ.