Visit Channel

ದ್ರೌಪದಿ ಮುರ್ಮು ಗೆಲುವನ್ನು ಸಂಭ್ರಮಿಸಲು 20000 ಲಡ್ಡು ತಯಾರಿಕೆ

Presidential Election

ರಾಷ್ಟ್ರಪತಿ ಚುನಾವಣೆಯ(Presidential Elections 2022) ಫಲಿತಾಂಶಗಳಿಗಾಗಿ ಇಡೀ ರಾಷ್ಟ್ರವೇ ಕಾಯುತ್ತಿರುವಾಗ, NDA ಅಭ್ಯರ್ಥಿ(NDA Candidate) ದ್ರೌಪದಿ ಮುರ್ಮು(Draupadi Murmu) ಅವರ ಪೂರ್ವಜರ ಹಳ್ಳಿಯಲ್ಲಿ ಸಂಭ್ರಮ, ಸಡಗರ ವಿಜಯಕ್ಕೂ ಮುನ್ನವೇ ಪ್ರಾರಂಭವಾಗಿದೆ. ಭುವನೇಶ್ವರದಿಂದ ಸುಮಾರು 280 ಕಿಲೋಮೀಟರ್ ದೂರದಲ್ಲಿರುವ ಒಡಿಶಾದ(Odisha) ಉಪರ್ಬೆಡಾದಲ್ಲಿ ಮತ ಎಣಿಕೆ(Vote Counting) ಪ್ರಾರಂಭವಾಗುವ ಮೊದಲೇ ಜನರು ಸಂಭ್ರಮಾಚರಣೆಯಲ್ಲಿದ್ದಾರೆ.

Draupadi

ಮುರ್ಮು ಅವರು ಈ ದೂರದ ಬುಡಕಟ್ಟು ಗ್ರಾಮದಲ್ಲಿ ಹುಟ್ಟಿ ಬೆಳೆದವರು, ನಮ್ಮ ಮಗಳು ಎಂದು ಕರೆಯುವ ಮುಖೇನ ಮುರ್ಮು ಅವರ ಬಗ್ಗೆ ಇಲ್ಲಿನ ಗ್ರಾಮಸ್ಥರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ದ್ರೌಪದಿ ಮುರ್ಮು ಅವರ ಚುನಾವಣಾ ವಿಜಯದ ನಂತರ ಗ್ರಾಮಸ್ಥರು ಇಡೀ ಗ್ರಾಮದಲ್ಲಿ ಲಡ್ಡೂಗಳನ್ನು(Laddoos) ಹಂಚುವ ಮೂಲಕ ಗೆಲುವನ್ನು ಸಂಭ್ರಮಿಸಲು ಮುಂಚಿತವಾಗಿಯೇ ಯೋಜನೆ ರೂಪಿಸಿದ್ದಾರೆ. ಈ ಸಮಾರಂಭಕ್ಕಾಗಿ ಸುಮಾರು 20,000 ಲಡ್ಡೂಗಳನ್ನು ಸಿದ್ಧಪಡಿಸಲಾಗಿದೆ. ಈ ಹಳ್ಳಿಯಲ್ಲಿ ಲಡ್ಡೂ ತಯಾರಿಸುತ್ತಿದ್ದ ಮಹನೀಯರೊಬ್ಬರು ಮಾತನಾಡಿ,

