English English Kannada Kannada

ಗಣೇಶನ ಹಬ್ಬಕ್ಕೆ ‘ಲಂಕೆ’

"ನಮ್ಮ ಚಿತ್ರ ಯಾವುದೇ ತೊಂದರೆಗಳಿಲ್ಲದೆ ಬಿಡುಗಡೆ ಹಂತಕ್ಕೆ ಬಂದಿದೆ. ಅದಕ್ಕೆ ಕಾರಣ ನಮ್ಮ ಚಿತ್ರದ ನಿರ್ಮಾಪಕರಾದ ಪಟೇಲ್ ಶ್ರೀನಿವಾಸ್. ಅವರ ಪ್ರೋತ್ಸಾಹಕ್ಕೆ ಅನಂತ ಧನ್ಯವಾದ" ಎಂದರು ನಿರ್ದೇಶಕ ರಾಮಪ್ರಸಾದ್.
Share on facebook
Share on google
Share on twitter
Share on linkedin
Share on print

ಲೂಸ್ ಮಾದ ಯೋಗೇಶ್ ಅಭಿನಯದ ‘ಲಂಕೆ’ ಚಿತ್ರ ಸಪ್ಟೆಂಬರ್ 10ರಂದು ಗಣೇಶನ ಹಬ್ಬದ ಶುಭ ಸಂದರ್ಭದಲ್ಲಿ ರಾಜ್ಯಾದ್ಯಂತ 200 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

“ನಾನು ನಮ್ಮದೇ ಸಂಸ್ಥೆಯಿಂದ ನಿರ್ಮಿಸಲಾದ ಚಿತ್ರಗಳಲ್ಲಿಯೂ ಇಷ್ಟು ಪತ್ರಿಕಾಗೋಷ್ಠಿಗಳಲ್ಲಿ ಪಾಲ್ಗೊಂಡಿರಲಿಲ್ಲ. ಹಾಗಾಗಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಪ್ರಚಾರಕಾರ್ಯ ನಡೆಸಿರುವವರ ಪ್ರಯತ್ನ ಮೆಚ್ಚುವಂಥದ್ದು. ಹಾಗಾಗಿಯೇ ಚಿತ್ರದ ಎಲ್ಲಾ ರೀತಿಯ ಪ್ರಚಾರಕಾರ್ಯಗಳಲ್ಲೂ ನಾನು ಭಾಗಿಯಾಗಿದ್ದೇನೆ” ಎಂದ ನಾಯಕ ಲೂಸ್ ಮಾದ ಯೋಗೇಶ್ ಒಳ್ಳೆಯ ತಂಡದ ಜೊತೆ ಕೆಲಸ ಮಾಡಿದ ಖುಷಿಯಿದೆ. ಗಣಪತಿ ಹಬ್ಬಕ್ಕೆ ಚಿತ್ರ ಬರುತ್ತಿದೆ ನೋಡಿ ಹಾರೈಸಿ ಎಂದರು.
“ನಮ್ಮ ಚಿತ್ರ ಯಾವುದೇ ತೊಂದರೆಗಳಿಲ್ಲದೆ ಬಿಡುಗಡೆ ಹಂತಕ್ಕೆ ಬಂದಿದೆ. ಅದಕ್ಕೆ ಕಾರಣ ನಮ್ಮ ಚಿತ್ರದ ನಿರ್ಮಾಪಕರಾದ ಪಟೇಲ್ ಶ್ರೀನಿವಾಸ್. ಅವರ ಪ್ರೋತ್ಸಾಹಕ್ಕೆ ಅನಂತ ಧನ್ಯವಾದ” ಎಂದರು ನಿರ್ದೇಶಕ ರಾಮಪ್ರಸಾದ್. ಈ ಚಿತ್ರ ಇನ್ನಷ್ಟು ಅದ್ಧೂರಿಯಾಗಿ ನಿರ್ಮಾಣ ಮಾಡಬೇಕೆಂದು ಕೊಂಡಾಗ ನನ್ನ ಬೆಂಬಲಕ್ಕೆ ನಿಂತವರು ನನ್ನ ಮಡದಿ ಸುರೇಖಾ ರಾಮಪ್ರಸಾದ್.
ನಾಯಕ ಯೋಗಿ, ಕೃಷಿ ತಾಪಂಡ ಸೇರಿದಂತೆ ಚಿತ್ರತಂಡದ ಸದಸ್ಯರ ಹಾಗೂ ಮಿತ್ರರಾದ ರಕ್ಷಿತ್ ಮಹೇಂದ್ರ, ಹರ್ಷ ಮಹೇಂದ್ರ, ನಂಜುಂಡ ಮೂರ್ತಿ ಮುಂತಾದವರು ಮಾಡಿರುವ ಉಪಕಾರ ಬಹಳವಾದದ್ದು. ಎಲ್ಲರಿಗೂ ತುಂಬು ಹೃದಯದ ಧನ್ಯವಾದ ಎಂದರು.

