download app

FOLLOW US ON >

Monday, August 8, 2022
Breaking News
ಹಿಟ್ಲರ್ ಕೂಡಾ ಚುನಾವಣೆಗಳನ್ನು ಗೆಲ್ಲುತ್ತಿದ್ದ : ರಾಹುಲ್‌ ಗಾಂಧಿಆಮ್ಲಜನಕ ಕೊರತೆ ; ಮಾರ್ಗಸೂಚಿ ಪಾಲಿಸುವಲ್ಲಿ ಸಿಬ್ಬಂದಿಯ ವಿಫಲವೆಂದ ಬಿ.ಎ ಪಾಟೀಲ್ ವರದಿ : `ದ ಫೈಲ್ಸ್’ಅರ್ಪಿತಾ ಮುಖರ್ಜಿ ಪ್ರಾಣಕ್ಕೆ ಅಪಾಯವಿದೆ ; ಆಹಾರ ಮತ್ತು ನೀರನ್ನು ಪರೀಕ್ಷಿಸಬೇಕು : ನ್ಯಾಯಾಲಯಕ್ಕೆ ಇ.ಡಿ ಮನವಿಕಾಮನ್ ವೆಲ್ತ್ ಗೇಮ್ಸ್ 2022 : ಕೇವಲ 1 ಗಂಟೆ ಅಂತರದಲ್ಲಿ ಹ್ಯಾಟ್ರಿಕ್ ಚಿನ್ನ ಗೆದ್ದ ಕುಸ್ತಿ ವೀರರುಜ್ಯೂಸ್ ಬಾಟಲಿಯನ್ನೇ ಮೈಕ್ ಮಾಡಿಕೊಂಡು ಶಾಲೆಯ ದುಸ್ಥಿತಿಯನ್ನು ವರದಿ ಮಾಡಿದ ಬಾಲಕ ; ವೀಡಿಯೋ ವೈರಲ್ಸಚಿವ ಸುನೀಲ್‌ ಕುಮಾರ್‌ಗೆ ಇಂಥಾ ಗುಲಾಮಿ ಮನಸ್ಥಿತಿ ಬರಬಾರದಿತ್ತು : ಸಿದ್ದರಾಮಯ್ಯಮೋದಿ-ಮಮತಾ ಬ್ಯಾನರ್ಜಿ ಭೇಟಿ : ಪಶ್ಚಿಮ ಬಂಗಾಳಕ್ಕೆ ಹಣ ಬಿಡುಗಡೆಗೆ ಒತ್ತಾಯ!ಸಿಎಂಗೆ ಕೋವಿಡ್ ಪಾಸಿಟಿವ್ ದೃಢ ; ದೆಹಲಿ ಪ್ರವಾಸ ರದ್ದು!ಜಮೀರ್‌ ಅಹಮದ್‌ ಮುಸ್ಲಿಂ ಮಹಿಳೆಯರು ಚುನಾವಣೆಗೆ ಸ್ಪರ್ಧಿಸುವುದನ್ನು ಬಯಸುವುದಿಲ್ಲ : ಬಿಜೆಪಿಜಮ್ಮು- ಕಾಶ್ಮೀರದಲ್ಲಿ ಪತ್ತೆಯಾಗಿದೆ 1,200 ವರ್ಷಗಳ ಹಿಂದಿನ ಮೂರು ತಲೆಯ ವಿಷ್ಣುವಿನ ಪುರಾತನ ವಿಗ್ರಹ!
English English Kannada Kannada

ಸಂಚಾರಿ ವಿಜಯ್ ಹುಟ್ಟುಹಬ್ಬಕ್ಕೆ ‘ಲಂಕೆ’ ಪೋಸ್ಟರ್

ಸರ್ಕಾರ ಚಿತ್ರಮಂದಿರಗಳ ಆರಂಭಕ್ಕೆ ಅನುಮತಿ ನೀಡಿದರೆ, ಸೆಪ್ಟೆಂಬರ್ ನಲ್ಲಿ "ಲಂಕೆ" ಚಿತ್ರ ತೆರೆಗೆ ಬರಲಿದೆ. ಸಾಹಸ ಪ್ರಧಾನ ಈ ಚಿತ್ರವನ್ನು ರಾಮ್ ಪ್ರಸಾದ್ ಎಂ.ಡಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ರಾಮ್ ಪ್ರಾಸಾದ್ ಹಾಗೂ ಗುರುರಾಜ ದೇಸಾಯಿ ಸಂಭಾಷಣೆ ಬರೆದಿದ್ದಾರೆ.