ಮುರ್ಮು ಅವರ ಗೆಲುವಿನ ಬಗ್ಗೆ ಅತೀವ ವಿಶ್ವಾಸ ವ್ಯಕ್ತಪಡಿಸಿದ್ದು, ಮುರ್ಮು ಅವರು ದೇಶದ ಮೊದಲ ಆದಿವಾಸಿ ರಾಷ್ಟ್ರಪತಿಯಾಗಿ ಹೊರಹೊಮ್ಮಲಿದ್ದಾರೆ ಎಂದು ಹೇಳಿದ್ದಾರೆ. “ನಾನು ಇಂದು ತುಂಬಾ ಸಂತೋಷವಾಗಿದ್ದೇನೆ, ಅದಕ್ಕಾಗಿಯೇ ನಾನು ರಾಷ್ಟ್ರಪತಿಯಾಗಲಿರುವ ದ್ರೌಪದಿ ಮುರ್ಮು ಅವರ ವಿಜಯದ ಸಂಭ್ರಮಕ್ಕಾಗಿ ಲಡ್ಡೂಗಳನ್ನು ಸಿದ್ಧಪಡಿಸುತ್ತಿದ್ದೇನೆ. ಗ್ರಾಮದಲ್ಲಿ 20 ಸಾವಿರ ಲಡ್ಡೂಗಳನ್ನು ಬೃಹತ್ ಪ್ರಮಾಣದಲ್ಲಿ ತಯಾರಿಸಲಾಗುತ್ತಿದೆ. ನಮ್ಮ ಊರಿನ ಮಹಿಳೆಯ ವಿಜಯದ ನಂತರ, ಈ ಎಲ್ಲಾ ಲಡ್ಡೂಗಳನ್ನು ಇಡೀ ಗ್ರಾಮದಲ್ಲಿ ವಿತರಿಸಲಾಗುವುದು.

Laddoo

ಮತ್ತೊಬ್ಬ ವ್ಯಕ್ತಿ ಮಾತನಾಡಿ, “ಒಡಿಶಾದ ಬುಡಕಟ್ಟು ಕುಟುಂಬದ ಮಗಳು ದ್ರೌಪದಿ ಮುರ್ಮು ಅವರು ದೇಶದ ರಾಷ್ಟ್ರಪತಿಯಾಗುತ್ತಾರೆ. ಇದು ನಮಗೆ ಮಾತ್ರವಲ್ಲ ಇಡೀ ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ. ಮಯೂರ್‌ಭಂಜ್ ಜಿಲ್ಲೆಯ ರಾಯರಂಗ್‌ಪುರದಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಉಪರ್ಬೇಡ ಮುರ್ಮು ಅವರ ಸ್ಥಳೀಯ ಗ್ರಾಮವಾಗಿದೆ. ಅವರು ಇನ್ನೂ ಇಲ್ಲಿ ತಮ್ಮ ಪೂರ್ವಜರ ಮನೆಯನ್ನು ಹೊಂದಿದ್ದಾರೆ. ಆ ಮನೆ ಅವರ ತಂದೆಗೆ ಸೇರಿದ್ದು, ಈಗ ಆಕೆಯ ಸೋದರಳಿಯ ದುಲಾರಾಮ್ ತುಡು ವಾಸವಾಗಿದ್ದಾರೆ. ರಾಯರಂಗಪುರದ ಪಟ್ಟಣರಲ್ಲಿ ವಿವಿಧ ಸ್ಥಳೀಯ ಸಂಸ್ಥೆಗಳಾದ ವ್ಯಾಪಾರಿ ಸಂಸ್ಥೆಗಳು,

ವಕೀಲರ ಸಂಘಗಳು ಮತ್ತು ಧಾರ್ಮಿಕ ಮತ್ತು ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರಿ ಅಧಿಕಾರಿಗಳು ಸಹ “ಮಣ್ಣಿನ ಮಗಳ”ನ್ನು ಅಭಿನಂದಿಸಲು ಉತ್ಸಾಹದಿಂದ ಕಾಯುತ್ತಿದ್ದಾರೆ ಎಂದು ಸಂತಸದಿಂದ ಹೇಳಿದ್ದಾರೆ. ದ್ರೌಪದಿ ಮುರ್ಮು ಅವರ ಗೆಲುವಿಗೆ ಅಭಿನಂದನೆ ಸಲ್ಲಿಸಲು ಪ್ರತಿಯೊಬ್ಬರು ಸಜ್ಜಾಗಿದ್ದಾರೆ. ಉನ್ನತ ಸಾಂವಿಧಾನಿಕ ಹುದ್ದೆಯು ಅವರ ಹಿಡಿತದಲ್ಲಿದೆ ಎಂದು ಸ್ಥಳೀಯರು ನಂಬಿದ್ದಾರೆ. ಜನಪದ ಕಲಾವಿದರು ಮತ್ತು ಬುಡಕಟ್ಟು ನೃತ್ಯಗಾರರು ತಮ್ಮ ಪ್ರದರ್ಶನವನ್ನು ಅಭ್ಯಾಸ ಮಾಡಿಕೊಂಡಿದ್ದು, ಫಲಿತಾಂಶಗಳು ಪ್ರಕಟವಾಗುತ್ತಿದ್ದಂತೆ ಬೀದಿಗಿಳಿದು ಕುಣಿದು, ಕುಪ್ಪಳಿಸಲು ಸಿದ್ಧರಾಗಿದ್ದಾರೆ.