ಚಿತ್ರದ ಬಗ್ಗೆ ಹೇಳುವುದೆಲ್ಲಾ ಹಿಂದೆ ಹೇಳಿ ಆಗಿದೆ. ನಮ್ಮ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ. ನಿಮ್ಮೆಲ್ಲರ ಪ್ರೋತ್ಸಾಹದಿಂದ ಚಿತ್ರ ಗೆಲ್ಲುವ ಭರವಸೆಯಿದೆ ಎನ್ನುತ್ತಾರೆ ನಾಯಕಿ ಕೃಷಿ ತಾಪಂಡ. ನಿರ್ಮಾಪಕರಾದ ಪಟೇಲ್ ಶ್ರೀನಿವಾಸ್, ಸುರೇಖ ರಾಮಪ್ರಸಾದ್ ಹಾಗೂ ಕಲಾವಿದರಾದ ಮಾಸ್ಟರ್ ಮಿಥುನ್ ಗೌಡ, ಬೇಬಿ ಜನ್ಯ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ‌ ಹಾಜರಿದ್ದು, ಚಿತ್ರದ ಬಗ್ಗೆ ಮಾತನಾಡಿದರು.
.
ರಾಮಪ್ರಸಾದ್ ಎಂ.ಡಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ರಾಮ ಪ್ರಾಸಾದ್ ಹಾಗೂ ಗುರುರಾಜ ದೇಸಾಯಿ ಸಂಭಾಷಣೆ ಬರೆದಿದ್ದಾರೆ.
‘ದಿ ಗ್ರೇಟ್ ಎಂಟರ್ಟೇನರ್’ ಲಾಂಛನದಲ್ಲಿ ಪಟೇಲ್ ಶ್ರೀನಿವಾಸ್(ನಾಗವಾರ) ಹಾಗೂ ಸುರೇಖ ರಾಮಪ್ರಸಾದ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ರಮೇಶ್ ಬಾಬು ಛಾಯಾಗ್ರಹಣ, ಶಿವರಾಜ್ ಮೇಹು ಸಂಕಲನ, ರವಿವರ್ಮ, ಪಳನಿರಾಜ್, ಅಶೋಕ್ ಸಾಹಸ ನಿರ್ದೇಶನ ಹಾಗೂ ಧನಂಜಯ್, ಮೋಹನ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

ಲೂಸ್ ಮಾದ ಯೋಗೇಶ್ ಚಿತ್ರದ ನಾಯಕನಾಗಿ ಅಭಿನಯಿಸಿದ್ದು, ಇತ್ತೀಚೆಗೆ ನಿಧನರಾದ ಸಂಚಾರಿ ವಿಜಯ್ ಸಹ ಈ‌ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಕೃಷಿ ತಾಪಂಡ, ಕಾವ್ಯ ಶೆಟ್ಟಿ, ಶರತ್ ಲೋಹಿತಾಶ್ವ, ಶೋಭ್ ರಾಜ್, ಡ್ಯಾನಿ ಕುಟ್ಟಪ್ಪ, ಸುಚೇಂದ್ರ ಪ್ರಸಾದ್, ವಾಣಿಶ್ರೀ, ಗಾಯಿತ್ರಿ ಜಯರಾಂ, ಎಸ್ಟರ್ ನರೋನ, ಪ್ರಶಾಂತ್ ಸಿದ್ದಿ, ಆದ್ಯ ನಾಯಕ್, ಮಿಥುನ್ ಗೌಡ, ಬೇಬಿ ಜನ್ಯ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ

Submit Your Article