Lalbagh Republic Day Flower Show 2024
Lalbagh Flower Show: ಪ್ರತೀ ವರ್ಷ ಲಾಲ್ಬಾಗ್ (Lalbagh)ನಲ್ಲಿ ಫಲಪುಷ್ಪ ಪ್ರದರ್ಶನ ನಡೆಯುತ್ತದೆ. ಈ ಬಾರಿ ಲಾಲ್ಬಾಗ್ ಫ್ಲವರ್ ಶೋ ಆಗಸ್ಟ್ 8ರಂದು ಪ್ರಾರಂಭವಾಗಿ ಆಗಸ್ಟ್ 19 ರವರೆಗೆ ಇರಲಿದೆ. ಇದಕ್ಕಾಗಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದ್ದು ಲಾಲ್ಬಾಗ್ ಮದುವಣಗಿತ್ತಿಯಂತೆ ಬಗೆ ಬಗೆಯ ಹೂವುಗಳಿಂದ ಸಿಂಗಾರಗೊಂಡಿದೆ.
ಲಾಲ್ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಎಲ್ಲರ ಚಿತ್ತ ಲಾಲ್ಬಾಗ್ನತ್ತ ನೆಟ್ಟಿದೆ. ಈ ಬಾರಿ ಪ್ರದರ್ಶನದಲ್ಲಿ ಪ್ರವಾಸಿಗರನ್ನ ಮನರಂಜಿಸಲು ತರಕಾರಿ ಕೆತ್ತನೆ, ಹಣ್ಣು ಕೆತ್ತನೆ, ಜಾನೂರ್ ಆರ್ಟ್, ಹೂಗಳಿಂದ ಅಲಂಕಾರ ಸೇರಿದಂತೆ ನಾನಾ ಸ್ಪರ್ಧೆಗಳನ್ನು ಇಲಾಖೆ ಆಯೋಜಿಸಿದೆ. ಜೊತೆಗೆ ಇಕೆಬಾನ, ಬೋನ್ಸಾಯ್ (Ikebana, Bonsai) ನೋಡಗರನ್ನು ಆಕರ್ಷಿಸಲಿವೆ.
ಫಲಪುಷ್ಪ ಪ್ರದರ್ಶನದ ಅಲಂಕಾರಕ್ಕಾಗಿ ಒಟ್ಟು 2.5 ಕೋಟಿ ರೂ.ಗಳನ್ನು ಹೂಡಲಾಗಿದ್ದು, ಹೆಚ್ಚಿನ ಹೂವುಗಳನ್ನು ಲಾಲ್ಬಾಗ್ನಲ್ಲಿಯೇ ಬೆಳೆಸಲಾಗಿದೆ. ಕೆಲವು ಹೆಚ್ಚುವರಿ ತಳಿಗಳನ್ನು ಪುಣೆಯಿಂದ ತರಿಸಲಾಗಿದೆ.
ಲಾಲ್ಬಾಗ್ ಫ್ಲವರ್ ಶೋ 2024 ಟಿಕೆಟ್ ಬೆಲೆ:
ವಾರದ ದಿನಗಳಲ್ಲಿ ಟಿಕೆಟ್ (Ticket) ದರವನ್ನು ವಯಸ್ಕರಿಗೆ 80 ಮತ್ತು ಮಕ್ಕಳಿಗೆ 30 ರೂಪಾಯಿಯಂತೆ ವಿಧಿಸಲಾಗಿದೆ. ವಾರಾಂತ್ಯದಲ್ಲಿ ದೊಡ್ಡವರಿಗೆ 100 ರೂ. ಹಾಗೂ ಮಕ್ಕಳಿಗೆ 30 ರೂಪಾಯಿ ಇರುತ್ತದೆ. ಸಮವಸ್ತ್ರದಲ್ಲಿರುವ ಶಾಲಾ ಮಕ್ಕಳಿಗೆ ಉಚಿತ ಪ್ರವೇಶವನ್ನು ನೀಡಲಾಗುತ್ತದೆ. ಪುಷ್ಪ ಪ್ರದರ್ಶನ ಬೆಳಿಗ್ಗೆ 7:00 ರಿಂದ ಸಂಜೆ 7:00 ರವರೆಗೆ ಇರುತ್ತದೆ.
ಕಾರ್ಯಕ್ರಮದ ತಯಾರಿಯಲ್ಲಿ ತೋಟಗಾರಿಕೆ ಇಲಾಖೆ, ಸ್ವಯಂಸೇವಕರು ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಪಾಲ್ಗೊಂಡಿದ್ದು, ಪ್ರದರ್ಶನವನ್ನು ತ್ಯಾಜ್ಯ ಮುಕ್ತವಾಗಿಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಭೆಯನ್ನು ನಡೆಸಿವೆ ಎಂದು ತಿಳಿದು ಬಂದಿದೆ.
ಈ ಕಾರ್ಯಕ್ರಮಗಳನ್ನು ನಿರ್ವಹಿಸಲು ತೋಟಗಾರಿಕಾ ಇಲಾಖೆಯು ಸುಮಾರು ಒಂದು ದಶಕದಿಂದ ಬ್ಯೂಟಿಫುಲ್ ಭಾರತ್ ಜೊತೆ ಪಾಲುದಾರಿಕೆಯನ್ನು ಹೊಂದಿದೆ. ಕಸ ಮತ್ತು ಪ್ಲಾಸ್ಟಿಕ್ (Plastic) ತ್ಯಾಜ್ಯವನ್ನು ಕಡಿಮೆ ಮಾಡುವ ಮಹತ್ವವನ್ನು ಇದು ಒತ್ತಿ ಹೇಳುತ್ತದೆ. ನಿಷೇಧಿತ ವಸ್ತುಗಳು ಕಡಿಮೆಯಾಗಿದ್ದರೂ, ಅವು ಇನ್ನೂ ಆವರಣವನ್ನು ಪ್ರವೇಶಿಸುತ್ತವೆ, ವಿಶೇಷವಾಗಿ NWPP ಚೀಲಗಳು. ಮಾರಾಟಗಾರರಲ್ಲಿ ಜಾಗೃತಿ ಮೂಡಿಸುವ ಮೂಲಕ ಇದರ ಬಳಕೆ ಕಡಿಮೆ ಮಾಡುವ ಗುರಿಯನ್ನು ಇದು ಹೊಂದಿದೆ.
