Mysuru : ದಸರಾ(Dasara) ಎನ್ನುವುದು ಕೇವಲ ಒಂದು ಉತ್ಸವ ಅಥವಾ ಆಚರಣೆಯಲ್ಲ. ದಸರಾದ ಜೊತೆಗೆ ಕನ್ನಡಿಗರಿಗೆ ಒಂದು ಭಾವನಾತ್ಮಕ ಸಂಬಂಧವಿದೆ. ಇದು ನಮ್ಮ ನಾಡಹಬ್ಬ(Last Wadiyar to ride on Ambari), ಕರ್ನಾಟಕದ ಇತಿಹಾಸ, ಸಂಸ್ಕೃತಿ, ಪರಂಪರೆ ಹಾಗೂ ಹಿರಿಮೆ ಗರಿಮೆಗಳನ್ನ ವಿಶ್ವಕ್ಕೆ ಸಾರುವ ಹಬ್ಬ.

ನಮ್ಮ ಈ ದಸರಾ ಹಬ್ಬವನ್ನ ನೋಡಲೆಂದೇ ಜಗತ್ತಿನ ಮೂಲೆ ಮೂಲೆಯಿಂದಲೂ ಜನಸಾಗರ ಹರಿದುಬರುತ್ತದೆ. ಜೀವನದಲ್ಲಿ ಒಮ್ಮೆಯಾದರೂ ಮೈಸೂರು ದಸರಾ(Mysuru Dasara) ಉತ್ಸವವನ್ನ ಕಣ್ತುಂಬಿಕೊಳ್ಳಬೇಕು ಎಂದು ಎಷ್ಟೋ ಜನರು ಕಾಯುತ್ತಿರುತ್ತಾರೆ.
ಇಂತಹ ದಸರಾ ಹಬ್ಬ ಎಂದ ತಕ್ಷಣ ನೆನಪಾಗುವುದು ಮೈಸೂರು ಮಹಾರಾಜರು(Mysuru Maharaja). ಏಕೆಂದರೆ, ವಿಜಯನಗರ ಸಾಮ್ರಾಜ್ಯದ(Last Wadiyar to ride on Ambari) ನಾಡಹಬ್ಬ ಎನಿಸಿಕೊಂಡಿದ್ದ ದಸರಾ ಹಬ್ಬವನ್ನ ಸುಮಾರು 350 ವರ್ಷಗಳ ಕಾಲ ನಡೆಸಿಕೊಂಡು ಬಂದ ಕೀರ್ತಿ ಮೈಸೂರು ಮಹಾರಾಜರಿಗೆ ಸಲ್ಲುತ್ತದೆ.
1610ರಿಂದ 1969ರವರೆಗೆ ಅರಸರೇ ದಸರಾ ನಡೆಸಿಕೊಂಡು ಬಂದಿದ್ದರು, ಭಾರತ ಸ್ವಾತಂತ್ರ್ಯಗೊಳ್ಳುವವರೆಗೂ ಮೈಸೂರು ಸಂಸ್ಥಾನದಲ್ಲಿ ಮಹರಾಜರೇ ದಸರಾ ಹಬ್ಬವನ್ನ ಆಚರಿಸುತ್ತಿದ್ದರು.

ಸ್ವತಃ ಮೈಸೂರು ರಾಜರೇ ಸಿಂಹಾಸನದ ಮೇಲೆ ಕುಳಿತು ದರ್ಬಾರ್ ನಡೆಸುತ್ತಿದ್ದರು, ಅಂಬಾರಿಯ ಮೇಲೆ ಕುಳಿತು ಮೆರವಣಿಗೆ ಹೋಗುತ್ತಿದ್ದರು.
ಸ್ವಾತಂತ್ರ್ಯ ಬಂದ ಬಳಿಕವೂ ಈ ಸಂಪ್ರದಾಯ ಹೀಗೆಯೇ ಮುಂದುವರೆದಿತ್ತು. ಮೈಸೂರಿನ ಮಹಾರಾಜರಾಗಿದ್ದ ಜಯಚಾಮರಾಜ ಒಡೆಯರ್(Chamaraja Wodeyar) ಅವರೇ ಅಂಬಾರಿಯ ಮೇಲೆ ಕುಳಿತು ಬನ್ನಿ ಮಂಟಪದವರೆಗೆ ಮೆರವಣಿಗೆ ಹೋಗುತ್ತಿದ್ದರು.
ಆದರೆ, 1969ರ ಬಳಿಕ ಅವರು ಅಂಬಾರಿಯ ಬದಲು ತಮ್ಮ ಸ್ವಂತ ಕಾರಿನಲ್ಲಿ ಬನ್ನಿ ಮಂಟಪಕ್ಕೆ ಬರುತ್ತಾರೆ.
ಹೌದು, ಸ್ವಾತಂತ್ರ್ಯ ಬಂದು 22 ವರ್ಷಗಳ ಕಾಲವೂ ಮೈಸೂರು ಅರಸರೇ ದಸರಾ ಆಚರಿಸುತ್ತಿದ್ದರು. ಆದರೆ 1969ರಲ್ಲಿ ಬಂದಂತಹ ಒಂದೇ ಒಂದು ಕಾನೂನು, ದಸರಾ ಹಬ್ಬದ ಮೇಲೆ ಕಾರ್ಮೋಡವೇ ಕವಿಯುವಂತೆ ಮಾಡಿಬಿಡುತ್ತದೆ.

