ಶುಲ್ಕ ವಸೂಲಾತಿ ಮಾಡಲು ಶಾಲೆಗಳಿಗೆ ಮುಕ್ತ ಅವಕಾಶ

ನವದೆಹಲಿ ಅ 16 : ನಿಗದಿತ ಸಮಯದಲ್ಲಿ ಪೋಷಕರಿಂದ ಪಾವತಿ ಆಗದ ಶುಲ್ಕ ವಸೂಲಿ ಸಂಬಂಧ  ಕ್ರಮ ಕೈಗೊಳ್ಳಲು ಶಾಲ ಆಡಳಿತ ಮಂಡಳಿಗಳು ಮುಕ್ತವಾಗಿವೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ಕಳೆದ ಮೇ 20ರಂದು ನೀಡಿದ ತೀರ್ಪಿನಲ್ಲಿ ಉಲ್ಲೇಖಿಸಿದ ನ್ಯಾಯಾಲಯ ಕಂತು ಪಾವತಿಯ ಗಡುವು ಬಹಳ ಹಿಂದೆಯೇ ಮುಗಿದಿದ್ದರೂ ಪೋಷಕರು, ಪಾಲಕರು ಇನ್ನೂ ಹಣ ಪಾವತಿಸಿಲ್ಲ ಹಾಗೂ ಮರುಪಾವತಿಗೆ ವಿಫಲರಾಗಿದ್ದಾರೆ ಎಂದು ಶಾಲೆಗಳು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಪಿ.ಎಂ ಖಾನ್ಸಿಲ್ಕರ್ ಮತ್ತು ಸಿ.ಟಿ ರವಿಕುಮಾರ್‌ ಅವರಿದ್ದ ಪೀಠ ಅದೇಶ ನೀಡಿದೆ.

ಇನ್ನೂ ಪಾವತಿಯಾಗದ ಬಾಕಿ ಹಣ ವಸೂಲು ಮಾಡಲು ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲು ಶಾಲಾ ಆಡಳಿತ ಮುಕ್ತವಾಗಿವೆ. ಅದೇ ವೇಳೆ ಸಂಬಂಧಪಟ್ಟ ಪೋಷಕರು, ಪಾಲಕರು ನಿಜವಾಗಿಯೂ ವಿನಾಯಿತಿ ಬಯಸಿದರೆ ಅಂತಹ ಮನವಿಯನ್ನು ಸಹಾನುಭೂತಿಯಿಂದ ಪರಿಗಣಿಸಲು ಶಾಲಾಡಳಿತ ಮುಕ್ತವಾಗಿದೆ. ಇದರ ಹೊರತಾಗಿ ಹೆಚ್ಚೇನನ್ನೂ ಹೇಳಬೇಕಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

ಕಂತಿನ ಮೂಲಕ ಹಣ ಪಾವತಿಸುವ ಗಡುವು ಮುಕ್ತಾಯಗೊಂಡರೂ ಶುಲ್ಕ ಪಾವತಿಯಿಂದ ಪೋಷಕರ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.

Latest News

ಮಾಹಿತಿ

ಕಿಡ್ನಿ ಸ್ಟೋನ್‌ ಸಮಸ್ಯೆಗೆ ಇಲ್ಲಿದೆ ನೈಸರ್ಗಿಕ ಪರಿಹಾರ ; ಈ ಸರಳ ಪರಿಹಾರ ಪಾಲಿಸಿ

ಕೆಲವು ಮನೆಮದ್ದುಗಳು(Home Remedies) ಆರಂಭಿಕ ಹಂತದ ಕಿಡ್ನಿಸ್ಟೋನ್ ಸಮಸ್ಯೆಗೆ ಪರಿಹಾರ ನೀಡುತ್ತವೆ. ಅಂತಹ ಮನೆಮದ್ದುಗಳ ವಿವರ ಇಲ್ಲಿದೆ ನೋಡಿ.

ಮಾಹಿತಿ

ದೇಹಕ್ಕೆ ಪ್ರೋಟಿನ್‌ ಕೊರತೆಯಾದ್ರೆ `ಈ’ 10 ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ

ಯುವಜನರ ದೈಹಿಕ ಬೆಳವಣಿಗೆಯಲ್ಲಿ ಪ್ರೋಟಿನ್‌ ಪ್ರಮುಖ ಪಾತ್ರ ವಹಿಸುತ್ತದೆ. ದೇಹದಲ್ಲಿನ ಸ್ನಾಯುಗಳು, ಕಿಣ್ವಗಳು ಮತ್ತು ಹಾರ್ಮೋನುಗಳಿಗೆ ಪ್ರೋಟಿನ್ ಅತ್ಯಂತ ಅವಶ್ಯಕವಾಗಿದೆ.

ಮಾಹಿತಿ

ITR ಸಲ್ಲಿಕೆ ಗಡುವು ಜುಲೈ 31 ಅಂತ್ಯ ; ದಂಡ ಶುಲ್ಕವಿಲ್ಲದೆ ಯಾರೆಲ್ಲಾ ITR ಸಲ್ಲಿಸಬಹುದು ಗೊತ್ತಾ?

ಗಡುವು ಮುಗಿದರೂ ಯಾರೆಲ್ಲ ದಂಡ ಶುಲ್ಕವಿಲ್ಲದೆ ಐಟಿಆರ್‌ ಸಲ್ಲಿಸಬಹುದು, ಇದಕ್ಕೆ ಸಂಬಂಧಿಸಿದಂತೆ ನಿಯಮ ಏನು ಹೇಳುತ್ತದೆ ಎನ್ನುವ ವಿವರ ಇಲ್ಲಿದೆ. ಮುಂದೆ ಓದಿ,