Yashwant sinha

ದೇಶದ ಮೊದಲ ಬುಡಕಟ್ಟು ಮಹಿಳಾ ರಾಷ್ಟ್ರಪತಿಯನ್ನಾಗಿ ಮುರ್ಮು ಅವರನ್ನು ನೋಡಲು ಬುಡಕಟ್ಟು ಸಮುದಾಯದ ಜನರು ಕಾತುರದಿಂದ ಕಾಯುತ್ತಿದ್ದಾರೆ.

Latest News

China Ship
ದೇಶ-ವಿದೇಶ

ಶ್ರೀಲಂಕಾ ಬಂದರಿನಲ್ಲಿ ಚೀನಾದ ಹಡಗು ; ಭಾರತದ ಕಳವಳಕ್ಕೆ 5 ಕಾರಣಗಳು ಇಲ್ಲಿವೆ!

ಮೊದಲಿನಿಂದಲೂ ಈ ಹಡಗು ಶ್ರೀಲಂಕಾ ಬಂದರಿಗೆ ಬರುವುದನ್ನು ಭಾರತ ತೀವ್ರವಾಗಿ ವಿರೋಧಿಸಿತ್ತು. ಭಾರತದ ಕಳವಳಕ್ಕೆ ಪ್ರಮುಖ 5 ಕಾರಣಗಳೆಂದರೆ,

bjp
ರಾಜಕೀಯ

ಕಾಂಗ್ರೆಸ್ಸಿಗರಿಗೇಕೆ ಜಿಹಾದಿಗಳ ಮೇಲೆ ಇಷ್ಟೊಂದು ಪ್ರೀತಿ? : ಬಿಜೆಪಿ ಪ್ರಶ್ನೆ

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮಕ್ಕೆ ಮಸಿ ಬಳಿಯಲು ಯತ್ನಿಸಿದ ದುಷ್ಟ ಶಕ್ತಿಗಳನ್ನು ಮಟ್ಟ ಹಾಕಲಾಗಿದೆ ಎಂದು ಬಿಜೆಪಿ ತಿಳಿಸಿದೆ.

Pingali
ಮಾಹಿತಿ

ನಮ್ಮ ರಾಷ್ಟ್ರಧ್ವಜವನ್ನು ನಿರ್ಮಿಸಿದ ಪಿಂಗಳಿ ವೆಂಕಯ್ಯ, ಮೊದಲು ಬ್ರಿಟಿಷ್ ಸೈನ್ಯದಲ್ಲಿದ್ದರು ; ಇಲ್ಲಿದೆ ಓದಿ ಅಚ್ಚರಿಯ ಮಾಹಿತಿ

ದೇಶಕ್ಕೊಂದು ಧ್ವಜಕೊಟ್ಟು 100 ವರ್ಷ ಕಳೆದರೂ ಪಿಂಗಳಿ ಅವರ ನೆನಪು ಅಜರಾಮರವಾಗಿದೆ. ಪಿಂಗಳಿ ವೆಂಕಯ್ಯ ಅವರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ ಮುಂದೆ ಓದಿ.