ದೇಶ ಭಕ್ತಿ ಪರಿಕಲ್ಪನೆಯಡಿ ಲಾವಾ ಕಂಪನಿ ತನ್ನ ಮಾರುಕಟ್ಟೆಯನ್ನು ವಿಸ್ತರಿಸಲು ನಿರ್ಧರಿಸಿದೆ. ದೇಶ ಭಕ್ತಿಯ ಅಸ್ತ್ರವನ್ನು ಬಳಸಿ ತನ್ನ ಕಂಪನಿಯ ಲಾವಾ ಅಗ್ನಿ ಫೈವ್ ಜಿ ಸ್ಮಾರ್ಟ್ಫೋನ್ಗಳನ್ನು ಮಾರಾಟ ಮಾಡಲು ಮುಂದಾಗಿದೆ. ಚೀನಾ ಮೊಬೈಲ್ ಕಂಪನಿಯ ನಿರ್ದಿಷ್ಟ ಬ್ರ್ಯಾಂಡ್ನ ಸ್ಮಾರ್ಟ್ ಫೋನ್ ಹೊಂದಿರುವವರು ಉಚಿತವಾಗಿಯೇ ತಮ್ಮ ಈ ಚೀನಾ ಫೋನ್ಗಳನ್ನು ಲಾವಾ ಅಗ್ನಿ 5ಜಿಯೊಂದಿಗೆ ವಿನಿಮಯ ಮಾಡಿಕೊಳ್ಳಬಹುದಾಗಿದೆ. ಇದೊಂದು ಹೊಸ ರೀತಿಯ ಮಾರ್ಕೆಟಿಂಗ್ ವಿಧಾನವಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟಿಗೆ ಸುದ್ದಿಯಾಗುತ್ತಿದೆ.
ನೀವು ಉಚಿತವಾಗಿ ಲಾವಾ 5 ಜಿ ಸ್ಮಾರ್ಟ್ಫೋನ್ ಪಡೆಯಬೇಕು ಅಂತಿದ್ದರೆ ಇದಕ್ಕಾಗಿ ನಿಮ್ಮ ಬಳಿ ಒಂದು ನಿರ್ದಿಷ್ಟವಾದ ಸ್ಮಾರ್ಟ್ಫೋನ್ ಇರಬೇಕು. ರಿಯಲ್ ಮಿ ಕಂಪನಿಯ ರಿಯಲ್ ಮೀ 8 ಎಸ್ ಸ್ಮಾರ್ಟ್ಫೋನ್ ಹೊಂದಿರುವವರಿಗೆ ಲಾವಾ ಅಗ್ನಿ 5 ಜಿ ಮೊಬೈಲ್ ಫೋನ್ ಉಚಿತ ವಿನಿಮಯಕ್ಕೆ ಸಿಗಲಿದೆ. ಇದಕ್ಕಾಗಿ ನೀವು ಲಾವಾ ಮೊಬೈಲ್ಸ್ನಲ್ಲಿ ಜನವರಿ 7 ನೇ ತಾರೀಖಿನ ಒಳಗಾಗಿ ನೋಂದಣಿ ಮಾಡಿಕೊಳ್ಳಬೇಕು.
ಭಾರತದ ಮೊದಲ 5ಜಿ ಸ್ಮಾರ್ಟ್ ಫೋನ್ ಎಂದು ಹೇಳಿಕೊಂಡಿರುವ ಲಾವಾ ಕಂಪನಿಯು ಭಾರತ ನನ್ನ ದೇಶ. ಆದರೆ ನನ್ನ ಸ್ಮಾರ್ಟ್ ಫೋನ್ ಚೈನೀಸ್ ಆಗಿದೆ ಎಂದ ಘೋಷ ವಾಕ್ಯದ ಮೂಲಕ ಈ ರೀತಿ ಸ್ಮಾರ್ಟ್ ಫೋನ್ ವಿನಿಮಯಕ್ಕೆ ಮುಂದಾಗಿದೆ.
ಮ್ಯಾಟ್ ಫಿನಿಶ್ ಅನ್ನು ಹೊಂದಿರುವ ಲಾವಾ ಅಗ್ನಿ 5ಜಿ ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 810 SoC ಯಿಂದ 8GB RAM ಮತ್ತು 128GB ಮೆಮೊರಿ ಹೊಂದಿದೆ. ಇದರಲ್ಲಿ ನೀವು 256 ಜಿಬಿಯವೆರೆಗೆ ಹೆಚ್ಚುವರಿ ಸಂಗ್ರಹಣೆಯನ್ನೂ ಮಾಡಬಹುದು. 6.78-ಇಂಚಿನ ಪೂರ್ಣ-HD+ ಡಿಸ್ಪ್ಲೇಯ ಹಾಗೂ ಗೊರಿಲ್ಲಾ ಗ್ಲಾಸ್ 3 ರಕ್ಷಣೆಯನ್ನು ಹೊಂದಿದೆ ಎಂದು ಕಂಪನಿ ಮಾಹಿತಿನೀಡಿದೆ