ಮೈಸೂರಿನ ಜನತೆಗೆ ಅಘಾತವನ್ನೇ ಉಂಟು ಮಾಡಿಬಿಡುತ್ತದೆ. ಸಿಂಹಾಸನದ ಮೇಲೆ ಕುಳಿತು ರಾಜ್ಯಭಾರ ಮಾಡುತ್ತಿದ್ದ ಮಹಾರಾಜರು ದಸರಾ ಆಚರಣೆಯನ್ನೇ ಮೊಟಕುಗೊಳಿಸುತ್ತಾರೆ, ಆನೆಯ ಅಂಬಾರಿ ಮೇಲೆ ಕುಳಿತು ಮೆರವಣಿಗೆ ಹೋಗುವುದನ್ನೇ ನಿಲ್ಲಿಸುತ್ತಾರೆ. ಇದಕ್ಕೆ ಕಾರಣವೂ ಇದೆ.
1969 ಡಿಸೆಂಬರ್ನಲ್ಲಿ ಇಂದಿರಾ ಗಾಂಧಿಯವರು(Indira Gandhi) ದೇಶದಲ್ಲಿ ರಾಜಧನ ರದ್ದು ಕಾನೂನು ಜಾರಿಗೆ ತರುತ್ತಾರೆ. ಆ ಕಾನೂನಿನ ಪ್ರಕಾರ, ಮಹಾರಾಜ ಜಯಚಾಮರಾಜ ಒಡೆಯರ್ ಅವರು ಕೂಡ ಸಾಮಾನ್ಯ ನಾಗರಿಕರಾಗುತ್ತಾರೆ.
ಆ ಕ್ಷಣದಿಂದಲೇ ಭಾರತದಲ್ಲಿ ‘ರಾಜ’ ಎನ್ನುವ ಹುದ್ದೆ ರದ್ದುಗೊಳ್ಳುತ್ತದೆ. ಇದರ ನಂತರ 1970ರ ಅಕ್ಟೋಬರ್ ತಿಂಗಳಿನಲ್ಲಿ ಮೈಸೂರಿನಲ್ಲಿ ಮತ್ತೆ ದಸರಾ ಕಳೆ.

ಆದರೆ ಈ ಬಾರಿ ಜಯಚಾಮರಾಜ ಒಡೆಯರ್ ಅವರು ದರ್ಬಾರ್ ಹಾಲ್ನಲ್ಲಿ ಕುಳಿತುಕೊಳ್ಳುವುದಿಲ್ಲ ಎಂದು ನಿರ್ಧರಿಸಿದ್ದರು.
ಅದರ ಬದಲು ತಮ್ಮ ಪಟ್ಟದ ಕತ್ತಿಯನ್ನೇ ಸಿಂಹಾಸನದ ಮೇಲಿಟ್ಟು ಪೂಜಿಸುತ್ತಾರೆ. ಅಂಬಾರಿಯ ಮೇಲೆ ಕುಳಿತುಕೊಳ್ಳದೇ, ಕಾರಿನಲ್ಲಿ ಬನ್ನಿ ಮಂಟಪಕ್ಕೆ ಹೋಗಿ ಪೂಜೆ ಮಾಡಲು ನಿರ್ಧರಿಸುತ್ತಾರೆ.
ಇದನ್ನೂ ಓದಿ : https://vijayatimes.com/arvind-bellad-letter-to-cm/
ಆದರೆ, ಇದರಿಂದ ಮೈಸೂರಿನ ಜನತೆ ದಿಗ್ಭ್ರಮೆಗೊಳ್ಳುತ್ತಾರೆ. ಏಕೆಂದರೆ, ಅವರು ಎಂತಹ ಪರಿಸ್ಥಿತಿಯಲ್ಲಿಯೂ ದಸರಾ ಹಬ್ಬವನ್ನ ನಿಲ್ಲಿಸಿರಲಿಲ್ಲ.
ಹಾಗಾಗಿ, ಮಹಾರಾಜರ ಆಪ್ತ, ಅಭಿಮಾನಿ ಹಾಗೂ ಕನ್ನಡ ಹೋರಾಟಗಾರರಾಗಿದ್ದ ನಾಗಲಿಂಗ ಸ್ವಾಮಿ ಎಂಬುವರು ತಾವೇ ಮುಂದೆ ನಿಂತು ದಸರಾ ಹಬ್ಬದ ಆಚರಣೆಗೆ ಸಿದ್ಧತೆ ನಡೆಸುತ್ತಾರೆ.