ಹೊಸ ಮಾರ್ಗಸೂಚಿಗಳ ಅಡಿಯಲ್ಲಿ, ಲಾಲ್ಬಾಗ್ನಲ್ಲಿ ಮಾರಾಟಗಾರರು 5,000 ರೂಪಾಯಿ ಮರುಪಾವತಿಸಬಹುದಾದ ಠೇವಣಿ ಪಾವತಿಸಬೇಕು. ನಿಷೇಧಿತ ವಸ್ತುಗಳನ್ನು ನಿಷೇಧಿಸುವ ಮತ್ತು ತಮ್ಮ ಪ್ರದೇಶಗಳಲ್ಲಿ ಶುಚಿತ್ವವನ್ನು ಕಾಪಾಡಿಕೊಳ್ಳಲು ಅಗತ್ಯವಿರುವ ಒಪ್ಪಂದವನ್ನು ಒಪ್ಪಿಕೊಳ್ಳಬೇಕು.
ಲಾಲ್ಬಾಗ್ನಲ್ಲಿ ಏಕ-ಬಳಕೆಯ ಕಾಗದದ ಚೀಲಗಳು ಮತ್ತು ಬಾಟಲ್ ನೀರನ್ನು ಅನುಮತಿಸಲಾಗುವುದಿಲ್ಲವಾದರಿಂದ ಪಾಲ್ಗೊಳ್ಳುವವರಿಗೆ ತಮ್ಮ ಸ್ವಂತ ಚೀಲಗಳು ಮತ್ತು ಮರುಬಳಕೆ ಮಾಡಬಹುದಾದ ಬಾಟಲಿಗಳನ್ನು ತರಲು ಪ್ರೋತ್ಸಾಹಿಸಲಾಗುತ್ತದೆ. ಹೆಚ್ಚುವರಿಯಾಗಿ, ಮರುಬಳಕೆ ಮಾಡಬಹುದಾದ ಸ್ಟೀಲ್ ಪ್ಲೇಟ್ಗಳನ್ನು (Steel Plate) ಪೋಲೀಸ್ ಮತ್ತು ಸಿಬ್ಬಂದಿಗೆ ಆಹಾರಕ್ಕಾಗಿ ಬಳಸಲಾಗುತ್ತದೆ. ಇದಕ್ಕಾಗಿ ವ್ಯವಸ್ಥೆಗಳನ್ನು ಮಾಡಲಾಗಿದೆ.
ಸಿಎಂ, ಡಿಸಿಎಂರಿಂದ ಪ್ರದರ್ಶನಕ್ಕೆ ಚಾಲನೆ
ಈ ಬಾರಿ ಹತ್ತು ಲಕ್ಷಕ್ಕೂ ಹೆಚ್ಚು ಜನ ಆಗಮಿಸುವ ನಿರೀಕ್ಷೆ ಇದೆ. ಲಾಲ್ಬಾಗ್ನಲ್ಲಿ ಅಂಬೇಡ್ಕರ್ (Ambedkar) ಅವರ ಸಂದೇಶ ಅನಾವರಣವಾಗಲಿದ್ದು, ನೋಡುಗರ ಕಣ್ಮನ ಸೆಳೆಯಲಿದೆ. ಆಗಸ್ಟ್ 8 ಬೆಳಗ್ಗೆ 10.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (D K Shivakumar) ಅವರು ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಯಾಗಿ ಅಂಬೇಡ್ಕರ್ ಅವರ ಮೊಮ್ಮಗ ಭೀಮರಾವ್ ಯಶ್ವಂತ ಅಂಬೇಡ್ಕರ್ ಕಾಣಿಸಿಕೊಳ್ಳಲಿದ್ದಾರೆ.
Lalbagh Flower Show 2024 started from August In Bengaluru
ಇನ್ನೂ ಗಾಜಿನ ಮನೆಯ ಮುಂಭಾಗ 3.6ಲಕ್ಷ ಗುಲಾಬಿ ಹೂವು ಹಾಗೂ 2.4 ಲಕ್ಷ ಸೇವಂತಿಗೆ ಹೂಗಳ ಆಕರ್ಷಣೆಯಿಂದ ಪ್ರದರ್ಶನ ಕಾಣಸಿಗಲಿದೆ. ಅದರ ಮುಂಭಾಗದಲ್ಲಿ 12 ಅಡಿ ಎತ್ತರದ ಅಂಬೇಡ್ಕರ್ ಪ್ರತಿಮೆ ರಾರಾಜಿಸಲಿದೆ. ಇನ್ನೂ ಬಿ.ಆರ್ ಅಂಬೇಡ್ಕರ್ ಅವರ ಜನ್ಮಸ್ಥಳದ ಸ್ಮಾರಕ 3.4 ಲಕ್ಷ ಪುಷ್ಪಗಳಲ್ಲಿ ಕಂಗೊಳಿಸಲಿದೆ.
ವೀರಾಜ್ ಸ್ವಾಮಿ.ಎಂ✍🏻