ಮೈಸೂರು, ಡಿ. 24: ಲಂಚ ಪಡೆಯುತ್ತಿದ್ದ ವೇಳೆ ಪುರಸಭೆ ಮುಖ್ಯಾಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ.
ತಿ.ನರಸೀಪುರ ತಾಲ್ಲೂಕಿನ ಬನ್ನೂರು ಪುರಸಭೆ ಮುಖ್ಯಾಧಿಕಾರಿ ಪುಷ್ಪಲತಾ ಎಸಿಬಿ ಬಲೆಗೆ ಬಿದ್ದ ಅಧಿಕಾರಿಯಾಗಿದ್ದು, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು 25 ಸಾವಿರ ಹಣ ಪಡೆಯುವ ವೇಳೆ ಪುರಸಭೆ ಮುಖ್ಯಧಿಕಾರಿಯನ್ನು ಬಂಧಿಸಿದ್ದಾರೆ.
ಕಾಮಗಾರಿ ಬಿಲ್ ಮಾಡಲು ಬನ್ನೂರಿನ ಗುತ್ತಿಗೆದಾರೊಬ್ಬರಿಗೆ ಪಟ್ಟಣದ ಕಾಮಗಾರಿ ಸಂಬಂಧ ಬಳಿ 25 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಬನ್ನೂರು ಪುರಸಭೆ ಮುಖ್ಯಾಧಿಕಾರಿ ಪುಷ್ಪಲತಾ ವಿರುದ್ಧ ಎಸಿಬಿಗೆ ದೂರು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಎಸಿಬಿ SP ಸುಮಂತ್ ಪನೇಕರ್ ನೇತೃತ್ವದಲ್ಲಿ ಎಸಿಬಿ ದಾಳಿ ನಡೆಸಿದರು.
ದಾಳಿ ವೇಳೆ DSP ಪರಶುರಾಮಪ್ಪ, ಅಧಿಕಾರಿಗಳಾದ ಕರೀಮ್ ರಾವತರ್, ಕೆ. ನಿರಂಜನ್ ಸಿಬ್ಬಂದಿಗಳಾದ ಕುಮಾರ್ ಆರಾಧ್ಯ, ಗುರು ಪ್ರಸಾದ್,ಮಂಜುನಾಥ್, ಯೋಗೀಶ್, ನೇತ್ರಾವತಿ, ಪುಷ್ಪಲತಾ ತಂಡದವರು ಭಾಗವಹಿಸಿದ್ದರು.