ಇತ್ತೀಚೆಗೆ ನಮ್ಮನ್ನು ಅಗಲಿದ ನಟ ಸಂಚಾರಿ ವಿಜಯ್ ಅವರ ಹುಟ್ಟುಹಬ್ಬ. ಲೂಸ್ ಮಾದ ಯೋಗೇಶ್ ನಾಯಕನಾಗಿ ನಟಿಸಿರುವ “ಲಂಕೆ” ಚಿತ್ರದ ಪ್ರಮುಖಪಾತ್ರದಲ್ಲಿ ಸಂಚಾರಿ ವಿಜಯ್ ನಟಿಸಿದ್ದಾರೆ. ವಿಜಯ್ ಅವರ ಹುಟ್ಟುಹಬ್ಬದ ನೆನಪಿಗಾಗಿ ಚಿತ್ರತಂಡ ಪೋಸ್ಟರ್ ಬಿಡುಗಡೆ ಮಾಡಿದೆ. ಇತ್ತೀಚೆಗೆ ಬಿಡುಗಡೆಯಾಗಿದ್ದ “ಲಂಕೆ” ಚಿತ್ರದ ಮೋಷನ್ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಸರ್ಕಾರ ಚಿತ್ರಮಂದಿರಗಳ ಆರಂಭಕ್ಕೆ ಅನುಮತಿ ನೀಡಿದರೆ, ಸೆಪ್ಟೆಂಬರ್ ನಲ್ಲಿ “ಲಂಕೆ” ಚಿತ್ರ ತೆರೆಗೆ ಬರಲಿದೆ. ಸಾಹಸ ಪ್ರಧಾನ ಈ ಚಿತ್ರವನ್ನು ರಾಮ್ ಪ್ರಸಾದ್ ಎಂ.ಡಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ರಾಮ್ ಪ್ರಾಸಾದ್ ಹಾಗೂ ಗುರುರಾಜ ದೇಸಾಯಿ ಸಂಭಾಷಣೆ ಬರೆದಿದ್ದಾರೆ.

ದಿ ಗ್ರೇಟ್ ಎಂಟರ್ ಟೈನರ್ ಲಾಂಛನದಲ್ಲಿ ಪಟೇಲ್ ಶ್ರೀನಿವಾಸ್(ನಾಗವಾರ) ಹಾಗೂ ಸುರೇಖ ರಾಮಪ್ರಸಾದ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.

ಕಾರ್ತಿಕ್ ಶರ್ಮಾ ಸಂಗೀತ ನೀಡಿರುವ ಈ ಚಿತ್ರದಲ್ಲಿ ನಾಲ್ಕು ಹಾಡುಗಳು ಹಾಗೂ ಎರಡು ಬಿಟ್ಸ್ ಗಳಿವೆ.
ರಮೇಶ್ ಬಾಬು ಛಾಯಾಗ್ರಹಣ, ಶಿವರಾಜ್ ಮೇಹು ಸಂಕಲನ, ರವಿವರ್ಮ, ಪಳನಿರಾಜ್, ಅಶೋಕ್ ಸಾಹಸ ನಿರ್ದೇಶನ ಹಾಗೂ ಧನಂಜಯ್, ಮೋಹನ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

ಲೂಸ್ ಮಾದ ಯೋಗೇಶ್ ಚಿತ್ರದ ನಾಯಕನಾಗಿ ಅಭಿನಯಿಸಿದ್ದು, ಸಂಚಾರಿ ವಿಜಯ್ ಈ‌ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಕೃಷಿ ತಾಪಂಡ, ಕಾವ್ಯ ಶೆಟ್ಟಿ, ಶರತ್ ಲೋಹಿತಾಶ್ವ, ಶೋಭ್ ರಾಜ್, ಡ್ಯಾನಿ ಕುಟ್ಟಪ್ಪ, ಸುಚೇಂದ್ರ ಪ್ರಸಾದ್, ವಾಣಿಶ್ರೀ, ಗಾಯಿತ್ರಿ ಜಯರಾಂ, ಎಸ್ಟರ್ ನರೋನ, ಪ್ರಶಾಂತ್ ಸಿದ್ದಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Share News on

Share on facebook
Facebook
Share on google
Google+
Share on twitter
Twitter
Share on linkedin
LinkedIn
Share on whatsapp
WhatsApp
error: Content is protected !!

Submit Your Article