ರಾಜರಿಲ್ಲದ ಆ ವರ್ಷ ಮೈಸೂರಿನ ಪ್ರಜ್ಞಾವಂತ ನಾಗರಿಕರೇ ದಸರಾ ಆಚರಿಸುತ್ತಾರೆ. ಮೈಸೂರಿನ ಕನ್ನಡ ಹೋರಾಟಗಾರರು, ಯುವಕರು ಸೇರಿಕೊಂಡು ದಸರಾ ಉತ್ಸವಕ್ಕೆ ಸಿದ್ಧತೆ ನಡೆಸಿದ್ದರು.
ಜಂಬೂ ಸವಾರಿಗೆ(Jamboo Savari) ಬೇಕಾದ ಆನೆ, ಅಂಬಾರಿ ಎಲ್ಲವನ್ನೂ ಸಿದ್ಧಗೊಳಿಸಿದ್ದರು, ಆದರೆ ಅಂಬಾರಿಯ ಮೇಲೆ ಯಾರು ಕುಳಿತುಕೊಳ್ಳುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರ ಇರಲಿಲ್ಲ.
ಆಗ ನಾಗಲಿಂಗಸ್ವಾಮಿಯವರ ನೇತೃತ್ವದಲ್ಲಿ ಹೋರಾಟಗಾರರೆಲ್ಲಾ ಸಭೆ ನಡೆಸುತ್ತಾರೆ. ಚರ್ಚೆಯ ಬಳಿಕ ಅಲ್ಲಿ ತಾಯಿ ಭುವನೇಶ್ವರಿಯ ಫೋಟೋವನ್ನಿಟ್ಟು ಮೆರವಣಿಗೆ ನಡೆಸಲು ಒಮ್ಮತದ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ.
ಹೀಗೆ, ಎರಡು ವರ್ಷಗಳ ಕಾಲ ಜನರೇ ಸೇರಿ ದಸರಾ ಹಬ್ಬವನ್ನ ಅದ್ಧೂರಿಯಾಗಿ ಆಚರಿಸಿದ್ದರು.

ನಂತರ, 1972ರಲ್ಲಿ ಮೈಸೂರಿನವರೇ ಆದಂತಹ ದೇವರಾಜ ಅರಸು ಅವರು ನಾಡಿನ ಮುಖ್ಯಮಂತ್ರಿಯಾಗಿದ್ದರು. ಇವರು 1972ರಲ್ಲಿ ದಸರಾ ಹಬ್ಬವನ್ನ ಅಧಿಕೃತವಾಗಿ ನಾಡಹಬ್ಬ ಎಂದು ಘೋಷಿಸುತ್ತಾರೆ.
ತಾಯಿ ಚಾಮುಂಡೇಶ್ವರಿಯನ್ನ ಅಂಬಾರಿಯಲ್ಲಿ ಕೂರಿಸಿ ಮೆರವಣಿಗೆ ಮಾಡುವ ಸಂಪ್ರದಾಯವನ್ನ ಆರಂಭಿಸುತ್ತಾರೆ.
ಇದನ್ನೂ ಓದಿ : https://vijayatimes.com/supremecourt-about-hate-speech/
ಅಂದಿನಿಂದ ಇಂದಿನವರೆಗೂ ನಾಡಹಬ್ಬ ದಸರಾ ಯಾವುದೇ ಗೊಂದಲಗಳಿಲ್ಲದೇ ನಡೆದುಕೊಂಡು ಬಂದಿದೆ. ಮಹಾರಾಜರು ಅರಮನೆಯಲ್ಲಿ ಖಾಸಗಿ ದರ್ಬಾರ್ ನಡೆಸುವ ಮೂಲಕ ಪರಂಪರೆಯನ್ನ ಮುಂದುವರೆಸಿದ್ದಾರೆ. ಹೀಗೆ, ಪ್ರತೀ ವರ್ಷವೂ ಮೈಸೂರು ದಸರಾ ತನ್ನ ವೈಭವವನ್ನ ಜಗತ್ತಿಗೆ ಸಾರುತ್ತಿದೆ.
- ಪವಿತ್ರ