Saudi Arabia : ಹೆಚ್ಚಿನವರಿಗೆ ಸೌದಿ ಅರೇಬಿಯಾದ(Laws Of Saudi Arabia) ಇತಿಹಾಸ, ಪದ್ಧತಿಗಳು ಮತ್ತು ಸಾಂಸ್ಕೃತಿಕ ಹಿನ್ನೆಲೆ ಹಾಗೂ ರಾಜಕೀಯದ ಬಗ್ಗೆ ಮಾಹಿತಿಯಿರುತ್ತದೆ. ಆದರೆ ಸೌದಿ ಅರೇಬಿಯಾದ ಬಗ್ಗೆ ನಿಮಗೆ ಬಹುಶಃ ಕೆಲವು ವಿಷಯಗಳ ಬಗ್ಗೆ ತಿಳಿದಿರಲಿಕ್ಕಿಲ್ಲ. ಈ ದೇಶದ ಬಗ್ಗೆ ನಿಮಗೆ ಗೊತ್ತಿಲ್ಲದ ಕೆಲವು ವಿಲಕ್ಷಣ ಸಂಗತಿಗಳ ಬಗ್ಗೆ ಇಲ್ಲಿದೆ ಮಾಹಿತಿ.

ಸೌದಿ ಅರೇಬಿಯಾವು ಒಟ್ಟು ವಿಸ್ತೀರ್ಣವು 83,000 ಚದರ ಮೈಲುಗಳು ಎಂದರೆ 2,149,690 ಚದರ ಕಿ.ಮೀ ಆಗಿದೆ. ಇದು ವಿಶ್ವದ 13ನೇ ಅತಿದೊಡ್ಡ ರಾಷ್ಟ್ರವಾಗಿದೆ,
ಇದು ಮಧ್ಯಪ್ರಾಚ್ಯದಲ್ಲಿ ಪಶ್ಚಿಮ ಯೂರೋಪ್ನ(West Europe) ಗಾತ್ರ ಮತ್ತು ಅಮೆರಿಕದ ಕಾಲು ಭಾಗದಷ್ಟು ದೊಡ್ಡ ದೇಶವಾಗಿದೆ.
https://youtu.be/xlyZxOLBckY ಇದು ಗಂಧದ ಗುಡಿ ಅಲ್ಲ ದೇವರ ಗುಡಿ
ಪ್ರತಿ ಜನಸಂಖ್ಯೆಯ ಮರಣದ ಆಧಾರದ ಮೇಲೆ, 2000ರಲ್ಲಿ ವಿಶ್ವ ಬ್ಯಾಂಕ್ ವರದಿಯು ಸೌದಿ ಅರೇಬಿಯಾ (Laws Of Saudi Arabia)ಜೊತೆಗೆ ಮಲೇಷ್ಯಾ, ಥೈಲ್ಯಾಂಡ್ ಮತ್ತು ದಕ್ಷಿಣ ಆಫ್ರಿಕಾವು ವಾಹನ ಚಲಾಯಿಸಲು ಅತ್ಯಂತ ಅಪಾಯಕಾರಿ ದೇಶಗಳಾಗಿವೆ ಎಂದು ತಿಳಿಸಿದೆ.
ವಾಹನ ಅಪಘಾತಗಳಿಂದ ಸಾವನ್ನಪ್ಪುವವರ ಸಂಖ್ಯೆಯಲ್ಲಿ ಸೌದಿ ಅರೇಬಿಯಾ ಅನೇಕ ದೇಶಗಳಿಂತ ಮುಂದಿದೆ. ಎಂದರೆ ಇಲ್ಲಿ ಅಪಘಾತಗಳಲ್ಲಿ ಸಾವನ್ನಪ್ಪುವವರ ಸಂಖ್ಯೆ ಇಂದಿಗೂ ಕಡಿಮೆಯಾಗಿಲ್ಲವಂತೆ.
ಇದನ್ನೂ ಓದಿ : https://vijayatimes.com/vladimir-putin-likes-pm/
ಸೌದಿ ರಾಜನ ಅಧಿಕೃತ ಶೀರ್ಷಿಕೆ ‘ಎರಡು ಪವಿತ್ರ ಮಸೀದಿಗಳ ಪಾಲಕ’ ಎಂದು. ಕಿಂಗ್ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅಲ್ ಸೌದ್ ಅವರು ಜನವರಿ 2015ರಿಂದ ಈ ದೇಶದ ರಾಜರಾಗಿ ಆಳ್ವಿಕೆ ನಡೆಸುತ್ತಿದ್ದಾರೆ.
ಸೌದಿ ಅರೇಬಿಯಾದ ಕಿಂಗ್ಡಮ್ ಟವರ್ನ ನಿರ್ಮಾಣವು 2014ರಲ್ಲಿ ಪ್ರಾರಂಭವಾಯಿತು.
ವಿಶ್ವದ ಹೊಸ, ಎತ್ತರದ ಕಟ್ಟಡವು 3,280 ಅಡಿ ಎತ್ತರವಾಗಿದ್ದು ದುಬೈನಲ್ಲಿರುವ 600 ಅಡಿ ಎತ್ತರದ ಬುರ್ಜ್ ಖಲೀಫಾ ಹೋಟೆಲ್ ಅನ್ನು ಮೀರಿಸುತ್ತದೆ.

2012ರಲ್ಲಿ ಸೌದಿ ಅರೇಬಿಯಾ ಸರ್ಕಾರಿ ಕಚೇರಿಗಳು ಮತ್ತು ಹೆಚ್ಚಿನ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನವನ್ನು ನಿಷೇಧಿಸಿತು. ಇದರಲ್ಲಿ ಶಿಶಾಸ್ ನಿಷೇಧ ಸಹ ಒಳಗೊಂಡಿರುತ್ತದೆ.
ಇದಲ್ಲದೆ ಅಪ್ರಾಪ್ತ ವಯಸ್ಕರಿಗೆ ತಂಬಾಕು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ.
https://fb.watch/gricY6bzEH/ ಇದು ಗಂಧದ ಗುಡಿ ಅಲ್ಲ ದೇವರ ಗುಡಿ
ಸೌದಿಯ ಅಂಕಿ ಅಂಶಗಳ ಪ್ರಕಾರ ಈ ದೇಶವು ವಿಶ್ವದ 4ನೇ ಅತಿ ದೊಡ್ಡ ತಂಬಾಕು ಆಮದುದಾರ ಎಂದು ಹೇಳಲಾಗಿದೆ.
ಸೌದಿಗಳು ದಿನಕ್ಕೆ ಸುಮಾರು 8 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತ ಹಣವನ್ನು ಸಿಗರೇಟ್ಗಳಿಗಾಗಿ ಖರ್ಚು ಮಾಡುತ್ತಾರೆ ಎಂದು ವರದಿಯೊಂದು ತಿಳಿಸಿದೆ.
- ಪವಿತ್ರ